ರಾಷ್ಟ್ರೀಯ ಸುದ್ದಿ

ಬಿಜೆಪಿಯನ್ನು ಸೋಲಿಸಲು ಎಚ್ಚೆತ್ತ ಮಹಾಮೈತ್ರಿ ಕೂಟ; ಇಂದು ದೆಹಲಿಯಲ್ಲಿ ಮೊದಲ ಸಭೆ

ವರದಿಗಾರ (ಡಿ.10): ಕಳೆದ ಲೋಕಸಭಾ ಚುನಾವಣೆಯಲ್ಲಿ ಭರವಸೆಗಳ ಮಹಾಪೂರಗಳನ್ನೇ ಹರಿಸಿ ಜನರ ವಿಶ್ವಾಸ ಗಳಿಸಲು ಯಶಸ್ವಿಯಾಗಿದ್ದ ಬಿಜೆಪಿಯು ಅಧಿಕಾರದ ಗದ್ದುಗೆಗೆ ಏರಿತ್ತು. ಆದರೆ ಭರವಸೆಗಳೆಲ್ಲವೂ ಚುನಾವಣಾ ಪೂರ್ವಕ್ಕೆ ಮಾತ್ರ ಸೀಮಿತವಾಗಿರುವುದು ಖೇಧಕರ. ದೇಶದಲ್ಲೆಡೆ ಬಿಜೆಪಿ ವಿರೋಧಿ ಅಲೆಯನ್ನು ಬಳಸಿಕೊಸಿಕೊಳ್ಳಲು ಪ್ರಯತ್ನಿಸಿರುವ ಇತರ ಪಕ್ಷಗಳು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಉದ್ದೇಶಗಳೊಂದಿಗೆ ಎಚ್ಚೆತ್ತುಕೊಂಡು ಮಹಾಮೈತ್ರಿಯನ್ನು ಸ್ಥಾಪಿಸಿಕೊಂಡಿದೆ. ಮಹಾಮೈತ್ರಿ ಸ್ಥಾಪನೆಗೊಂಡಂತೆಯೇ ಜನಪರ ಆಡಳಿತ ನೀಡುವಲ್ಲಿ ಯಶಸ್ವಿಯಾಗದ ಬಿಜೆಪಿ ಪಾಲಾಯದಲ್ಲಿ ನಡುಕ ಆವರಿಸಿಕೊಂಡಿದೆ. ಹೇಳಿಕೊಳ್ಳುವ ಅಭಿವೃದ್ಧಿ ತನ್ನಲ್ಲಿಲ್ಲ ಅದಕ್ಕಾಗಿ ರಾಮಮಂದಿರವೆಂಬ ವಿವಾದವನ್ನು ಸೃಷ್ಟಿಸಿ ಭಾವನಾತ್ಮಕವಾಗಿ ಬಿಜೆಪಿ ಪ್ರಚೋದಿಸುತ್ತಿದೆ ಎಂದು ವಿಪಕ್ಷಗಳು ಬಲವಾಗಿ ಆರೋಪ ಹೊರಿಸಿತ್ತು. ಬಿಜೆಪಿಯ ಸೋಲಿಸಲು ಎಚ್ಚೆತ್ತ ಮಹಾಮೈತ್ರಿ ಯ ಪ್ರಪ್ರಥಮ ಸಭೆ ದೆಹಲಿಯಲ್ಲಿ ಇಂದು ನಡೆಯಲಿದ್ದು ಮುಂಬರುವ ಚುನಾವಣೆಗೆ ತಂತ್ರ ರೂಪಿಸಲಿದೆ ಎಂದು ಮೂಲಗಳು ವರದಿ ಮಾಡಿವೆ. ಐದು ರಾಜ್ಯಗಳ ಚುನಾವಣಾ ಫಲಿತಾಂಶ ಬರುವುದಕ್ಕೂ ಮೊದಲೇ ವಿಪಕ್ಷ ನಾಯಕರು ಭೇಟಿ ಸಭೆ ನಡೆಸುತ್ತಿದ್ದಾರೆ.

ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಸಭೆಯ ನೇತೃತ್ವದಲ್ಲಿ ಮಹಾಮೈತ್ರಿ ಸಭೆ ನಡೆಯಲಿದ್ದು, ಮಾಜಿ ಪ್ರಧಾನಿ ಜೆಡಿಎಸ್​ ಹಿರಿಯ ನಾಯಕ ಹೆಚ್​.ಡಿ.ದೇವೇಗೌಡ, ತೃಣಮೂಲ ಕಾಂಗ್ರೆಸ್​​ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್, ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್, ಶರದ್ ಯಾದವ್ ಹಾಗೂ ಇನ್ನಿತರ ಘಟಾನುಘಟಿ ನಾಯಕರು ಭಾಗವಹಿಸಲಿದ್ದಾರೆ.

ಈ ಮೊದಲು ಮಹಾಮೈತ್ರಿಕೂಟಕ್ಕೆ ಅರವಿಂದ್​​ ಕೇಜ್ರಿವಾಲ್​ ಬೆಂಬಲ ಸೂಚಿಸಿ, ನಂತರ ಬೆಂಬಲ ಹಿಂಪಡೆದಿದ್ದರು. ಅಚ್ಚರಿ ಎಂದರೆ, ಇಂದು ನಡೆಯುವ ಮಹಾಮೈತ್ರಿ ಸಭೆಯಲ್ಲಿ ಕೇಜ್ರಿವಾಲ್​ ಕೂಡ ಪಾಲ್ಗೊಳ್ಳುವ ಸಾಧ್ಯತೆ ಇದೆಯೆಂದು ಹೇಳಲಾಗಿದೆ. ಹೆಚ್​.ಡಿ. ಕುಮಾರಸ್ವಾಮಿ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವಾಗ ಕೇಜ್ರಿವಾಲ್​ ಕೂಡ ಹಾಜರಿ ಹಾಕಿದ್ದರು. ಈ ಭೇಟಿ ವೇಳೆ 2019ರ ಮಹಾಮೈತ್ರಿ ಬಗ್ಗೆ ಚರ್ಚೆ ನಡೆದಿತ್ತು ಎನ್ನಲಾಗಿದೆ. ನಂತರ, ಕೇಜ್ರಿವಾಲ್​ ಈ ವಿಚಾರವಾಗಿ ಯಾವುದೇ ಪಕ್ಷದ ನಾಯಕರ ಜೊತೆ ಮಾತುಕತೆ ನಡೆಸಿರಲಿಲ್ಲ. ಇಂದಿನ ಸಭೆಯಲ್ಲಿ ಅವರು ಪಾಲ್ಗೊಳ್ಳುತ್ತಿರುವುದು ಕುತೂಹಲ ಮೂಡಿಸಿದ್ದು ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

 

To Top
error: Content is protected !!
WhatsApp chat Join our WhatsApp group