ರಾಷ್ಟ್ರೀಯ ಸುದ್ದಿ

ರಾಹುಲ್ ಗಾಂಧಿ ಉಜ್ಜೈನಿ ಭಾಷಣದ ಮಧ್ಯೆ ಮೋದಿ ಮೋದಿ ಘೋಷಣೆ; ವೈರಲ್ ವಿಡಿಯೋದ ಅಸಲಿಯತ್ತು

ನವದೆಹಲಿ(1-11-2018): ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮದ್ಯಪ್ರದೇಶದ ಉಜ್ಜೈನಿಯಲ್ಲಿ ಭಾಷಣ ಮಾಡುತ್ತಿರುವಾಗ ವೇದಿಕೆಯ ಮುಂಭಾಗದಲ್ಲಿ ನೆರೆದಿದ್ದ ಜನಸಂದಣಿ ಮೋದಿ ಮೋದಿ ಎಂದು ಘೋಷಣೆ ಕೂಗುವ ವಿಡಿಯೊ ವೈರಲ್ ಆಗಿದೆ. ಆದರೆ ಇದೀಗ ವಿಡಿಯೋ ಕ್ಲಿಪ್ ನ ಆಡಿಯೋ ಬದಲಾವಣೆ ಮಾಡಿರುವ ವಿಚಾರ ಬಹಿರಂಗವಾಗಿದ್ದು, ನೈಜ ವಿಡಿಯೋದ ತುಣುಕನ್ನು ಕಾಂಗ್ರೆಸ್ ತನ್ನ ಅಧಿಕೃತ ಯೂಟ್ಯೂಬ್ ಖಾತೆಯಲ್ಲಿ ಅಪ್ಲೋಡ್ ಮಾಡಿದೆ.

ರಾಹುಲ್ ಗಾಂಧಿ ಕಳೆದ ಅ.29ರಂದು ಉಜ್ಜೈನಿಯಲ್ಲಿ ಭಾಷಣ ಮಾಡುತ್ತಿರುವಾಗ ಕೇಂದ್ರ ಸರಕಾರ ಮತ್ತು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿಯನ್ನು ನಡೆಸಿದ್ದು, ರಾಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ನಡೆದಿರುವ ಅವ್ಯವಹಾರ ಮತ್ತು ಸಿಬಿಐ ವಿವಾದದ ವಿರುದ್ಧವಾಗಿ ವಾಗ್ಧಾಳಿಯನ್ನು ನಡೆಸಿದ್ದರು.

ಇದೀಗ ಕಾಂಗ್ರೆಸ್ ಭಾಷಣದ ತುಣುಕುಗಳನ್ನು ತನ್ನ ಅಧಿಕೃತ ಯೂಟ್ಯೂಬ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದು, ಸಂಪೂರ್ಣ ವಿಡಿಯೋದಲ್ಲಿ, ಅಲ್ಲಿ ಸೇರಿದ್ದ ಜನಸಂದಣಿ ಮೋದಿ ಪರ ಘೋಷಣೆ ಕೂಗುವ ಯಾವುದೇ ಶಬ್ಧಗಳು ದಾಖಲಾಗಿಲ್ಲ. ರಾಹುಲ್ ಗಾಂಧಿ ರೈತರ ಬಗ್ಗೆ ಮಾತನಾಡುತ್ತಿರುವಾಗ ಜನಸಂದಣಿ ಮಧ್ಯೆ ವ್ಯಕ್ತಿಯೋರ್ವರು ಮಾತನಾಡುವುದು ದಾಖಲಾಗಿದ್ದು, ಈ ಬಗ್ಗೆ ಸ್ಪಷ್ಟತೆ ಕೂಡ ಇಲ್ಲವಾಗಿತ್ತು. ಆದರೆ ಈ ವಿಡಿಯೋವನ್ನು ಮಾರ್ಪಾಡು ಮಾಡಿ ರಾಹುಲ್ ಗಾಂಧಿ ಭಾಷಣ ಮಾಡುವಾಗ “ಮೋದಿ ಮೋದಿ” ಎಂದು ನೆರೆದಿರುವ ಜನಸಂದಣಿ ಅಡ್ಡಿಪಡಿಸುವ ರೀತಿಯಲ್ಲಿ ವಿಡಿಯೋಗೆ ಧ್ವನಿ ನಕಲನ್ನು ಮಾಡಲಾಗಿತ್ತು.

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group