ಸಾಮಾಜಿಕ ತಾಣ

ಸಂವಿಧಾನ ಸುಟ್ಟು ಹಾಕುವವರು ಸಮಾಜವನ್ನು ನಾಶ ಮಾಡುವ ಜನರು; ಅವರ ಬಗ್ಗೆ ಎಚ್ಚೆತ್ತುಕೊಳ್ಳಿ: ಸಿದ್ದರಾಮಯ್ಯ

‘ಯಾವ ಸರ್ಕಾರ ಇದ್ದರೂ ಅದೇ ಪೊಲೀಸ್‌ನವರು ಇರುತ್ತಾರೆ. ಸಿಬಿಐ, ಎಸಿಬಿಯಲ್ಲಿ ಇರೋರೆಲ್ಲ ಅದೇ ಪೊಲೀಸ್‌ನವರು. ಇದನ್ನು ಬಿಜೆಪಿಯವರು ಅರ್ಥ ಮಾಡಿಕೊಳ್ಳಲಿ ‘

ವರದಿಗಾರ (ನ.5): ಸಂವಿಧಾನ ಸುಟ್ಟು ಹಾಕುವವರು ಸಮಾಜವನ್ನು ನಾಶ ಮಾಡುವ ಜನರು. ಅವರ ಬಗ್ಗೆ ಎಚ್ಚೆತ್ತುಕೊಳ್ಳಿ ಎಂದು ಮಾಜಿ ಮುಖ್ಯಮಂತ್ರಿ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ‘ಸಂವಿಧಾನ ಸುಟ್ಟು ಹಾಕುವ ಕೆಲಸ ಆಗುತ್ತಿದೆ. ಕೆಲವರು ಅಧಿಕಾರಕ್ಕೆ ಬಂದಿರೋದೇ ಸಂವಿಧಾನ ಬದಲಾಯಿಸೋಕೆ ಅಂತಿದ್ದಾರೆ. ಇದು ದೇಶಕ್ಕೆ ಬಹಳ ಅಪಾಯಕಾರಿ’ ಎಂದು ಇತ್ತೀಚೆಗೆ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ನೀಡಿದ್ದ  ಸಂವಿಧಾನ ವಿರೋಧಿ ಹೇಳಿಕೆ ಬಗ್ಗೆ ಜನರು ಎಚ್ಚೆತ್ತುಕೊಳ್ಳುವಂತೆ ಅವರು ಕರೆ ನೀಡಿದ್ದಾರೆ.

‘ಜಂತರ್ ಮಂಥರ್‌ನಲ್ಲಿ ಸಂವಿಧಾನ ಸುಟ್ಟು ಹಾಕಲಾಯಿತು. ಅವರು ಸಮಾಜವನ್ನು ನಾಶ ಮಾಡುತ್ತಿರೋ ಜನ, ಅಂಥವರ ಬಗ್ಗೆ ಪ್ರಜ್ಞಾವಂತರು ಎಚ್ಚೆತ್ತುಕೊಳ್ಳಬೇಕಿದೆ’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

‘ನನಗೆ ಉಡುಗೊರೆಯಾಗಿ ದೊರೆತ ವಾಚ್‌ಗೆ ಸಂಬಂಧಿಸಿದಂತೆ ಎಸಿಬಿ ಕೂಲಂಕುಷ ತನಿಖೆ ಮಾಡಿ ‘ಬಿ’ ರಿಪೋರ್ಟ್ ಕೊಟ್ಟಾಗಿದೆ. ಈಗಲೂ ಎಸಿಬಿ ತನಿಖೆ ಮಾಡಲಿ. ಯಾವ ಸರ್ಕಾರ ಇದ್ದರೂ ಅದೇ ಪೊಲೀಸ್‌ನವರು ಇರುತ್ತಾರೆ. ಸಿಬಿಐ, ಎಸಿಬಿಯಲ್ಲಿ ಇರೋರೆಲ್ಲ ಅದೇ ಪೊಲೀಸ್‌ನವರು. ಇದನ್ನು ಬಿಜೆಪಿಯವರು ಅರ್ಥ ಮಾಡಿಕೊಳ್ಳಲಿ’ ಎಂದು ಬಿಜೆಪಿ ಸಲಹೆ ನೀಡಿದ್ದಾರೆ.

To Top
error: Content is protected !!
WhatsApp chat Join our WhatsApp group