ಸುತ್ತ-ಮುತ್ತ

NWF ಕರ್ನಾಟಕ ರಾಜ್ಯಾಧ್ಯಕ್ಷೆಯಾಗಿ ಝೀನತ್ ಬಂಟ್ವಾಳ ಅಯ್ಕೆ

ನ್ಯಾಷನಲ್ ವುಮೆನ್ಸ್ ಫ್ರಂಟ್ ನ (NWF) ನೂತನ ರಾಜ್ಯಾಧ್ಯಕ್ಷೆಯಾಗಿ ಝೀನತ್ ಬಂಟ್ವಾಳ ಅಯ್ಕೆಯಾಗಿದ್ದಾರೆ. ಡಿಸೆಂಬರ್ 8-9ರಂದು ಮಿತ್ತೂರಿನ ಫ್ರೀಡಂ ಕಮ್ಯೂನಿಟಿ ಹಾಲ್ ನಲ್ಲಿ ಜರಗಿದ ರಾಜ್ಯ ಪ್ರತಿನಿಧಿ ಸಭೆಯಲ್ಲಿ ನಡೆದ ಮುಂದಿನ ಎರಡು ವರ್ಷಗಳ ಅವಧಿಗಾಗಿರುವ ಸಂಘಟನೆಯ ರಾಜ್ಯ ಪದಾಧಿಕಾರಿಗಳ ಚುನಾವಣೆಯಲ್ಲಿ ಈ ಆಯ್ಕೆ ನಡೆಯಿತು. ಉಪಾಧ್ಯಕ್ಷರಾಗಿ ಶಬಾನ ಶರೀಫ್ ಬೆಂಗಳೂರು, ಪ್ರಧಾನ ಕಾರ್ಯದರ್ಶಿಯಾಗಿ ತಬಸ್ಸುಮ್ ಅರಾ ತುಮಕೂರು, ಜೊತೆ ಕಾರ್ಯದರ್ಶಿಯಾಗಿ ನಸೀಮಾ ಬೆಂಗಳೂರು, ಕೋಶಾಧಿಕಾರಿಯಾಗಿ ನುಸ್’ಹತ್ ಫಾತಿಮಾ ಯಾದಗಿರ್ ಆಯ್ಕೆಯಾದರು.

ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯೆಯರಾಗಿ ಅಲ್’ಮಾಸ್ ಬಾನು ಬೆಂಗಳೂರು, ಝರೀನಾ ಮೈಸೂರು, ಫರ್ಝಾನ ಮುಹಮ್ಮದ್ ಮಂಗಳೂರು, ಫಾತಿಮಾ ನಸೀಮಾ ಮಂಗಳೂರು. ಸಯೀದಾ ಯೂಸೂಫ್ ಮಂಗಳೂರು, ಅಯಿಶಾ ಮುಹಮ್ಮದಿ ಬೆಂಗಳೂರು ಆಯ್ಕೆಯಾದರು.
ಸಭೆಯ ಅಧ್ಯಕ್ಷತೆಯನ್ನು ನಿಕಟಪೂರ್ವ ರಾಜ್ಯಾಧ್ಯಕ್ಷೆ ಫಾತಿಮಾ ನಸೀಮಾ ವಹಿಸಿದ್ದರು. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಲುಬ್ನಾ ಮಿನ್ ಹಾಝ್ ಉದ್ಘಾಟಿಸಿದರು. ಸಭೆಯಲ್ಲಿ ನಿಕಟಪೂರ್ವ ರಾಜ್ಯ ಪ್ರಧಾನ ಕಾರ್ಯದರ್ಶಿ ಸಯೀದಾ ಯೂಸುಫ್ ರವರು 2018ರ ಸಾಲಿನ ಸಂಘಟನಾ ಚಟುವಟಿಕೆಗಳ ವರದಿಯನ್ನು ಮಂಡಿಸಿದರು

To Top
error: Content is protected !!
WhatsApp chat Join our WhatsApp group