ರಾಷ್ಟ್ರೀಯ ಸುದ್ದಿ

ನೋಟು ನಿಷೇಧವೇ ದೇಶದ ಎಲ್ಲಾ ಸಮಸ್ಯೆಗಳಿಗೆ ಕಾರಣ:ಮನಮೋಹನ್ ಸಿಂಗ್

ವರದಿಗಾರ(ನ.8): ನೋಟು ನಿಷೇಧವೇ ದೇಶದ ಎಲ್ಲಾ ಸಮಸ್ಯೆಗಳಿಗೆ ಕಾರಣ ಎಂದು  ಮಾಜಿ ಪ್ರಧಾನಿ ಡಾ.‌ ಮನಮೋಹನ್ ಸಿಂಗ್ ಹೇಳಿದ್ದಾರೆ.

500ರೂ. ಮತ್ತು 1000ರೂ. ಮುಖ ಬೆಲೆಯ ನೋಟನ್ನು ನಿಷೇಧಗೊಳಿಸಿ ಇಂದಿಗೆ ಎರಡು ವರ್ಷವಾದ ಹಿನ್ನೆಲೆಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಪ್ರಧಾನಿ ಮನಮೋಹನ್ ಸಿಂಗ್,  ನೋಟು ನಿಷೇಧವು ದೇಶದ ಪ್ರತಿಯೊಬ್ಬರನ್ನೂ ಕಾಡಿದೆ. ಎಲ್ಲಾ ವರ್ಗದವರ ಆರ್ಥಿಕತೆಗೂ ಇದು ಹೊಡೆತ ನೀಡಿದೆ. ನೋಟು ರದ್ದತಿ ಅರ್ಥ ವ್ಯವಸ್ಥೆ ಸುಧಾರಣೆಗೆ ಔಷಧಿ ಎಂದು ಬಿಂಬಿಸಲಾಗಿತ್ತು. ಆದರೆ ನೋಟು ನಿಷೇಧವು ದೇಶದ ಆರ್ಥಿಕ ವ್ಯವಸ್ಥೆಯನ್ನು ಸುಧಾರಿಸಿಕೊಳ್ಳಲಾರದಂತೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಮಾಡಿದೆ ಎಂದು ಅವರು ನೋಟು ನಿಷೇಧವನ್ನು ಕಟುವಾಗಿ ಟೀಕಿಸಿದ್ದಾರೆ.

ಜಿಡಿಪಿ ಕುಸಿತಕ್ಕೆ ನೋಟು ಅಮಾನ್ಯೀಕರಣವೇ ಕಾರಣ. ಆ ಶಾಕ್ ನಿಂದ ಇಂದಿಗೂ ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರು ಸುಧಾರಿಸಿಕೊಳ್ಳಲಾಗಿಲ್ಲ. ನಿರುದ್ಯೋಗ ಸಮಸ್ಯೆ ಹೆಚ್ಚುವುದಕ್ಕೂ ನೋಟು ಅಮಾನ್ಯವೇ ಕಾರಣ. ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಳಕ್ಕೂ ನೋಟು ಅಮಾನ್ಯೀಕರಣವೇ ಕಾರಣ ಮನಮೋಹನ್ ಸಿಂಗ್ ಪತ್ರಿಕಾ ಹೇಳಿಕೆಯಲ್ಲಿ ಹೇಳಿದ್ದಾರೆ.

To Top
error: Content is protected !!
WhatsApp chat Join our WhatsApp group