ಹನಿ ಸುದ್ದಿ

ಕೇಂದ್ರ ಸಚಿವ ರಾಮ್ ದಾಸ್ ಗೆ ಕಪಾಳಮೋಕ್ಷ

ವರದಿಗಾರ (ಡಿ.9): ಥಾಣೆಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಕೇಂದ್ರ ಸಚಿವ ರಾಮ್ ದಾಸ್ ಅಠಾವಳೆಯವರಿಗೆ ಯುವಕರ ತಂಡವೊಂದು ಕಪಾಳಮೋಕ್ಷ ಮಾಡಿರುವ ಘಟನೆ ನಿನ್ನೆ ನಡೆದಿದೆ.

ಕಾರ್ಯಕ್ರಮದಲ್ಲಿ ಭಾಗವಹಿಸಿ ಸಚಿವರು ಸಾರ್ವಜನಿಕರತ್ತ ಬಂದಾಗ ಯುವರಕಲ್ಲಿದ್ದ ಆರೋಪಿ ಒಮ್ಮಿಂದೊಮ್ಮೆಲೆ ಅವರತ್ತ ಧಾವಿಸಿ ಕಪಾಳಮೋಕ್ಷ ಮಾಡಿ, ದೂಡಿ ಹಾಕಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಕೂಡಲೇ ಭದ್ರತಾ ಸಿಬ್ಬಂದಿ ಆತನನ್ನು ಹಿಡಿದುಕೊಂಡಿದ್ದಾರೆ. ದಾಳಿಯ ಹಿಂದಿನ ಉದ್ದೇಶವೇನು ಎನ್ನುವುದು ಇನ್ನೂ ತಿಳಿದು ಬಂದಿಲ್ಲವಾದರೂ ಹಲ್ಲೆ ನಡೆಸಿದ ವ್ಯಕ್ತಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಕಾರ್ಯಕರ್ತ ಎಂದು ವರದಿಯಾಗಿದೆ.

To Top
error: Content is protected !!
WhatsApp chat Join our WhatsApp group