ರಾಷ್ಟ್ರೀಯ ಸುದ್ದಿ

‘ಕಳೆದ ನಾಲ್ಕೂವರೆ ವರ್ಷಗಳಲ್ಲಿ ಕೇಂದ್ರ ಸರಕಾರಕ್ಕೆ ವ್ಯಕ್ತಿಯ ಧರ್ಮ ಮತ್ತು ಆತ ಏನು ತಿನ್ನುತ್ತಾನೆ ಎನ್ನುವುದು ಮುಖ್ಯವಾಗಿಬಿಟ್ಟಿದೆ’: ಸಚಿನ್ ಪೈಲಟ್

ಮಂದಿರ, ಚರ್ಚ್‌ಗಳ ನಿರ್ಮಾಣ ಸರಕಾರದ ಕೆಲಸವಲ್ಲ: ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸಚಿನ್ ಪೈಲಟ್

ವರದಿಗಾರ (ನ.28): ರಾಜಕೀಯದೊಂದಿಗೆ ಧರ್ಮವನ್ನು ರಾಜ್ಯ ಮತ್ತು ಕೇಂದ್ರದಲ್ಲಿರುವ ಬಿಜೆಪಿ ಸರಕಾರ ಬೆರೆಸುತ್ತಿದೆ ಮತ್ತು  ಕಳೆದ ನಾಲ್ಕೂವರೆ ವರ್ಷಗಳಲ್ಲಿ ಕೇಂದ್ರ ಸರಕಾರಕ್ಕೆ ವ್ಯಕ್ತಿಯ ಧರ್ಮ ಮತ್ತು ಆತ ಏನು ತಿನ್ನುತ್ತಾನೆ ಎನ್ನುವುದು ಮುಖ್ಯವಾಗಿಬಿಟ್ಟಿದೆ ಎಂದು ರಾಜಸ್ಥಾನ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸಚಿನ್ ಪೈಲಟ್ ಆರೋಪಿಸಿದ್ದಾರೆ.

ರಾಜಸ್ಥಾನ ವಿಧಾನಸಭಾ ಚುನಾವಣೆಗೆ ಟೊಂಕ್ ಕ್ಷೇತ್ರದಿಂದ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಕಾಂಗ್ರೆಸ್ ನಿರ್ಧಾರದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಗುರುದ್ವಾರಾಗಳು, ಚರ್ಚ್‌ಗಳು ಮತ್ತು ಮಂದಿರಗಳನ್ನು ನಿರ್ಮಿಸುವುದು ರಾಜಕೀಯ ಪಕ್ಷಗಳು ಅಥವಾ ಸರಕಾರಗಳ ಕೆಲಸವೆಂದು ತಾನು ಭಾವಿಸಿಲ್ಲ. ಅವರು ರಾಜಕೀಯ ಮತ್ತು ಧರ್ಮವನ್ನು ಪ್ರತ್ಯೇಕವಾಗಿರಿಸಬೇಕು. ಆದರೆ ಇತರ ಎಲ್ಲವೂ….ಜಿಎಸ್‌ಟಿ, ನೋಟು ನಿಷೇಧ, ಸ್ಟಾಂಡ್-ಅಪ್ ಇಂಡಿಯಾ, ಸ್ಕಿಲ್ ಇಂಡಿಯಾ, ಮೇಕ್ ಇನ್ ಇಂಡಿಯಾ ಈ ಎಲ್ಲವೂ ವಿಫಲಗೊಂಡಾಗ ಮತ್ತು ನಿರುದ್ಯೋಗವುಂಟಾದಾಗ ಮತ್ತು ರೈತರಲ್ಲಿ ಕ್ರೋಧ ತುಂಬಿದಾಗ ಅವರ ಬಳಿ ಯಾವುದೇ ಉತ್ತರವಿಲ್ಲ. ಹೀಗಾಗಿ ಅವರು ಮಸೀದಿ, ಮಂದಿರ ಇತ್ಯಾದಿಗಳ ಬಗ್ಗೆ ಮಾತನಾಡಲು ಆರಂಭಿಸುತ್ತಾರೆ ಎಂದು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಚುನಾವಣೆಗಳನ್ನು ಕುಡಿಯುವ ನೀರು, ರಸ್ತೆಗಳು ಮತ್ತು ಕೈಗಾರಿಕೆಗಳನ್ನು ವಿಷಯವನ್ನಾಗಿಟ್ಟುಕೊಂಡು ಹೋರಾಡಬೇಕೇ ಹೊರತು ಧರ್ಮವನ್ನಲ್ಲ. ತೋರಿಸುವಂತಹ ಯಾವುದೇ ಸಾಧನೆಯಿಲ್ಲ ಎನ್ನುವುದೇ ಬಿಜೆಪಿಯ ಸಮಸ್ಯೆಯಾಗಿದೆ. ಮುಖ್ಯಮಂತ್ರಿ ವಸುಂಧರಾ ರಾಜೆ ಅವರ ಸರಕಾರವು ಎಲ್ಲ ರಂಗಗಳಲ್ಲಿಯೂ ದಯನೀಯವಾಗಿ ವಿಫಲಗೊಂಡಿದೆ. ಹೀಗಾಗಿ ಮಂದಿರ,ಮಸೀದಿ,ಜಾತಿ ಮತ್ತು ಭಾಷೆಯ ಕುರಿತು ವಿವಾದವೆಬ್ಬಿಸುವುದು ಅವರಿಗೆ ಇರುವ ಕೊನೆಯ ಆಸರೆಯಾಗಿದೆ. ಅವೆಲ್ಲವೂ ಅಸಂಗತವಾಗಿವೆ, ಜನರು ವಿಷಯಗಳನ್ನು ಆಧರಿಸಿ ಚುನಾವಣೆಗಳಲ್ಲಿ ಹೋರಾಡಬೇಕೇ ಹೊರತು ಧರ್ಮವನ್ನಲ್ಲ ಎಂದು ಹೇಳಿದ್ದಾರೆ.

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group