ರಾಷ್ಟ್ರೀಯ ಸುದ್ದಿ

ಮೋದಿ ಆಡಳಿತದಲ್ಲಿ ಗೋರಕ್ಷಕರ ಅಟ್ಟಹಾಸ ಹೆಚ್ಚಳ ; ವಾಷಿಂಗ್ ಟನ್ ಪೋಸ್ಟ್ ಬಹಿರಂಗ ಪಡಿಸಿದ ಬೆಚ್ಚಿಬೀಳಿಸುವ ಸುದ್ದಿ

ವರದಿಗಾರ (ನ.1): ದೆಹಲಿ ಗದ್ದುಗೆಯಲ್ಲಿ ಪ್ರಧಾನಿಯಾಗಿ ಮೋದಿ ಅಧಿಕಾರವನ್ನು ಸ್ವೀಕರಿಸಿದ ಬಳಿಕ ದೇಶದಲ್ಲಿ ಕೋಮು ದ್ವೇಷದ ಪ್ರಕರಣಗಳು ಮತ್ತು ಗೋರಕ್ಷಕರ ಅಟ್ಟಹಾಸಕ್ಕೆ ಅಮಾಯಕ ಮುಸ್ಲಿಮರ ಬಲಿಯಾದ ಪ್ರಕರಣ ನಿರಂತರವಾಗಿ ಏರಿಕೆ ಕಂಡಿದೆ ಎಂಬ ಆಘಾತಕಾರಿ ಸುದ್ದಿಯನ್ನು ವಾಷಿಂಗ್ ಟನ್ ಪೋಸ್ಟ್ ವರದಿ ಬಹಿರಂಗಗೊಳಿಸಿದೆ.

ನರೇಂದ್ರ ಮೋದಿ ಸರಕಾರ ಕೇಂದ್ರದಲ್ಲಿ ಆಡಳಿತಕ್ಕೆ ಬಂದ ಬಳಿಕ ಧಾರ್ಮಿಕ-ಆಧಾರಿತ ದ್ವೇಷ-ಅಪರಾಧ ಪ್ರಕರಣಗಳು ದೇಶದಲ್ಲಿ ದಿನೇ ದಿನೇ ಏರಿಕೆ ಕಂಡಿದ್ದು, ಈ ಬಗ್ಗೆ ಆಂಗ್ಲ ಮಾಧ್ಯಮಗಳು ಸುದ್ದಿಗಳನ್ನು ಬಿತ್ತರಿಸಿವೆ. ಈ ಸುದ್ದಿಗಳನ್ನು ಆಧಾರವನ್ನಾಗಿಟ್ಟುಕೊಂಡು ರಚಿತವಾದ ಇಂಡಿಯಾ ಸ್ಪೆಂಡ್ ವರದಿ ಪ್ರಕಾರ, ಮುಸ್ಲಿಮರು ಇಂತಹ ಘಟನೆಗಳಲ್ಲಿ ಹೆಚ್ಚು ಬಲಿಪಶುಗಳಾಗಿದ್ದು, ಅಪರಾಧ ಕೃತ್ಯವನ್ನು ನಡೆಸಿದವರು ಹಿಂದೂಗಳು ಎಂದು ತಿಳಿದು ಬರುತ್ತದೆ. ಸರ್ಕಾರವು ಧಾರ್ಮಿಕ-ಆಧಾರಿತ ದ್ವೇಷದ ಅಪರಾಧಗಳನ್ನು ಪ್ರತ್ಯೇಕ ಅಪರಾಧಗಳೆಂದು ದಾಖಲಿಸಿಕೊಳ್ಳುವುದಿಲ್ಲ ಮತ್ತು ಆ ಬಗ್ಗೆ ಪ್ರತ್ಯೇಕ ದಾಖಲೆ ಒದಗಿಸುವುದಿಲ್ಲ ಎಂಬುವುದನ್ನು ನಮಗೆ ಇಲ್ಲಿ ಮುಖ್ಯವಾಗಿ ಗಮನಿಸಬಹುದಾಗಿದೆ.
ಅಲ್ಲಾಮುದ್ದೀನ್ ಅನ್ಸಾರಿ ಓರ್ವ ವ್ಯಾನ್ ಚಾಲಕ, ಅವರು ಭಾರತದಲ್ಲಿ ಗೋಮಾಂಸ ಕಳ್ಳ ಸಾಗಾಣಿಕೆಯ ಅಪಾಯವನ್ನು ತಿಳಿದಿದ್ದರು. ಗೋವನ್ನು ಹತ್ಯೆ ಭಾರತದ ಕೆಲ ರಾಜ್ಯಗಳಲ್ಲಿ ಕಾನೂನು ಬಾಹಿರವಾಗಿದ್ದು, ಈ ಮಧ್ಯೆ ಅನ್ಸಾರಿ ಜಾರ್ಖಾಂಡ್ ನ ಹಿಂದೂ ಉಗ್ರಗಾಮಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಒಂದು ದಿನ ಇವರು ವ್ಯಾನ್ ನಲ್ಲಿ ಗೋಮಾಂಸದ ಸಹಿತವಾಗಿ ಬಂದಾಗ ಜನಸಂದಣಿಯ ಮಾರುಕಟ್ಟೆಯಲ್ಲಿ ಕೇಸರಿ ಉಗ್ರಗಾಮಿಗಳು ಹತ್ಯೆಗಾಗಿ ಕಾಯುತ್ತಿದ್ದರು.
ಕೇಂದ್ರ ಸರಕಾರ ಇಂತಹ ಘಟನೆಗಳನ್ನು ಖಂಡಿಸಿದ್ದು, ರಾಜ್ಯ ಸರಕಾರ ಗೋರಕ್ಷಕರ ವಿರುದ್ಧ ಕ್ರಮವನ್ನು ಕೈಗೊಳ್ಳಬೇಕು ಮತ್ತು ಕಾನೂನು ಸುವ್ಯವಸ್ಥೆ ಪಾಲನೆಗೆ ಸರಕಾರ ಬದ್ಧವಾಗಿದೆ ಎಂದು ತಿಳಿಸಿದೆ. ಆದರೆ ವಿಮರ್ಶಕರ ಪ್ರಕಾರ, ಅಕ್ಟೋಬರ್ ನಿಂದ ಉತ್ತರ ಭಾರತ, ಉತ್ತರಪ್ರದೇಶ, ಬಿಹಾರ ಮತ್ತು ಜಾರ್ಖಂಡ್ ನಲ್ಲಿ ಈ ಬಾರಿ ವರದಿಯಾದ ಪ್ರಕರಣಗಳು ಬಿಜೆಪಿ ಮತ್ತು ಬಿಜೆಪಿ ಪರ ಸಂಘಟನೆಗಳ ಪ್ರಚೋದನೆ ಮತ್ತು ಬೆಂಬಲದಿಂದ ನಡೆದಿದೆ ಎಂದು ತಿಳಿದು ಬಂದಿದೆ. ಮತ್ತು ಈ ಬಗ್ಗೆ ದಾಖಲೆಗಳು ಕೂಡ ಲಭ್ಯವಾಗಿದೆ.

ಇನ್ನು ದೇಶದಲ್ಲಿ ಗೋರಕ್ಷಣೆ ಹೆಸರಿನಲ್ಲಿ ಅಮಾಯಕ ಮುಸ್ಲಿಮರ ಮತ್ತು ದಲಿತರ ಹತ್ಯೆ ನಡೆಯುತ್ತಿದ್ದರೆ ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ ಮಾತ್ರ ಬಾಲಿಶಃವಾದಂತಹ ಹೇಳಿಕೆಯನ್ನು ನೀಡಿದ್ದು, ನಾಲ್ಕು ವರ್ಷಗಳಲ್ಲಿ ಕೇವಲ ಸಣ್ಣ ಸಣ್ಣ ಘಟನೆಗಳು ಮಾತ್ರ ನಡೆದಿದೆ ಎಂದು ಹೇಳುವ ಮೂಲಕ ಕೈನುಣುಚಿಕೊಂಡಿದ್ದಾರೆ.

To Top
error: Content is protected !!
WhatsApp chat Join our WhatsApp group