ರಾಷ್ಟ್ರೀಯ ಸುದ್ದಿ

ಗಲಭೆ ಸೃಷ್ಟಿಸಲು ಶಬರಿಮಲೆ ವಿವಾದ ನಮಗೊಂದು ಸುವರ್ಣಾವಕಾಶ: ಕೇರಳ ಬಿಜೆಪಿ ರಾಜ್ಯಾಧ್ಯಕ್ಷ

ಶಬರಿಮಲೆ ವಿವಾದದ ಹಿಂದಿದೆ ಬಿಜೆಪಿಯ ರಾಜಕೀಯ ಲೆಕ್ಕಾಚಾರ!!

ಬಿಜೆಪಿಯ ಹಿಡನ್ ಅಜೆಂಡಾ ಬಯಲಿಗೆ!

ವರದಿಗಾರ (ನ.5): ‘ ಗಲಭೆ ಸೃಷ್ಟಿಸಲು ಶಬರಿಮಲೆ ವಿವಾದ ನಮಗೊಂದು ಸುವರ್ಣಾವಕಾಶವಾಗಿದೆ’ ಎಂದು ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಶ್ರೀಧರನ್​​​ ಪಿಳ್ಳೈ ಹೇಳಿಕೆ ನೀಡಿದ್ದು, ಹೇಳಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದ್ದು, ಈ ವಿವಾದದ ಹಿಂದೆ ಬಿಜೆಪಿಯ ರಾಜಕೀಯ ಲೆಕ್ಕಾಚಾರವಿತ್ತು ಎಂಬುವುದು ಇದೀಗ ಎಲ್ಲರ ಸಂಶಯದಂತೆ ಬಯಲಾಗಿದೆ.

ಅಲ್ಲದೇ ಶಬರಿಮಲೆಗೆ ಮಹಿಳೆಯರು ಪ್ರವೇಶಿಸಬಾರದು ಎಂದು ನಡೆಯುತ್ತಿರುವ ಹೋರಾಟದ ಹಿಂದೆ ಬಿಜೆಪಿಯ ಕೈವಾಡವಿದೆ ಎಂಬ ಶಂಕೆ ಮತ್ತಷ್ಟು ದಟ್ಟವಾಗಿದೆ ಎಂದು ಮೂಲಗಳು ವರದಿ ಮಾಡಿದ್ದು, ಪುಣ್ಯ ಧಾರ್ಮಿಕ ಕ್ಷೇತ್ರಗಳನ್ನು ದುರುಪಯೋಗಪಡಿಸಿ ಬಿಜೆಪಿಯು ತನ್ನ ರಾಜಕೀಯ ಅಸ್ತಿತ್ವದ ಕನಸನ್ನು ಕಾಣುತ್ತಿದ್ದ ಹಿಡನ್ ಅಜೆಂಡ ಮತ್ತೆ ಬೆಳಕಿಗೆ ಬಂದಿದೆ. ಅದೂ ರಾಜ್ಯಾಧ್ಯಕ್ಷರ ಹೇಳಿಕೆಯಿಂದ.

ಇತ್ತೀಚೆಗೆ ಸುಪ್ರೀಂಕೋರ್ಟ್​, ‘ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಿಗೆ ಎಲ್ಲಾ ಮಹಿಳೆಯರು ಪ್ರವೇಶಿಸಬಹುದು’ ಎಂಬ ತೀರ್ಪನ್ನು ಪ್ರಕಟಿಸಿತ್ತು. ತೀರ್ಪು ಬಗ್ಗೆ ಪರ ವಿರೋಧ ಚರ್ಚೆಗಳು ಪ್ರಾರಂಭಗೊಂಡಿತ್ತು. ಇದೇ ವೇಳೆ ಕೆಲ ಮಹಿಳೆಯರು ಬಿಗಿ ಪೊಲೀಸ್​​ ಬಂದೋಬಸ್ತ್ ಜೊತೆಗೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆಂದು ಮುಂದಾದಾಗ ಖುದ್ದು ಅರ್ಚಕರೇ ದೇವಸ್ಥಾನ ಮುಖ್ಯದ್ವಾರ ಮುಚ್ಚುವ ಮೂಲಕ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಇದೇ ತೀರ್ಪನ್ನು ದುರುಪಯೋಗಪಡಿಸಲು ಬಿಜೆಪಿ ಹರಸಾಹಸಪಟ್ಟಿತ್ತು ಎಂಬುವುದು ಸದ್ಯ ಜಗಜ್ಜಾಹೀರಾಗಿದೆ. ಮಹಿಳೆಯರ ಪ್ರವೇಶಕ್ಕೆ ಅರ್ಚಕರು ವ್ಯಕ್ತಪಡಿಸಿದ ವಿರೋಧ ಹಿಂದೆ ಬಿಜೆಪಿಯ ಕೈವಾಡವಿತ್ತು. ಕೇರಳ ಬಿಜೆಪಿಯ ರಾಜ್ಯಾಧ್ಯಕ್ಷ ಶ್ರೀಧರನ್​​​ ಪಿಳೈ ಆದೇಶದ ಮೇರೆಗೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಅರ್ಚಕರು ಬಾಗಿಲು ಮುಚ್ಚಿ ಪ್ರತಿಭಟಿಸಿದ್ಧಾರೆ ಎನ್ನಲಾಗಿದೆ. ಈ ಮಾಹಿತಿ ಎಲ್ಲವೂ ಶ್ರೀಧರನ್​​ ಮತ್ತು ಅರ್ಚಕರ ನಡುವೇ ಫೋನ್​​ ಸಂಭಾಷಣೆಯಲ್ಲಿ ದಾಖಲಾಗಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಶ್ರೀಧರನ್​​​ ಪಿಳ್ಳೈ ಅರ್ಚಕರೊಬ್ಬರ ಜೊತೆಗೆ ನಡೆಸಿದ ಸಂಭಾಷಣೆ ಭಾರೀ ವೈರಲ್​​ ಆಗಿದೆ. ಈ ಸಂಭಾಷಣೆಗೆ ಭಾರೀ ವಿರೋಧವೂ ವ್ಯಕ್ತವಾಗುತ್ತಿದ್ದು, ಧಾರ್ಮಿಕ ಕ್ಷೇತ್ರಗಳನ್ನು ಬಳಸಿ ರಾಜಕೀಯ ಅಸ್ತಿತ್ವದ ಕನಸು ಕಾಣುತ್ತಿರುವುದು ಮಾತ್ರ ವಿಪರ್ಯಾಸವೇ ಸರಿ.

ಈ ಸಂಬಂಧ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಶ್ರೀಧರನ್​​ ಅವರು, ಅರ್ಚಕರು ಬಾಗಿಲು ಬಂದ್​​ ಮಾಡುವ ಮೂಲಕ ಪ್ರವೇಶಕ್ಕೆ ವಿರೋಧ ವ್ಯಕ್ತಪಡಿಸುತ್ತೇವೆ ಎಂದರು. ನಮ್ಮ ವಿರುದ್ಧ ಸುಪ್ರೀಂಕೋರ್ಟ್​​ ಕಾನೂನು ಕ್ರಮಕ್ಕೆ ಮುಂದಾದರೇ ನೀವು ಬೆಂಬಲಕ್ಕೆ ನಿಲ್ಲುವಿರಾ ಎಂದು ಕೇಳಿದರು. ಈ ವೇಳೆ ನೀವೂ ಒಬ್ಬಂಟಿಯಲ್ಲ ಬಿಜೆಪಿ ನಿಮ್ಮೊಂದಿಗೆದೆ ಎಂದು ಸಾಥ್​​ ನೀಡಿದೆವು ಎಂದರು.

ಹೀಗಾಗಿ ಅರ್ಚಕರು ಹಿಂದೆ-ಮುಂದೆ ನೋಡದೆ ನಮ್ಮ ಬೆಂಬಲವಿದೆ ಎಂದು ಬಾಗಿಲು ಮುಚ್ಚಿ ಪ್ರತಿಭಟಿಸಿದರು. ಅರ್ಚಕರಿಗೆ ನಾವು ಬೆಂಬಲ ಸೂಚಿಸಿದ್ದೇವೆ ಎಂದು ಖುದ್ದು ಶ್ರೀಧರನ್​​ ಪಿಳ್ಳೈ ಸ್ಪಷ್ಟಪಡಿಸಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.

ವೀಡಿಯೋ ವೀಕ್ಷಿಸಿ:

 

To Top
error: Content is protected !!
WhatsApp chat Join our WhatsApp group