ಅನಿವಾಸಿ ಕನ್ನಡಿಗರ ವಿಶೇಷ

ಸುಳ್ಯದ ಉಮ್ರಾ ಯಾತ್ರಾರ್ಥಿ ಮಕ್ಕಾದಲ್ಲಿ ನಿಧನ; ಅಂತ್ಯ ಕ್ರಿಯೆಗೆ ನೆರವಾದ ಐಎಸ್ಎಫ್

ವರದಿಗಾರ (ನ.5):  ಪವಿತ್ರ ಉಮ್ರಾ ನಿರ್ವಹಿಸಲು ಮಂಗಳೂರಿನ ನೂರುಲ್ ಹುದಾ ಹಜ್ ಮತ್ತು ಉಮ್ರಾ ಟ್ರಾವೆಲ್ ಏಜೆನ್ಸಿ ಮೂಲಕ ಮಕ್ಕಾಗೇ ಆಗಮಿಸಿದ ಸುಳ್ಯದ ಜಾಲ್ಸೂರು ನಿವಾಸಿ ಮುಹಮ್ಮದ್ ಕುಂಜ್ಞಿ ಎಂಬವರು ಅನಾರೋಗ್ಯದಿಂದಾಗಿ ಮಕ್ಕಾದ ಕಿಂಗ್ ಅಬ್ದುಲ್ ಅಜೀಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ.

ಕುಟುಂಬಿಕರ ಇಚ್ಛೆಯಂತೆ ಮಕ್ಕಾದಲ್ಲಿಯೇ ಅಂತ್ಯಕ್ರಿಯೆ ನಡೆಸಲಾಗುವುದೆಂದು ತೀರ್ಮಾನಿಸಿ, ಸೌದಿ ಅರೇಬಿಯಾದ ಕಾನೂನಿನ್ವಯ ಅಂತ್ಯ ಕ್ರಿಯೆಗೆ ಬೇಕಾದ ಎಲ್ಲಾ ದಾಖಲೆ ಪತ್ರಗಳನ್ನು ಇಂಡಿಯನ್ ಸೋಶಿಯಲ್ ಫೋರಮ್ – ಐಎಸ್ಎಫ್ ಮಕ್ಕಾ ಘಟಕದ ಸದಸ್ಯರಾದ ಉಬೈದುಲ್ಲಾ ಬಂಟ್ವಾಳ ಮತ್ತು ಮೃತರ ಪುತ್ರ ಶಂಸುದ್ದೀನ್ ರವರು ಐಎಸ್ಎಫ್ ಜಿದ್ದಾ ವಲಯ ಸದಸ್ಯರಾದ ಅಶ್ರಫ್ ಬಜ್ಪೆಯವರ ನೇತೃತ್ವದಲ್ಲಿ ಸಂಗ್ರಹಿಸಿದರು. ಎಲ್ಲಾ ದಾಖಲೆ ಪತ್ರಗಳನ್ನು ಸಂಗ್ರಹಿಸಿ ಸಂಬಂಧಪಟ್ಟ ಇಲಾಖೆಗೆ ನೀಡಿ ಸೋಮವಾರ ದಂದು ಪವಿತ್ರ ಮಕ್ಕಾದ ಹರಮ್ ಷರೀಫ್ ನಲ್ಲಿ ಮೃತರ ಜನಾಝ ನಮಾಜ್ ನಿರ್ವಹಿಸಿ, ಮಕ್ಕಾದ ಶರಾಯ ದಫನ ಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಅಂತ್ಯಕ್ರಿಯೆಯಲ್ಲಿ ಕೆಸಿಎಫ್ ಅಧ್ಯಕ್ಷರಾದ ಹನೀಫ್ ಸಖಾಫಿ ಬೊಲ್ಮಾರ್, ಮುನೀರ್ ಫೈಜಿ, ಮೃತರ ಸಹೋದರ ಅಬ್ದುಲ್ ಖಾದರ್, ಪುತ್ರ ಸಂಶುದ್ದೀನ್, ಇಂಡಿಯನ್ ಸೋಶಿಯಲ್ ಫೋರಮ್ ನ ಶಾಹುಲ್ ಹಮೀದ್ ಬಂಟ್ವಾಳ , ವಿಖಾಯ ಸದಸ್ಯರಾದ  ಹಮೀದ್ ಕುರುಂಬಳ ಹಾಗು ಮೃತರ ಪುತ್ರಿ ಮತ್ತು ಬಂಧು ಮಿತ್ರರು ಪಾಲ್ಗೊಂಡಿದ್ದರು.

ವರದಿ: ಶಾಕಿರ್ ಹಕ್ ನೆಲ್ಯಾಡಿ (ಐಎಸ್ಎಫ್ ಮಕ್ಕಾ ಘಟಕ ಅಧ್ಯಕ್ಷ)

To Top
error: Content is protected !!
WhatsApp chat Join our WhatsApp group