ರಾಷ್ಟ್ರೀಯ ಸುದ್ದಿ

ಶಬರಿಮಲೆ ದೇವಸ್ಥಾನ: ಎಲ್ಲ ಧರ್ಮದವರೂ ಹೋಗಬಹುದು; ಕೇರಳ ಹೈಕೋರ್ಟ್

  • ರಾಜ್ಯದಲ್ಲಿರುವ ಧರ್ಮ ಸಾಮರಸ್ಯಕ್ಕೆ ಕೆಡುಕುಂಟು ಮಾಡುವ ರೀತಿಯಲ್ಲಿ ಅರ್ಜಿಯಿದೆ ಎಂದ ಹೈಕೋರ್ಟ್
  • ಬಿಜೆಪಿ ನಾಯಕನ ಅರ್ಜಿಗೆ ಹೈಕೋರ್ಟ್ ಅಸಮಾಧಾನ

ವರದಿಗಾರ (ಅ.29): ಶಬರಿಮಲೆ ದೇವಸ್ಥಾನ ಧರ್ಮ ಸಾಮರಸ್ಯದ ಪ್ರತೀಕವಾಗಿದೆ. ಈ ದೇವಾಲಯ ಎಲ್ಲರಿಗೂ ಸೇರಿದ್ದು. ಎಲ್ಲ ಧರ್ಮದವರೂ ಹೋಗಬಹುದು. ಯಾವ ರೀತಿಯ ಭಕ್ತರು ಬಂದರೂ ಅವರಿಗೆ ರಕ್ಷಣೆ ನೀಡಬೇಕು ಎಂದು ಕೇರಳ ಹೈಕೋರ್ಟ್ ಹೇಳಿದೆ.

ಹಿಂದೂ ಧರ್ಮದವರಿಗೆ ಮಾತ್ರ ದೇವಾಲಯಕ್ಕೆ ಪ್ರವೇಶ ನೀಡಬೇಕೆಂಬ ಬಿಜೆಪಿಯ ಟಿ.ಜಿ ಮೋಹನ್‍ ದಾಸ್ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ತೀರ್ಪು ನೀಡಿದೆ.

ಇರುಮುಡಿ ಇಲ್ಲದೆಯೂ ಶಬರಿಮಲೆಗೆ ಹೋಗಬಹುದು. ಹದಿನೆಂಟು ಮೆಟ್ಟಿಲು ಹತ್ತುವುದಾದರೆ ಮಾತ್ರ ಇರುಮುಡಿ ಕಡ್ಡಾಯ. ಇರುಮುಡಿ ಇಲ್ಲದೇ ಇದ್ದವರು ದೇವಸ್ಥಾನದ ಇನ್ನೊಂದು ಬಾಗಿಲು ಮೂಲಕ ಪ್ರವೇಶಿಸಬೇಕು. ಇದು ದೇವಾಲಯದಲ್ಲಿ ಇಷ್ಟು ವರ್ಷಗಳಿಂದ ನಡೆದುಕೊಂಡು ಬಂದ ರೀತಿಯಾಗಿದೆ ಎಂದು ಹೈಕೋರ್ಟ್ ಹೇಳಿದೆ.

ರಾಜ್ಯದಲ್ಲಿರುವ ಧರ್ಮ ಸಾಮರಸ್ಯಕ್ಕೆ ಕೆಡುಕುಂಟು ಮಾಡುವ ರೀತಿಯಲ್ಲಿ ಈ ಅರ್ಜಿ ಇದ್ದು ಅರ್ಜಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group