ಸುತ್ತ-ಮುತ್ತ

ಸಂಘ ಪರಿವಾರದ ಮುಂಚೂಣಿಯಲ್ಲಿದ್ದರೂ ಹೊಡಿ- ಬಡಿ ಭಾಷೆ ಬಳಸಿದವರಲ್ಲ ಅನಂತ್ ಕುಮಾರ್ : ನಿಧನಕ್ಕೆ ಫಾರೂಕ್ ಉಳ್ಳಾಲ್ ಸಂತಾಪ

ಮಂಗಳೂರು : ಬಿಜೆಪಿ ಪಕ್ಷ ದ ರಾಷ್ಟ್ರೀಯ ನಾಯಕರಾಗಿದ್ದ ಶ್ರೀ ಅನಂತ್ ಕುಮಾರ್ ಬಿಜೆಪಿಯ ವರಿಷ್ಠ ಮಂಡಳಿಯಲ್ಲಿ ಸಾಕಷ್ಟು ಸ್ವಾಧೀನತೆ ಹೊಂದಿದ್ದರು.
ರಾಜಕೀಯ ಚಾಣಾಕ್ಷತೆಯಲ್ಲಿ ನಿಪುಣ ರಾಜಕಾರಣಿ ಎಂಬ ಗೌರವಾದರಕ್ಕೆ ಪಾತ್ರವಾಗಿದ್ದ ಅನಂತ್ ಕುಮಾರ್ ರಿಗೆ ಎಲ್ಲಾ ಪಕ್ಷಗಳಲ್ಲೂ ಮಿತ್ರರಿದ್ದರು,ಅವರ ಅಗಲಿಕೆ ರಾಷ್ಟ್ರ ರಾಜಕಾರಣಕ್ಕೆ ಅಪಾರ ನಷ್ಟವನ್ನು ತಂದಿದೆ ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ವಕ್ತಾರ ಶ್ರೀ ಫಾರೂಕ್ ಉಳ್ಳಾಲ್ ಕೇಂದ್ರ ಸಚಿವ ಅನಂತ್ ಕುಮಾರ್ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.
ಸ್ನೇಹ ಜೀವಿಯಾಗಿದ್ದ ಅನಂತ್ ಕುಮಾರ್ ಸಂಘ ಪರಿವಾರದ ಪ್ರಭಾವಿ ನಾಯಕನಾಗಿದ್ದರೂ ಎಂದೂ ಹೊಡಿ-ಬಡಿ ಭಾಷೆಯನ್ನು ಎಂದೂ ಬಳಸಿದವರಲ್ಲ , ಅಡ್ವಾಣಿಯವರ ಆಪ್ತರಾಗಿದ್ದ ಅನಂತ್ ಕುಮಾರ್ ಮೋದಿ ಆಡಳಿತದಲ್ಲಿ ನಿರ್ಲಕ್ಷಿಸಲ್ಪಟ್ಟಂತೆ ಕಂಡು ಬರುತ್ತಿದ್ದರು, ಆದರೂ ಬಿಜೆಪಿಯಲ್ಲಿ ಅವರು ಇನ್ನೂ ಎತ್ತರಕ್ಕೆ ಬೆಳೆಯುವ ಸಾಧ್ಯತೆ ಇತ್ತು ಎಂದೂ ಅಭಿಪ್ರಾಯ ವ್ಯಕ್ತಪಡಿಸಿರುವ ಫಾರೂಕ್ ಉಳ್ಳಾಲ್, ಕೇಂದ್ರ ಸಚಿವನಾಗಿ ದೇಶಕ್ಕೆ ಇನ್ನೂ ಹೆಚ್ಚಿನ ಸೇವೆ ನೀಡುತ್ತಾರೆಂಬ ನಿರೀಕ್ಷೆ ಇದ್ದ ದಿನಗಳಲ್ಲೇ ಅಸೌಖ್ಯಕ್ಕೆ ತುತ್ತಾಗಿ ಅನಂತ್ ಕುಮಾರ್ ಮರಣವನ್ನಪ್ಪಿರುವುದು ನಿಜಕ್ಕೂ ಖೇದಕರ.  ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ, ಅವರ ಕುಟುಂಬಕ್ಕೆ ಈ ನೋವನ್ನು ಸಹಿಸುವ ಶಕ್ತಿಯನ್ನು ಅನುಗ್ರಹಿಸಲಿ, ಎಂದೂ ಶ್ರೀ ಫಾರೂಕ್ ಉಳ್ಳಾಲ್ ಪತ್ರಿಕಾ ಹೇಳಿಕೆಯಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ.

To Top
error: Content is protected !!
WhatsApp chat Join our WhatsApp group