ಅನಿವಾಸಿ ಕನ್ನಡಿಗರ ವಿಶೇಷ

ಮಾಜಿ ಕೇಂದ್ರ ಸಚಿವದ್ವಯರ ನಿಧನ ಹಾಗು ಮಂಡ್ಯ ಬಸ್ ದುರಂತ ದಲ್ಲಿ ಮಡಿದವರಿಗೆ ಇಂಡಿಯನ್ ಸೋಶಿಯಲ್ ಫೋರಮ್ ಸಂತಾಪ

ಹಿರಿಯ ರಾಜಕಾರಣಿಗಳು ಮತ್ತು ಮಾಜಿ ಕೇಂದ್ರ ಸಚಿವರುಗಳಾದ ಅಂಬರೀಷ್ ಮತ್ತು ಸಿ ಕೆ ಜಾಫರ್ ಷರೀಫ್ ನಿಧನಕ್ಕೆ ಇಂಡಿಯನ್ ಸೋಶಿಯಲ್ ಫೋರಮ್ ಪಶ್ಚಿಮ ವಲಯ ತೀವ್ರ ಸಂತಾಪ ಸೂಚಿಸಿದೆ.ಅಂಬರೀಷ್ ರವರು ತಮ್ಮ ನೇರ ನಡೆ ನುಡಿಯ ಮೂಲಕ ಪಕ್ಷದಲ್ಲಿ ಮತ್ತು ಅಭಿಮಾನಿ ಬಳಗದಲ್ಲಿ ತನ್ನ ಛಾಪನ್ನು ಒತ್ತಿದರೆ ಜಾಫರ್ ಷರೀಫ್ ರವರು ತನ್ನ ಆಡಳಿತಾವಧಿಯಲ್ಲಿ ರೈಲ್ವೆ ಗೇಜ್ ನಿರ್ಮಾಣ ಮೂಲಕ ಮತ್ತ್ತು ತನ್ನ ಪಕ್ಷ ನಿಷ್ಠೆ ಮೂಲಕ ಇಂದು ಜನ ಮಾನಸದಲ್ಲಿ ಅಜರಾಮರಾಗಿದ್ದಾರೆ ಎಂದು ಇಂಡಿಯನ್ ಸೋಶಿಯಲ್ ಫೋರಮ್ ಪಶ್ಚಿಮ ಪ್ರಾಂತ್ಯ ಸೌದಿ ಅರೇಬಿಯಾ ಅಧ್ಯಕ್ಷ ಮುಹಮ್ಮದ್ ಅಲಿ ಮೂಳೂರು ತಿಳಿಸಿದರು.

ಮಂಡ್ಯ ಬಸ್ ದುರಂತ ಮಡಿದವರ ಕುಟುಂಬಕ್ಕೆ ಸೂಕ್ತ ಪರಿಹಾರಕ್ಕೆ ಆಗ್ರಹ
ಮಂಡ್ಯ ಜಿಲ್ಲೆಯ ಪಾಂಡವಪುರ ಬಸ್ ದುರಂತದಲ್ಲಿ ಮಡಿದವರಿಗೆ ರಾಜ್ಯ ಸರಕಾರವು ಸೂಕ್ತ ಪರಿಹಾರ ನೀಡಬೇಕು ಹಾಗು ಸಂಚಾರ ಯೋಗ್ಯವಲ್ಲದ ಬಸ್ ಗಳ ಪರವಾನಿಗೆಗಳನ್ನು ರದ್ದು ಮಾಡಿ ಬಸ್ ಮಾಲೀಕರು ಜನರ ಜೀವದೊಂದಿಗೆ ಚೆಲ್ಲಾಟವಾಡುವುದನ್ನು ಇಂದೇ ಕೊನೆಯಾಗಬೇಕೆಂದು ಮುಹಮ್ಮದ್ ಅಲಿಯವರು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದರು. ಬಸ್ ದುರಂತದಲ್ಲಿ ಮಡಿದವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಸೃಷ್ಟಿಕರ್ತನು ದಯಪಾಲಿಸಲಿ ಮತ್ತು ಮಡಿದವರಿಗೆ ಇಂಡಿಯನ್ ಸೋಶಿಯಲ್ ಫೋರಮ್ ತೀವ್ರ ಸಂತಾಪ ಸೂಚಿಸುತ್ತದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.

To Top
error: Content is protected !!
WhatsApp chat Join our WhatsApp group