ರಾಜ್ಯ ಸುದ್ದಿ

ಸಿದ್ದರಾಮಯ್ಯ ರಣತಂತ್ರದೆದುರು ‘ಬಳ್ಳಾರಿ ರೆಡ್ಡಿ ಕೋಟೆ’ ಛಿದ್ರ : ಉಗ್ರಪ್ಪಗೆ ದಾಖಲೆಯ ಗೆಲುವು

ವರದಿಗಾರ (ನ 6) : ಗಣಿ ಧಣಿಗಳ ನಾಡು ಬಳ್ಳಾರಿಯಲ್ಲಿ ರೆಡ್ಡಿ ಸಹೋದರರಿಗೆ ತೀವ ಮುಖಭಂಗವಾಗಿದೆ. ಕಳೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ  ಬಾದಾಮಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರ ವಿರುದ್ಧ ಕಾಲೆಳೆದು ಪರಾಕ್ರಮ ಮೆರೆಯಲು ನೋಡಿದ್ದ ಬಿಜೆಪಿಯ ಶ್ರೀರಾಮುಲು ಅದಕ್ಕೆ ಬಳ್ಳಾರಿ ಲೋಕಸಭಾ ಉಪಚುನಾವಣೆಯಲ್ಲಿ ತಕ್ಕ ಬೆಲೆ ತೆತ್ತಿದ್ದಾರೆ. ಸಿದ್ದರಾಮಯ್ಯರನ್ನು ಸೋಲಿಸಲು ಪಣ ತೊಟ್ಟು ತನ್ನ ಬಳ್ಳಾರಿ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ತನ್ನ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದಿದ್ದ ಚುನಾವಣೆಯಲ್ಲಿ ತನ್ನ ಸಹೋದರಿ ಜೆ ಶಾಂತಾ ಅವರು ಕಾಂಗ್ರೆಸ್ಸಿನ ಉಗ್ರಪ್ಪನವರ ವಿರುದ್ಧ ದಾಖಲೆಯ ಅಂತರದಲ್ಲಿ ಸೋಲುಂಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತನ್ನ ವಿರುದ್ಧ ತೊಡೆ ತಟ್ಟಿದ್ದ ರೆಡ್ಡಿ ಸಹೋದರರಿಗೆ ಬಳ್ಳಾರಿ ಉಪಚುನಾವಣೆಯ ಫಲಿತಾಂಶದ ಮೂಲಕ ಸಿಹಿಯಾಗಿ ಪ್ರತೀಕಾರ ತೀರಿಸಿಕೊಂಡಿದ್ದಾರೆ. ಉಪಚುನಾವಣೆಯಲ್ಲಿ ರಾಜ್ಯದಲ್ಲೇ ತೀವ್ರ ಕುತೂಹಲ ಕೆರಳಿಸಿದ್ದ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಉಗ್ರಪ್ಪನವರು ಬಿಜೆಪಿಯ ಶಾಂತಾ ಅವರನ್ನು 2,28,255 ಮತಗಳ ಭರ್ಜರಿ ಅಂತರದಿಂದ ಸೋಲಿಸಿದ್ದಾರೆ. ಕಾಂಗ್ರೆಸ್ಸಿನ ಉಗ್ರಪ್ಪ 5,88,863 ಮತಗಳನ್ನು ಪಡೆದರೆ, ಬಿಜೆಪಿಯ ಜೆ ಶಾಂತಾ ಅವರು 3,60,608 ಮತಗಳನ್ನು ಪಡೆದರು. ಆ ಮೂಲಕ ಕಾಂಗ್ರೆಸ್ಸಿಗೆ ಪೈಪೋಟಿ ನೀಡಿದ್ದ ರೆಡ್ಡಿ ಸಹೋದರರ ‘ಬಳ್ಳಾರಿ ಕೋಟೆ’ ಛಿದ್ರವಾಗಿದೆ. ಉಗ್ರಪ್ಪನವರ ಇಂದಿನ ಗೆಲುವಿನ ಅಂತರ 1999ರಲ್ಲಿ ಕಾಂಗ್ರೆಸ್ ಅಧಿನಾಯಕಿಯಾಗಿದ್ದ ಸೋನಿಯಾ ಗಾಂಧಿ, ಸುಷ್ಮಾ ಸ್ವರಾಜ್ ವಿರುದ್ಧ  ಜಯಗಳಿಸಿದ್ದರ ಅಂತರವನ್ನೂ ಮೀರಿದ್ದಾರೆನ್ನುವುದು ವಿಶೇಷವಾಗಿದೆ.  ಸೋನಿಯಾ 56,100 ಮತಗಳ ಅಂತರದಲ್ಲಿ ಜಯಗಳಿಸಿದ್ದರು.

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group