ಅನಿವಾಸಿ ಕನ್ನಡಿಗರ ವಿಶೇಷ

ಮಲ್ಲೂರು ಮೂಲದ ಮಹಿಳೆ ಸೌದಿಯಲ್ಲಿ ನಿಧನ ; ಅಂತ್ಯಕ್ರಿಯೆಗೆ ನೆರವಾದ ಐ ಎಸ್ ಎಫ್

ವರದಿಗಾರ (ನ 9 ) : ಸೌದಿ ಅರೇಬಿಯಾಗೆ ಸಂದರ್ಶನ ವೀಸಾದಲ್ಲಿ ತನ್ನ ಕುಟುಂಬ ಸಮೇತ ( ತಬೂಕ್) ಗೆ ಆಗಮಿಸಿದ ಮಲ್ಲೂರ್ ಗಾಣೆಮಾರ್ ನಿವಾಸಿ ಮುಹಮ್ಮದ್ ಎಂಬವರ ಪತ್ನಿ ಆಯಿಷಾ(55) ಎಂಬವರು ಹೃದಯ ಸಂಬಂಧಿ ಖಾಯಿಲೆಯಿಂದ ತಬೂಕಿನ ಕಿಂಗ್ ಖಾಲಿದ್ ಆಸ್ಪತ್ರೆಯಲ್ಲಿ ನಿಧನರಾದರು.
ಹೃದಯ ಸಂಬಂಧಿಸಿದ ಕಾಯಿಲೆಗೆ ಚಿಕಿತ್ಸೆಗಾಗಿ ಆಯಿಶಾರವರನ್ನು ಎರಡು ದಿವಸಗಳ ಮುಂಚೆ ಆಯಿಶಾರವರ ಅಳಿಯ( ಮಗಳ ಗಂಡ) ನಿಯಾಜ್ ಬಜ್ಪೆ ಮತ್ತು ಸಮಾಜ ಸೇವಕ ಉಮರ್ ವಳಚ್ಚಿಲ್ ತಬೂಕಿನ ಕಿಂಗ್ ಖಾಲಿದ್ ಆಸ್ಪತ್ರೆಗೆ ದಾಖಲಿಸಿದ್ದರು.ಆಯಿಶಾರವರು ಆಸ್ಪತ್ರೆಯಲ್ಲಿ ದಾಖಲಾದ ಸುದ್ದಿ ತಿಳಿದ ಇಂಡಿಯನ್ ಸೋಶಿಯಲ್ ಫೋರಮ್ ತಬೂಕ್ ಘಟಕದ ಕಾರ್ಯಕರ್ತರು ಕುಟುಂಬದವರನ್ನು ಸಂಪರ್ಕಿಸಿ ಆಯಿಶಾರವರ ಚಿಕಿತ್ಸೆಗೆ ಬೇಕಾದ ಸೂಕ್ತ ದಾಖಲೆ ಹಾಗು ಜೀವ ವಿಮೆಗಳಿಗೆ ಸಂಬಂದಿಸಿದ ದಾಖಲೆಗಳನ್ನು ಆಸ್ಪತ್ರೆಗೆ ನೀಡಲು ಕುಟುಂಬಿಕರಿಗೆ ನೆರವಾದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಯಿಶಾರವರು 6-11-2018 ರಂದು ರಾತ್ರಿ 1:30 ಕ್ಕೆ ಇಹಲೋಕ ತ್ಯಜಿಸಿದರು.
ಮೃತರ ಅಂತ್ಯಕ್ರಿಯೆ ತಬೂಕಿನಲ್ಲಿ ನಡೆಸಲು ಕುಟುಂಬಿಕರು ಮತ್ತು ಇಂಡಿಯನ್ ಸೋಶಿಯಲ್ ಫೋರಮ್ ತೀರ್ಮಾನಿಸಿ ಅದರಂತೆಯೇ ತಕ್ಷಣ ಕಾರ್ಯ ಪ್ರವೃತ್ತರಾದ ಇಂಡಿಯನ್ ಸೋಶಿಯಲ್ ಫೋರಮ್ ತಬೂಕ್ ಘಟಕದ ವೆಲ್ಫೇರ್ ಕಾರ್ಯಕರ್ತರು ಅಂತ್ಯಕ್ರಿಯೆಗೆ ಬೇಕಾದ ಎಲ್ಲಾ ದಾಖಲೆ ಪತ್ರಗಳನ್ನು ಎರಡು ದಿನಗಳ ನಿರಂತರ ಪ್ರಯತ್ನದ ತರುವಾಯ ಸಂಗ್ರಹಿಸಿ,ಸಂಬಂಧಪಟ್ಟ ಇಲಾಖೆಗೆ ದಾಖಲೆಗಳನ್ನು ಹಸ್ತಾಂತರ ಮಾಡಿ,ದಿನಾಂಕ
8-11-2018 ರಂದು ತಬೂಕಿನ ಮಸ್ಜಿದುಲ್ ಬಾಝಿ ಯಲ್ಲಿ ಜನಝ ನಮಾಜ್ ನಿರ್ವಹಿಸಿ ಸ್ಥಳೀಯ ಕಬರಸ್ತಾನದಲ್ಲಿ ದಫನ ಕ್ರಿಯೆ
ನೆರವೇರಿಸಲಾಯಿತು.ಅಂತ್ಯಕ್ರಿಯೆಯಲ್ಲಿ ಮೃತರ ಪತಿ,ಪುತ್ರ,ಪುತ್ರಿ,ಅಳಿಯ,ಕುಟುಂಬಿಕರು ಮತ್ತು ಅನಿವಾಸಿ ಭಾರತೀಯರು ಭಾಗವಹಿಸಿದ್ದರು.

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group