ನಿಮ್ಮ ಬರಹ

ಪುತ್ತೂರಿನ ಆಸ್ಪತ್ರೆಗಳ ಧಣಿಗಳೇ, ಕರ್ತವ್ಯ ಮರೆತ ವೈದ್ಯರೇ, ನಿಮ್ಮ ಬೆದರಿಕೆಗೆ ಶರಣೆನ್ನಲು, ಇದು ಆ ಕಾಲವಲ್ಲ!!

– ಫಾರೂಕ್ ಉಳ್ಳಾಲ್

ವರದಿಗಾರ (ನ.10): ಹೌದು, ಅದೊಂದು ದಿನ ಬ್ಯಾರಿಗಳ ಅಂಗಡಿಗಳಲ್ಲಿ ಹಿಂದೂಗಳು ವ್ಯಾಪಾರ ಮಾಡ ಬಾರದು, ಮನೆ ಬಾಗಿಲಿಗೆ ಬಂದು ಮೀನು ಮಾರುವ ‘ ಕಾಕ’ನಿಂದಲೂ ಮೀನು ಖರೀದಿಸ ಬಾರದು ಎಂದು ಸಂಘದ ಫರ್ಮಾನು ಹೊರ ಬಿದ್ದಾಗ, ಜಿಲ್ಲೆಯ ಮುಸ್ಲಿಮರು ಬೆಚ್ಚು ಬಿದ್ದಿದ್ದರು, ಮುಂದೇನು ಎಂದು ಭವಿಷ್ಯ ಊಹಿಸಿ ಭಯಭೀತರಾಗಿದ್ದರು. ಮುಂದೆ ಕೆಲವು ದಿನಗಳ ಕಾಲ ಹುಟ್ಟು ವ್ಯಾಪಾರಿಗಳಾದ ಬ್ಯಾರಿಗಳು ಸಂಕಷ್ಟ, ಸಾಲ- ಸೋಲಕ್ಕೆ ತುತ್ತಾದದ್ದು ಸುಳ್ಳಲ್ಲ!. ಆದರೆ,ಹೃದಯ ವೈಶಾಲ್ಯತೆಯುಳ್ಳ, ಇನ್ನೊಬ್ಬರ ನೋವಿಗೆ ಸ್ಪಂದಿಸುವ ಹಿರಿಯ ಗುಣಗಳಿರುವ ತುಳುನಾಡಿನ ಹಿಂದುಗಳು ನೈಜ ಗುಣದಿಂದ ಹೊರಗುಳಿಯಲು ಮುಂದಾಗಲಿಲ್ಲ. *ಧರ್ಮವೊಂದನ್ನು ಹೊರತು ಪಡಿಸಿ, ಮಿಕ್ಕೆಲ್ಲದರಲ್ಲೂ ಸಾಮ್ಯತೆ ಇರುವ ಒಂದೇ ನೆಲದ ನಿವಾಸಿಗಳಾದ ಬ್ಯಾರಿಗಳನ್ನು ಧಿಕ್ಕರಿಸುವ ನಿರ್ಧಾರವನ್ನು ಪಾಲಿಸಲು ಸಿದ್ಧರಾಗದೆ, ಅವರು ಮನುಷ್ಯ ಧರ್ಮ ವನ್ನು ಪರಿ ಪಾಲಿಸಿದ್ದು ಇಂದಿಗೂ ಸ್ಮರಣೀಯ ಇತಿಹಾಸ.

ಇಂದು ಜಿಲ್ಲೆಯ ಮುಸ್ಲಿಮರ ಆರ್ಥಿಕ ಸ್ಥಿತಿ ಇತರ ಸಮೂದಾಯವರ ನೇರಾನೇರಕ್ಕೆ ನಿಲ್ಲುವಷ್ಟು ಶಕ್ತವಾಗಿವೆ. ಬ್ಯಾರಿಗಳ ಮನೆಯ ಹೆಣ್ಣು-ಗಂಡು ಮಕ್ಕಳೂ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ, ಶೈಕ್ಷಣಿಕ ಪ್ರಗತಿ ಇತರರಿಗಿಂತ ವೇಗದ ನಡಿಗೆಯಲ್ಲಿದೆ.

ಸಮಾಜದ ಪ್ರತಿಷ್ಠಿತ ವೃತ್ತಿಗಳಾದ ವೈದ್ಯ, ವಕೀಲ, ಇಂಜಿನಿಯರಿಂಗ್ ವೃತ್ತಿಗಳಲ್ಲಿ ಮುಸ್ಲಿಮರು ಎದ್ದು ಕಾಣುವ ಸಂಖ್ಯೆಯಲ್ಲಿದ್ದಾರೆ,ಮುಸ್ಲಿಮ್ ಒಡೆತನಕ್ಕೆ ಸೇರಿದ ಆಸ್ಪತ್ರೆ- ಕಾಲೇಜುಗಳೂ ಸಾಕಷ್ಟಿವೆ.

ಆರ್ಥಿಕವಾಗಿ ಹಿಂದುಳಿದ ಮುಸ್ಲಿಮರಿಗೆ ಸಹಾಯ ಹಸ್ತ ನೀಡಲು ಮುಂದೆ ಬರುವ ಮುಸ್ಲಿಂ ಸೇವಾ ಸಂಸ್ಥೆಗಳೂ ನೂರಾರಿವೆ!. ದೇಶ-ವಿದೇಶಗಳಲ್ಲಿರುವ ಭಾರತೀಯ ಮುಸ್ಲಿಮರು ತಮ್ಮ ದೈನಂದಿನ ಬದುಕಿಗೆ ಕೊಡುವಷ್ಟೇ ಮುತುವರ್ಜಿಯನ್ನು ಮುಸ್ಲಿಂ ಸೇವಾ ಸಂಸ್ಥೆಗಳ ಉದ್ದೇಶ ಈಡೇರಲು ವಹಿಸುತ್ತಿದ್ದಾರೆ, ನೆರವು ನೀಡುತ್ತಿದ್ದಾರೆ.

ಪೋಲಿಸ್ ಇಲಾಖೆಯನ್ನು ಹೊರತು ಪಡಿಸಿ ಇತರೆಲ್ಲಾ ಇಲಾಖೆಗಳಲ್ಲಿ ಸ್ವಾಧೀನ ಪಡೆಯಲು ಮುಸ್ಲಿಮರಿಗೆ ಸಾಧ್ಯವಾಗುತ್ತಿರುವ ಪರ್ವ ಕಾಲವಿದು!
ನಾವು ಯಾರಿಗೂ, ಯಾವುದರಲ್ಲೂ ಕಡಿಮೆ ಅಲ್ಲ ಎನ್ನುವ ಆತ್ಮವಿಶ್ವಾಸ ತುಂಬಿದ ಯುವಕರೇ ಮುಸ್ಲಿಮರಲ್ಲಿ ಹೆಚ್ಚು!. ಅದರ ಪ್ರತ್ಯಕ್ಷ ಸಾಕ್ಷಿಯೇ *ಪುತ್ತೂರಿನ ವೈದ್ಯರ ಕರ್ತವ್ಯ ಉಲ್ಲಂಘನೆಯ ವಿರುದ್ಧ ನಡೆದ ಬೃಹತ್ ಪ್ರತಿಭಟನೆ. ಅದು ಪಿ.ಎಫ್ ಐ- ಎಸ್.ಡಿ.ಪಿ.ಐ ಯವರ ಪ್ರತಿರೋಧವೆಂದು ಕೇವಲವಾಗಿ ಕಾಣದಿರಿ.ಅವರ ಜನಪರ ನ್ಯಾಯೋಚಿತವಾದ ಪ್ರತಿಭಟನೆಗೆ, ಪುತ್ತೂರಿನ ಮುಸ್ಲಿಮರದಷ್ಟೇ ಅಲ್ಲ, ಜಿಲ್ಲೆಯ ಒಟ್ಟು ಮುಸ್ಲಿಮರ ‌ಹೃತ್ಪೂರ್ವಕ ಬೆಂಬಲವಿತ್ತು! ಪುತ್ತೂರಿನ ನೊಂದವರ ‌ಒಕ್ಕೊರಳ ಬೇಡಿಕೆ, ಅದಾಗಿತ್ತು !

‘ವೈದ್ಯ ದೇವೋಭವ’ಎಂಬ ನಂಬಿಕೆಯ ನೆಲದಲ್ಲಿ, ವೈದಕೀಯ ಸೇವೆ ನಿರಾಕರಿಸುವ ಬೆದರಿಕೆಯೊಡ್ಡಿರುವುದು ನಿಜಕ್ಕೂ ವಿಪರ್ಯಾಸ!
ಆತಂಕ ಎದುರಾದಾಗ ಪ್ರತಿರೋಧ ಶಕ್ತಿ ಜಾಗೃತಗೊಳ್ಳಲೇ ಬೇಕು. ಅಡಿಗಡಿಗೂ ಅಪನಂಬಿಕೆ, ಆರೋಪಗಳಿಗೀಡಾಗುತ್ತಲೇ ಇರುವ ಮುಸ್ಲಿಮರು ಖಂಡಿತ ವಾಗಿಯೂ ವಿರೋಧವನ್ನು ಮೆಟ್ಟಿ ನಿಲ್ಲಲು ಪ್ರಯತ್ನಿಸುವ ಅನಿವಾರ್ಯತೆ ಇದೆ. ತಮ್ಮದಲ್ಲದ ತಪ್ಪಿಗೆ ಅಕ್ರಮಕ್ಕೆ -ದೌರ್ಜನ್ಯಕ್ಕೆ ಬಲಿ ಪಶುಗಳಾಗುತ್ತ ಬಂದವರ ತಾಳ್ಮೆ ಗೂ ಮಿತಿ ಇದೆ. ಆ ಕಾರಣದಿಂದ ಲೇ ಆಸ್ಪತ್ರೆ ಗಳ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ ರೋಗಿಗಳಿಗೆ ಚಿಕಿತ್ಸೆ ಇಲ್ಲ ಎನ್ನುವ ಪುತ್ತೂರಿನ ಆಸ್ಪತ್ರೆಗಳ ನಿರ್ವಾಹಕರ ಹೇಳಿಕೆಗೆ ಮುಸ್ಲಿಮ್ ಮನಸ್ಸು ಪರ್ಯಾಯವನ್ನು ಹುಡುಕಿ ಕೊಂಡಿವೆ.

ಆಸ್ಪತ್ರೆಗಳ ಮಾಲ್ಹಕರ ಉದ್ದೇಶ ಸ್ಪಷ್ಠ , ಮುಸ್ಲಿಮರು ಅನ್ಯಾಯದ ವಿರುದ್ಧ ಮುಂದೆಂದೂ ಧ್ವನಿ ಎತ್ತಬಾರದು!

ಪ್ರತಿಭಟನೆಯ ಕಾರಣಕ್ಕೆ ಆಸ್ಪತ್ರೆ ಗಳ ಮುಷ್ಕರದಿಂದಾಗುವ ಅಡಚಣೆ, ಮುಸ್ಲಿಮರೊಳಗೆ ಮನಸ್ತಾಪ ಮುಂದಿಡುವುದಲ್ಲದೆ, ಇತರ ಸಮಾಜದವರು ಪ್ರತಿಭಟನೆ ನಡೆಸುವ ಮುಸ್ಲಿಂ ಸಂಘಟನೆಗಳ ವಿರುದ್ಧ ಮುನಿದೇಳುತ್ತವೆ ಎನ್ನುವ ದೂರ ದೃಷ್ಠಿ *ನವೆಂಬರ್ ಹತ್ತು ಮತ್ತು ಹನ್ನೊಂದರಲ್ಲಿ ನಡೆಯುವ ಮುಷ್ಕರದ ಹಿಂದಿರುವ ‘ಮಾಸ್ಟರ್ ಮೈಂಡ್’!.
ಆದರೆ ಮುಷ್ಕರ ಬಾಧಿಸದಂತೆ ಪ್ರತಿ ಶಕ್ತಿಯಾಗಿ, ಚಿಕಿತ್ಸೆ ಬೇಕಾಗಿ ಬಂದವರನ್ನು ಪುತ್ತೂರಿನ ಹೊರಗಿರುವ ಆಸ್ಪತ್ರೆ ಗಳಿಗೆ ತಲುಪಿಸುವ ದೌತ್ಯವನ್ನು ಪಿ.ಎಫ್.ಐ, ಯೂತ್ ಕಾಂಗ್ರೆಸ್, ಎಸ್.ಡಿ.ಪಿ.ಐ. ಕೈಗೆತ್ತಿಕೊಂಡಿವೆ. ಕಾರು- ವ್ಯಾನು ಇದ್ದವರು ತಾವೂ ಸೇವೆಗೆ ಸಿದ್ಧ ಎನ್ನುತ್ತಿದ್ದಾರೆ. ಭೇಷ್, ಪಿ‌ಎಫ್.ಐ ಮತ್ತದರ ಸಹ ಸಂಘಟನೆಗಳಿಗೆ ಮತ್ತು ಪುತ್ತೂರಿನ ಯೂತ್ ಕಾಂಗ್ರೆಸ್ ಗೆ ಸೆಲ್ಯೂಟ್ ಹೇಳಲೇಬೇಕು.!
ದೀರ್ಘ ಕಾಲೀನ ನಿಗೂಢ ಆಲೋಚನೆಯ ಫಲವಾಗಿ
ಘೋಷಿಸಲ್ಪಟ್ಟ ಪುತ್ತೂರಿನ ಆಸ್ಪತ್ರೆಗಳ-ವೈದ್ಯರ ಗೊಡ್ಡು ಬೆದರಿಕೆ ಠುಸ್ಸ್ ಆಗುವುದು ಖಚಿತ, ಆಗಲೇ ಬೇಕು.

To Top
error: Content is protected !!
WhatsApp chat Join our WhatsApp group