ಅನಿವಾಸಿ ಕನ್ನಡಿಗರ ವಿಶೇಷ

ಇಂಡಿಯನ್ ಸೋಶಿಯಲ್ ಫೋರಂ ರಿಯಾದ್ ವತಿಯಿಂದ ಸಾರ್ವಜನಿಕ ಸಭೆ

ರಿಯಾದ್ : “ಬಾಬರಿ ಮಸ್ಜಿದ್ ಮರಳಿ ಪಡೆಯೋಣ, ಭಾರತವನ್ನು ಮರಳಿ ಗಳಿಸೋಣ” ಎಂಬ ಘೋಷಣೆಯಡಿಯಲ್ಲಿ ಇಂಡಿಯನ್ ಸೋಶಿಯಲ್ ಫಾರಂ, ರಿಯಾದ್ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ಸಾರ್ವಜನಿಕ ಕಾರ್ಯಕ್ರಮವನ್ನು ರಿಯಾದ್ ನ ಪಾರಗಾನ್ ರೆಸ್ಟೋರೆಂಟ್ ಸಭಾಂಗಣದಲ್ಲಿ ಆಯೋಜಿಸಿತು. ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಇಂಡಿಯಾ ಫ್ರೆಟರ್ನಿಟಿ ಫೋರಂ ಸೌದಿ ಅರೇಬಿಯಾ ಝೋನಲ್ ಅಧ್ಯಕ್ಷರಾದ ಬಶೀರ್ ಇಂಗಾಪುಝ ಬಾಬ್ರಿ ಮಸೀದಿಯ ದ್ವಂಸವು ಸಂವಿಧಾನದ ನಾಶವಾಗಿದೆ ಮತ್ತು ಭಾರತೀಯ ಮುಸ್ಲಿಮರು ಸಂವಿಧಾನದ ಮೇಲೆ ನಂಬಿಕೆಯುಳ್ಳ ವರಾಗಿದ್ದು, ಸುಪ್ರೀಂ ಕೋರ್ಟಿನ ತೀರ್ಪು ಬರುವವರೆಗೆ ಕಾಯಬೇಕಾಗಿದೆ ಎಂದು ವಿವರಿಸಿದರು.


ಕಾರ್ಯಕ್ರಮದ ದಿಕ್ಸೂಚಿ ಭಾಷಣಕಾರರಾಗಿ ಮಾತಾಡಿದ ಇಂಡಿಯನ್ ಸೋಶಿಯಲ್ ಫೋರಂ ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾದ ಮೊಹಮ್ಮದ್ ನವೀದ್ ಬಾಬರಿ ಮಸ್ಜಿದ್ ದ್ವಂಸದ ಮೂಲಕ ಫ್ಯಾಸಿಸ್ಟ್ ಶಕ್ತಿಗಳು ಧರ್ಮದ ಧ್ರುವೀಕರಣ ಮಾಡುತ್ತಾ ಹೊಸ ರಾಜಕೀಯ ಇತಿಹಾಸವನ್ನು ನಿರ್ಮಿಸಿ ಬಹುಸಂಖ್ಯಾತರ ಮನದಲ್ಲಿ ವಿಶಿಷ್ಠ ರೀತಿಯ ರಾಜಕೀಯ ಮನೋಭಾವವನ್ನು ಬೆಳೆಸಿ ಇವತ್ತು ದೇಶದ ರಾಜಕೀಯ ಚುಕ್ಕಾಣಿಯನ್ನು ತಮ್ಮದಾಗಿಸಿಕೊಂಡಿದ್ದಾರೆ ಎಂದು ವಿವರಿಸಿದರು. ಬಾಬ್ರಿ ಮಸ್ಜಿದ್ ಪುನರ್ ಸ್ಥಾಪನೆಗೆ ದೇಶದ ಎಲ್ಲಾ ಸಮುದಾಯದ ಜನರು ಸಂವಿಧಾನದ ಉಳಿವಿಗಾಗಿ ತಮ್ಮ ಪಕ್ಷ ಸಂಘಟನೆಯನ್ನು ಬದಿಗಿಟ್ಟು ಒಗ್ಗೂಡಬೇಕೆಂದು, ಲಿಬರ್ಹಾನ್ ಆಯೋಗದ ಶಿಫಾರಸ್ಸಿನಂತೆ 68 ಆರೋಪಿಗಳನ್ನು ಶಿಕ್ಷಿಸಬೇಕೆಂದು ಒತ್ತಾಯಿಸಿದರು. ಸಭೆಯಲ್ಲಿ ಅತಿಥಿಯಾಗಿ ಬಾಗವಹಿಸಿ ಮಾತನಾಡಿದ ದಕ್ಷಿಣ ಕರ್ನಾಟಕ ಮುಸ್ಲಿಂ ಒಕ್ಕೂಟದ ಉಪಾಧ್ಯಕ್ಷರಾದ ಫಝಲುರ್ರಹ್ಮಾನ್ ಕೋಲ್ಕರ್ ರವರು ಭಾರತೀಯ ಮುಸ್ಲಿಂ ಸಮುದಾಯವು ಶೈಕ್ಷಣಿಕವಾಗಿಯೂ ಮತ್ತು ರಾಜಕೀಯವಾಗಿಯೂ ಬಲಿಷ್ಠಗೊಳ್ಳಲು ನಾವೆಲ್ಲರೂ ಒಂದಾಗಿ ಶ್ರಮಿಸಬೇಕೆಂದು ಹೇಳಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಹಾರಿಸ್ ಮಂಗಳೂರು, ಮಾತನಾಡಿ ಕೆಡವಿದ ‘ಬಾಬರಿ ಮಸ್ಜಿದ್’ ಅವತ್ತಿನ ಕೇಂದ್ರ ಸರಕಾರ ಮರು ನಿರ್ಮಿಸಿ ಕೊಡುವ ಭರವಸೆಯನ್ನು ನೆನಪಿಸುತ್ತಾ, ಸುಳ್ಳು ದಾಖಲೆಗಳ ಮೂಲಕ ನ್ಯಾಯಾಂಗ ವ್ಯವಸ್ಥೆಯನ್ನು ದುರ್ಬಲಗೊಳಿಸುವ ವ್ಯವಸ್ಥಿತ ಷಡ್ಯಂತ್ರವನ್ನು ಸವಿಸ್ತಾರವಾಗಿ ತಮ್ಮ ವಿಷಯವನ್ನು ಮಂಡಿಸಿದರು.
ಸಮಾರಂಭದಲ್ಲಿ ಅತಿಥಿಯಾಗಿ ಮಲ್ನಾಡ್ ಗಲ್ಫ್ ಎಸೋಸಿಯಶನ್ ಅಧ್ಯಕ್ಷರಾದ ಜುನೈದ್ ಇಸ್ಮಾಯಿಲ್ ಮೂಡಿಗೆರೆ ಮತ್ತು ಇಂಡಿಯನ್ ಸೋಷಿಯಲ್ ಫೋರಂ ರಿಯಾದ್, ಕರ್ನಾಟಕ ರಾಜ್ಯ ಸಮಿತಿ ಅಧ್ಯಕ್ಷರಾದ ಸಾಬಿತ್ ಹಸನ್ ಉಪಸ್ಥಿತರಿದ್ದರು.

ಮೊಹಮ್ಮದ್ ಶರೀಫ್ ಕಬಕರವರು ಕಾರ್ಯಾಕ್ರಮದ ಸ್ವಾಗತ ಮಾಡಿದರೆ, ಅಬ್ದುಲ್ ಹಕ್ ಬೆಂಗಳೂರು ಕೊನೆಯಲ್ಲಿ ವಂದಿಸಿದರು. ರಹ್ಮಾನ್ ತುಂಬೆ ಕಾರ್ಯಕ್ರಮವನ್ನು ನಿರೂಪಿಸಿದರು.

To Top
error: Content is protected !!
WhatsApp chat Join our WhatsApp group