ನಮ್ಮ ಹೆಜ್ಜೆ - ನಿಮ್ಮ ನುಡಿ

ಜನಪರ ಕಾಳಜಿಯೊಂದಿಗೆ ಮುನ್ನಡೆಯಲಿ: ಖಾಸಿಂ ಸಾಬ್

ನಮ್ಮ ಹೆಜ್ಜೆ, ನಿಮ್ಮ ನುಡಿ: ಪ್ರಸಕ್ತ ಕರ್ನಾಟಕದ ಸನ್ನಿವೇಶದಲ್ಲಿ ಅಂತರ್ಜಾಲ ಸುದ್ದಿತಾಣದ ಅಗತ್ಯತೆ ಬಹಳಷ್ಟಿದೆ. ಇಂದು ಕೆಲವೊಂದು ಪ್ರಿಂಟ್ ಮತ್ತು ದ್ರಶ್ಯ ಮಾಧ್ಯಮಗಳು ಕೆಳವರ್ಗದ, ದಮನಿತರ ನೋವಿಗೆ ಧ್ವನಿಯಾಗದೆ, ಯಾರದೋ ತಾಳಕ್ಕೆ ತಕ್ಕಂತೆ ನಾಟ್ಯವಾಡುತ್ತಾ ಪತ್ರಿಕಾ ಧರ್ಮವನ್ನು ಮರೆತು ಕಾರ್ಯಾಚರಿಸುತ್ತಿದೆ. ಇದಕ್ಕೆ ತದ್ವಿರುದ್ಧವೆಂಬಂತೆ ನಿಮ್ಮ “ವರದಿಗಾರ” ಕಾರ್ಯಾಚರಿಸಲಿ. ಜನಪರ ಧ್ವನಿಯಾಗಿ, ಜಾತ್ಯಾತೀತ ತತ್ವಗಳನ್ನು ಪಸರಿಸುವಂತಹಾ ಕೆಲಸಗಳನ್ನು ಮಾಡಲೆಂದು ಆಶಿಸುವೆನು. ಎಂದಿಗೂ ಪೈಪೋಟಿ ಮತ್ತು ಪ್ರಚಾರದ ಗೀಳಿಗೆ ಆಸ್ಪದ ಕೊಡದೆ, ಯಾವುದೇ ಸನ್ನಿವೇಶದಲ್ಲೂ ನಿಮ್ಮ ತತ್ವ ಸಿದ್ಧಾಂತಗಳೊಂದಿಗೆ ರಾಜಿಯಾಗದೆ ಜನಪರ ಕಾಳಜಿಯೊಂದಿಗೆ ಮುನ್ನಡೆಯಿರಿ. ನಮ್ಮ ಸಹಕಾರ ಎಂದಿಗೂ ನಿಮ್ಮೊಂದಿಗಿದೆ.

 

ಖಾಸಿಂ ಸಾಬ್ ಎ
ಸಂಚಾಲಕರು, ಮುಸ್ಲಿಂ ಜಾಗ್ರತಿ ಬಳಗ. ಬೆಂಗಳೂರು

To Top
error: Content is protected !!
WhatsApp chat Join our WhatsApp group