ರಾಜ್ಯ ಸುದ್ದಿ

ಶೀಘ್ರದಲ್ಲೇ ಬಿಜೆಪಿಯಿಂದ ಐದು ಶಾಸಕರು ಕಾಂಗ್ರೆಸ್ ಗೆ: ಕಾಂಗ್ರೆಸ್ ನಾಯಕನ ಹೇಳಿಕೆ

ಅಪರೇಷನ್ ಕಮಲಕ್ಕೆ ಸಡ್ಡು ಹೊಡೆದ ಅಪರೇಷನ್ ಹಸ್ತ

‘ಹಾಲಪ್ಪ ಪಕ್ಷಕ್ಕೆ ಬರುತ್ತೇನೆ ಅಂದರೂ ಅವರನ್ನು ಸೇರಿಸಿಕೊಳ್ಳಲು ಕಾಂಗ್ರೆಸ್‌ನಲ್ಲಿ ಯಾರೂ ಸಿದ್ಧರಿಲ್ಲ’

ವರದಿಗಾರ (ಡಿ.9): ಶೀಘ್ರದಲ್ಲೇ  ಬಿಜೆಪಿಯ ಐವರು ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ ಎಂದು ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದ್ದಾರೆ.

ಅವರು ಶನಿವಾರ ಶಿವಮೊಗ್ಗದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಶೀಘ್ರದಲ್ಲೇ  ಬಿಜೆಪಿಯ ಐವರು ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ. ಈ ಕುರಿತು ಪಕ್ಷದ ಮುಖಂಡರ ಬಳಿ ಮಾತುಕತೆ ನಡೆಸಲಾಗಿದೆ ಎಂದು ಹೇಳಿದ್ದಾರೆ.

ರಾಜ್ಯದ ಸಮ್ಮಿಶ್ರ ಸರ್ಕಾರ ಬೀಳಿಸುವ ತಾಕತ್ತು ಬಿಜೆಪಿಗೆ ಇಲ್ಲ. ಆಪರೇಷನ್ ಕಮಲದ ತಾಕತ್ತು ಬಿಜೆಪಿ ಮುಖಂಡರು ಕಳೆದುಕೊಂಡಿದ್ದಾರೆ. ಈಗ ಏನಿದ್ದರೂ ಆಪರೇಷನ್ ಹಸ್ತ. ಬಿಜೆಪಿಗೆ ತಾಕತ್ತಿದ್ದರೆ ತನ್ನ ಶಾಸಕರನ್ನು ಹಿಡಿದಿಟ್ಟುಕೊಳ್ಳಲಿ ಎಂದು ಬಿಜೆಪಿಗೆ ಬಹಿರಂಗ ಸವಾಲು ಹಾಕಿದ್ದಾರೆ.

ಬಿಜೆಪಿ ತೊರೆಯುವ ಐವರಲ್ಲಿ ಹರತಾಳ ಹಾಲಪ್ಪ ಇದ್ದಾರೆಯೇ ಎಂಬ ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, ‘ಹಾಲಪ್ಪ ಪಕ್ಷಕ್ಕೆ ಬರುತ್ತೇನೆ ಅಂದರೂ ಅವರನ್ನು ಸೇರಿಸಿಕೊಳ್ಳಲು ಕಾಂಗ್ರೆಸ್‌ನಲ್ಲಿ ಯಾರೂ ಸಿದ್ಧರಿಲ್ಲ’ ಎಂದು ತೀಕ್ಷ ಮಾತುಗಳಿಂದ ಹೇಳಿದ್ದಾರೆ.

ಬಿ.ಎಸ್. ಯಡಿಯೂರಪ್ಪ ಅವರನ್ನು ಇನ್ನು ಮುಂದೆ ಜೈಲಿಗೆ ಹೋಗಿ ಬಂದವರು ಎಂದು ಹೇಳಿದರೆ ಕಾನೂನು ಕ್ರಮಕೈಗೊಳ್ಳುವುದಾಗಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಬೆದರಿಕೆ ಹಾಕಿದ್ದಾರಲ್ಲ ಎಂಬ ಪ್ರಶ್ನೆಗೆ ‘ನಾವು ಅವರ ಹೆಸರು ಹೇಳುವುದೇ ಇಲ್ಲ. ಮಾಜಿ ಮುಖ್ಯಮಂತ್ರಿ, ನಮ್ಮ ಜಿಲ್ಲೆಯ ಮುಖ್ಯಮಂತ್ರಿ, ಹಿಂದೆ ಜೈಲಿಗೆ ಹೋಗಿ ಬಂದಿದ್ದರು ಎಂದಷ್ಟೇ ಹೇಳುತ್ತೇವೆ’ ಎನ್ನುತ್ತ ವ್ಯಂಗ್ಯವಾಡಿದ್ದಾರೆ.

 

To Top
error: Content is protected !!
WhatsApp chat Join our WhatsApp group