ರಾಷ್ಟ್ರೀಯ ಸುದ್ದಿ

ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ದಂಪತಿಗೆ ಮತದಾನದ ಹಕ್ಕನ್ನು ನಿರಾಕರಿಸಿ: ಬಾಬಾ ರಾಮದೇವ್

  • ‘ನನ್ನಂತೆ ಬ್ರಹ್ಮಚಾರಿಯಾಗಿರಲು ಬಯಸುವವರಿಗೆ ವಿಶೇಷ ಗೌರವ ಸಿಗಬೇಕು’

  • ಜನಸಂಖ್ಯೆ ನಿಯಂತ್ರಣಕ್ಕೆ ಬಾಬಾ ರಾಮದೇವ್ ಕೊಟ್ಟ ‘ಅದ್ಭುತ’ ಸಲಹೆ

ವರದಿಗಾರ (ನ.5): ‘ದೇಶದಲ್ಲಿರುವ ಬ್ರಹ್ಮಚಾರಿಗಳಿಗೆ ಪ್ರೋತ್ಸಾಹ ಮತ್ತು ವಿಶೇಷ ಗೌರವ ನೀಡಬೇಕು. ಹಾಗೂ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ದಂಪತಿಗೆ ಮತದಾನದ ಹಕ್ಕನ್ನು ನಿರಾಕರಿಸಬೇಕು’ ಎಂದು ಯೋಗ ಗುರು,  ಪತಂಜಲಿ ಸಂಸ್ಥಾಪಕ ಬಾಬಾ ರಾಮದೇವ್ ಹೇಳಿದ್ದಾರೆ.

ಪತಂಜಲಿ ಯೋಗ ಪೀಠದಲ್ಲಿ ಈ ಬಗ್ಗೆ ಮಾತನಾಡಿರುವ ಬಾಬಾ ರಾಮದೇವ್, ಪುರಾತನ ಕಾಲದ ವೇದಗಳ ಪ್ರಕಾರ ಒಬ್ಬರು 10 ಮಕ್ಕಳನ್ನು ಹೊಂದಲು ಅವಕಾಶವಿತ್ತು. ಆದರೆ, ಇಂದು ಜನಸಂಖ್ಯೆ ಹೆಚ್ಚುತ್ತಿರುವುದರಿಂದ ಹೆಚ್ಚು ಮಕ್ಕಳಿಗೆ ಜನ್ಮ ನೀಡುವುದನ್ನು ನಿಯಂತ್ರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದವರಿಗೆ ಮತದಾನದ ಹಕ್ಕನ್ನು ನೀಡದಿದ್ದರೆ ಸ್ವಲ್ಪವಾದರೂ ಜನರು ಎಚ್ಚೆತ್ತುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

ಈ ದೇಶದಲ್ಲಿ ಯಾರು ಮದುವೆಯಾಗಲು ಇಚ್ಛೆ ಪಡುವುದಿಲ್ಲವೋ, ನನ್ನ ಹಾಗೆ ಬ್ರಹ್ಮಚಾರಿಯಾಗಿರಲು ಬಯಸುತ್ತಾರೋ ಅವರಿಗೆ ವಿಶೇಷ ಗೌರವ ಸಿಗುವಂತೆ ಮಾಡಬೇಕು ಎಂದ ಅವರು, ಜನಸಂಖ್ಯೆಯನ್ನು ನಿಯಂತ್ರಣಕ್ಕೆ ತರಲು ಪ್ರತಿಯೊಬ್ಬರೂ ಮನಸು ಮಾಡಬೇಕು ಎಂದು ಹೇಳಿದ್ದಾರೆ.

To Top
error: Content is protected !!
WhatsApp chat Join our WhatsApp group