ಸುತ್ತ-ಮುತ್ತ

ಜಲ್ಲಿಗುಡ್ಡೆಯಲ್ಲಿ ಯಶಸ್ವಿಯಾಗಿ ನಡೆದ ರಕ್ತದಾನ ಶಿಬಿರ

ಅಲ್ ಸಫಾ ಫ್ರೆಂಡ್ಸ್ ಬಜಾಲ್ ಜಲ್ಲಿಗುಡ್ಡೆ ಮತ್ತು ಬ್ಲಡ್ ಡೋನರ್ಸ್ ಮಂಗಳೂರು ಇದರ ಆಶ್ರಯದಲ್ಲಿ ಎ.ಜೆ. ಹಾಸ್ಪಿಟಲ್ ಕುಂಟಿಕಾನ ಇದರ ಸಹಭಾಗಿತ್ವದಲ್ಲಿ ಬೃಹತ್ ರಕ್ತದಾನ ಶಿಬಿರವು ಹಾಗೂ ಅಲ್ ಸಫಾ ಪ್ರೆಂಡ್ಸ್ ರವರ ಕಛೇರಿ ಉದ್ಘಾಟನಾ ಸಮಾರಂಭ ೨೫-೧೧-೨೦೧೮ ರ ರವಿವಾರ ಜಲ್ಲಿಗುಡ್ಡೆ ಜಂಕ್ಷನ್ ಬಳಿ ನಡೆಯಿತು.

ಕಾರ್ಯಕ್ರಮದ ಅದ್ಯಕ್ಷತೆಯನ್ನು ಅಲ್ ಸಫಾ ಪ್ರೆಂಡ್ಸ್ ಇದರ ಅದ್ಯಕ್ಷರಾದ ಇಝಾ ಬಜಾಲ್ ವಹಿಸಿದ್ದರು ಮುಖ್ಯ ಅಥಿತಿಗಳಾಗಿ ಜಾತ್ಯಾತೀತ ಜನಾತದಳದ ರಾಜ್ಯ ಉಪಾಧ್ಯಕ್ಷರಾದ ಎಂಬಿ‌ ಸದಾಶಿವ, ಕುದ್ರೋಳಿ ಕಾರ್ಪೋರೇಟರ್ ಅಝೀಝ್ ಕುದ್ರೋಳಿ, ಜನತಾದಳ ಜಿಲ್ಲಾದ್ಯಕ್ಷರಾದ ಮಹಮ್ಮದ್ ಕುಂಙಿ, ಜಾತ್ಯಾತೀತ ಜನತಾದಳ ಮಂಗಳೂರು ವಿಧಾನ ಸಭಾ ಕ್ಷೇತ್ರಾದ್ಯಕ್ಷರಾದ ವಸಂತ ಪೂಜಾರಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಉಮ್ಮರ್ ಫಾರೂಕ್, ಪುದು ಗ್ರಾಮ ಪಂಚಾಯತ್ ಅದ್ಯಕ್ಷರಾದ ರಮ್ಲಾನ್, ನಿಸಾರ್ , ಮುಸ್ತಫಾ ಕೆಂಪಿ, ಬ್ಲಡ್ ಡೋನರ್ಸ್ ಮಂಗಳೂರು ಅಧ್ಯಕ್ಷರಾದ ಸಿದ್ದೀಕ್ ಮಂಜೇಶ್ವರ ಉಪಸ್ಥಿತರಿದ್ದರು, ಕಾರ್ಯಕ್ರಮವನ್ನು ಪ್ರಾರ್ಥನೆಯೊಂದಿಗೆ ಬಜಾಲ್ ಪಡ್ಪು ಮಸೀದಿ ಖತೀಬರಾದ ಮೊಹಮ್ಮದ್ ಹನೀಪ್ ದಾರಿಮಿ ಉದ್ಘಾಟಿಸಿದರು

ಕಾರ್ಯಕ್ರಮದ ಅಂಗವಾಗಿ ಬ್ಲಡ್ ಡೋನರ್ಸ್ ಮಂಗಳೂರು ಮತ್ತು ಎಜೆ ಆಸ್ಪತ್ರೆಯ ಸಹಯೋಗದಲ್ಲಿ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಭಿರದಲ್ಲಿ ಸುಮಾರು ಎಂಬತ್ತಕ್ಕೂ ಅಧಿಕ ರಕ್ತದಾನಿಗಳು‌ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದರು, ಬ್ಲಡ್ ಡೋನರ್ಸ್ ಮಂಗಳೂರು ತಂಡದ ಸಿದ್ದೀಕ್ ಮಂಜೇಶ್ವರ, ಶಾಹುಲ್ ಹಮೀದ್ ಕಾಶಿಪಟ್ಣ, ಸಲಾಂ ಚೆಂಬುಗುಡ್ಡೆ, ಮಸೂದ್ ತೋಡಾರು, ಎಜೆ ಆಸ್ಪತ್ರೆಯ ಗೋಪಾಲ ಕೃಷ್ಣ ಉಪಸ್ಥಿತರಿದ್ದರು,‌ ಅಡ್ವೋಕೇಟ್ ರಘುನಾಥ್ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು, ಝಿಯಾದ್ ಕಾರ್ಯಕ್ರಮವನ್ನು ನಿರೂಪಿಸಿದರು

ಕೊನೆಯದಾಗಿ ಅಲ್ ಸಫಾ ಪ್ರೆಂಡ್ಸ್ ಇದರ ಅಧ್ಯಕ್ಷರಾದ ಇಝಾ ಬಜಾಲ್ ಇವರಿಗೆ ಬ್ಲಡ್ ಡೋನರ್ಸ್ ಮಂಗಳೂರು ವತಿಯಿಂದ ಸನ್ಮಾನಿಸಲಾಯಿತು

ವರದಿ: ಶಾಹುಲ್ ಹಮೀದ್ ಕಾಶಿಪಟ್ನ

To Top
error: Content is protected !!
WhatsApp chat Join our WhatsApp group