ಸುತ್ತ-ಮುತ್ತ

ಕುಂಡಡ್ಕ ನಾಗರಿಕರಿಂದ ಸ್ವಚ್ಛತಾ ಅಭಿಯಾನ

ಕುಂಡಡ್ಕ: ಬೆಳ್ತಂಗಡಿ ತಾಲೂಕಿನ ಬಾರ್ಯ ಗ್ರಾಮದ ಕುಂಡಡ್ಕ ಎಂಬಲ್ಲಿ ಊರ ನಾಗರಿಕರಿಂದ ಸ್ವಚ್ಚತಾ ಅಭಿಯಾನ ನಡೆಯಿತು.

ಸ್ಥಳೀಯ ಗ್ರಾಮ ಪಂಚಾಯತ್ ನಲ್ಲಿ ಗ್ರಾಮದ ಸ್ವಚ್ಛತೆಯ ಬಗ್ಗೆ ದೀರ್ಘ ಕಾಲದ ಮಾತುಕತೆ ನಡೆಸಿ, ಇದರ ನಿರ್ಣಯದ ಪ್ರಕಾರ ಈ ಒಂದು ಅಭಿಯಾನವನ್ನು ಮಾಡಿದರು. ಸರಕಾರಿ ಪ್ರಾಥಮಿಕ ಶಾಲೆ ಕೇರ್ಯಯ ದಿಂದ ಕುಂಡಡ್ಕ ಶಂಸುಲ್ ಹುದಾ ಜುಮ್ಮಾ ಮಸ್ಜಿದ್ ನ ದಾರಿಯಲ್ಲಿ ಬರುವ ರಸ್ತೆಯು ,ಬದಿಯಲ್ಲಿ ಹುಲ್ಲು,ಕಸ ಕಡ್ಡಿ,ತ್ಯಾಜ್ಯಗಳಿಂದ ಕೂಡಿದ್ದು ಸಂಚರಿಸಲು ಅಸ್ತವ್ಯಸ್ತವಾಗುತ್ತಿತ್ತು.ಈ ಒಂದು ರಸ್ತೆಬೀದಿಯನ್ನು ಸ್ವಚ್ಛ ಮಾಡುವ ಮುಖಾಂತರ ಗ್ರಾಮದ ನಾಗರಿಕರು ಜನಸೇವೆಗೆ ಪಾತ್ರರಾಗಿದ್ದಾರೆ.

ಈ ಸಂದರ್ಭದಲ್ಲಿ ರಾಜಕೀಯ ಮುಂಖಡರಾದ ಎಂ ಕೆ ಅಬ್ದುಸ್ಸಮದ್ ಹಾಗೂ ನಾಗರಿಕ ಸಮಿತಿ ಅಧ್ಯಕ್ಷರಾದ ಹಾರಿಸ್ ಹನೀಫಿ, ಎಂ ಕೆ ರಶೀದ್ ,ಹನೀಫ್ಇತರರು ಉಪಸ್ಥಿತರಿದ್ದರು

To Top
error: Content is protected !!
WhatsApp chat Join our WhatsApp group