ಅನಿವಾಸಿ ಕನ್ನಡಿಗರ ವಿಶೇಷ

ಬಾಬರಿ ಮಸ್ಜಿದ್ ಧ್ವಂಸ ಭಾರತದ ಜಾತ್ಯತೀತ ನಿಲುವಿಗೆ ಕೊಟ್ಟ ಕೊಡಲಿಯೇಟು : ಅಬ್ದುಲ್ ಮಜೀದ್

ಜಿದ್ದಾ (ಸೌದಿ ಅರೇಬಿಯಾ): ಭಾರತದ ದೇಶವು ಬಹು ಸಂಸ್ಕೃತಿಯ ದೇಶವಾಗಿದ್ದು ಅದರಲ್ಲೂ ವೈವಿಧ್ಯತೆಯಿಂದ ಏಕತೆಯನ್ನು ಸಾರಿದ ದೇಶವಾಗಿದೆ.ಭವ್ಯ ಇತಿಹಾಸವಿರುವ ಭಾರತ ದೇಶದ ಪರಂಪರೆಗೆ,ಪಟ್ಟ ಭದ್ರ ಹಿತಾಸಕ್ತಿಗಳ ಮತ್ತು ಕೋಮುವಾದಿ ಸಂಘ ಪರಿವಾದ ಷಡ್ಯಂತ್ರದ ಫಲವಾಗಿ ಸುಮಾರು ನಾಲ್ಕೂವರೆ ಶತಮಾನಗಳಷ್ಟು ಇತಿಹಾಸವಿದ್ದಂತಹ ಹಾಗು ಭವ್ಯ ಭಾರತದ ಜಾತ್ಯತೀತದ ಪ್ರತೀಕದಂತೆ ಇದ್ದಂತಹ ಬಾಬರಿ ಮಸ್ಜಿದನ್ನು ಹಾಡು ಹಗಲೇ ನಿರ್ನಾಮ ಮಾಡಲಾಯಿತು,ಇದು ದೇಶದ ಜಾತ್ಯತೀತ ಪರಂಪರೆಗೆ ನೀಡಿದ ಕೊಡಲಿ ಏಟು ಎಂದು ಇಂಡಿಯನ್ ಸೋಶಿಯಲ್ ಫೋರಮ್ ಪಶ್ಚಿಮ (ಜಿದ್ದಾ) ಪ್ರಾಂತ್ಯ ಹಮ್ಮಿಕೊಂಡಿದ್ದ “ಮರಳಿ ಪಡೆಯೋಣ ಬಾಬರಿ ಮಸ್ಜಿದ್ ಮರಳಿ ಗಳಿಸೋಣ ಭಾರತ” ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದ ಇಂಡಿಯನ್ ಸೋಶಿಯಲ್ ಫೋರಮ್ ಜಿಲ್ಲಾ ಸಮಿತಿ ಸದಸ್ಯ ಅಬ್ದುಲ್ ಮಜೀದ್ ವಿಟ್ಲಾ ಹೇಳಿದರು.
ಎಲ್ಲಾ ದಾಖಲೆಗಳು ಬಾಬರಿ ಮಸ್ಜಿದ್ ಪರವಾಗಿದ್ದರೂ,ಇಂದಿಗೂ ಬಾಬರಿ ಮಸ್ಜಿದ್ ನಿರ್ಮಾಣದ ಬಗ್ಗೆ ಆಳಿದ ರಾಜಕೀಯ ಪಕ್ಷಗಳು ಮತ್ತು ಬಾಬರಿ ಮಸ್ಜಿದ್ ಧ್ವಂಸದಂದು ಅಂದಿನ ಪ್ರಧಾನಿ ನರಸಿಂಹ ರಾವ್ ಕೊಟ್ಟ ಭರವಸೆಯನ್ನು ಈಡೇರಿಸದೇ ಪೊಳ್ಳು ಭರವಸೆಗಳನ್ನು ನೀಡುತ್ತಾ ಅಲ್ಪ ಸಂಖ್ಯಾತ ಸಮುದಾಯವನ್ನು ವಂಚಿಸುತ್ತದೆ ಎಂದು ಅವರು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇಂಡಿಯನ್ ಸೋಶಿಯಲ್ ಫೋರಮ್ ಪಶಿಮ ಪ್ರಾಂತ್ಯ ಅಧ್ಯಕ್ಷ ಮುಹಮ್ಮದ್ ಅಲಿ ಮೂಳೂರ್ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಜನಾಬ್ ಹನೀಫ್ ಹಾರಿಸ್ ಉಪಾಧ್ಯಕ್ಷರು ಐ ಎಸ್ ಎಫ್ ಕೇಂದ್ರ ಕಮಿಟಿ,ಜನಾಬ್ ಹಾರಿಸ್ ಗೂಡಿನಬಳಿ ಅಧ್ಯಕ್ಷರು ಐ ಎಫ್ ಎಫ್,ಜನಾಬ್ ರಫೀವುಲ್ಲಾ ಖಾನ್ ಮೈಸೂರು,ಜನಾಬ್ ಮುದಸ್ಸರ್ ಅಕ್ಕರಂಗಡಿ ವೇಧಿಕೆಯಲ್ಲಿ ಉಪಸ್ಥಿತರಿದ್ದರು.
ಇಂಡಿಯನ್ ಸೋಶಿಯಲ್ ಫೋರಮ್ ಪ್ರಧಾನ ಕಾರ್ಯದರ್ಶಿ ರಫೀಕ್ ಮಠ ಧನ್ಯವಾದ ಸಮರ್ಪಿಸಿದರು. ಶಾಕಿರ್ ಹಕ್ ನೆಲ್ಯಾಡಿ ಕಾರ್ಯಕ್ರಮ ನಿರೂಪಿಸಿದರು.

To Top
error: Content is protected !!
WhatsApp chat Join our WhatsApp group