ಅನಿವಾಸಿ ಕನ್ನಡಿಗರ ವಿಶೇಷ

ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿಯಾದ ಬ್ಯಾರಿಸ್ ಚೇಂಬರ್ ಓಫ್ ಕಾಮರ್ಸ್ & ಇಂಡಸ್ಟ್ರೀಸ್ ಮಂಗಳೂರು ಪದಾಧಿಕಾರಿಗಳು

ವರದಿಗಾರ -ದುಬೈ(ನ.13): ದುಬೈ ಪ್ರವಾಸದಲ್ಲಿದ್ದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರನ್ನು ಬ್ಯಾರಿಸ್ ಚೇಂಬರ್ ಓಫ್ ಕಾಮರ್ಸ್ & ಇಂಡಸ್ಟ್ರೀಸ್ ಮಂಗಳೂರು ಇದರ ಯುಎಇ ಘಟಕದ ಪದಾಧಿಕಾರಿಗಳು ದುಬೈಯ ದಿ ವಿಲ್ಲಾ ದ್ಲಲಿರುವ ಜಾತ್ಯಾತೀತ ಜನತಾ ದಳದ ರಾಷ್ಟ್ರೀಯ ಕಾರ್ಯದರ್ಶಿ ಝಫರುಲ್ಲಾ ಖಾನ್ ರವರ ನಿವಾಸದಲ್ಲಿ ಇತ್ತೀಚೆಗೆ ಭೇಟಿಯಾದರು.

ಭೇಟಿ ಸಂದರ್ಭ ಭಾರತೀಯ ಅನಿವಾಸಿ ಉದ್ಯಮಿಗಳ ಹಾಗೂ ಬಿಸಿಸಿಐ ಪಾತ್ರದ ಬಗ್ಗೆ ಅವರೊಂದಿಗೆ ವಿಚಾರ ವಿನಿಮಯ ಮಾಡಿದರು.

ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರನ್ನು ಬಿಸಿಸಿಐಯು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ನಿಯೋಗದಲ್ಲಿ ಬಿಸಿಸಿಐ ನ ಯುಎಇ ಅಧ್ಯಕ್ಷರಾದ ಎಸ್. ಎಂ.ಬಶೀರ್, ಉಪಾಧ್ಯಕ್ಷರಾದ ಎಂ.ಎಸ್. ಹಿದಾಯತ್ ಅಡ್ಡೂರು, ಕೋಶಾಧಿಕಾರಿ  ಹಂಝ ಅಬ್ದುಲ್ ಖಾದರ್, ಕಾರ್ಯದರ್ಶಿ ಸಲೀಂ ಅಲ್ತಾಫ್, ನವೀದ್ ಮಾಗುಂಡಿ ಹಾಗೂ ಕರ್ನಾಟಕ ಮೀಡಿಯಾ ಫೋರಮ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವರದಿ: ಕರ್ನಾಟಕ ಮೀಡಿಯಾ ಫೋರಮ್

 

To Top
error: Content is protected !!
WhatsApp chat Join our WhatsApp group