ರಾಜ್ಯ ಸುದ್ದಿ

ಸಿಬಿಐ ನಲ್ಲಿ ನಡೆದ ಬೆಳವಣಿಗೆಗೆಲ್ಲಾ ಮೋದಿಯೇ ಕಾರಣ: ಸಿದ್ದರಾಮಯ್ಯ

‘ಪ್ರತಾಪ ಸಿಂಹ 2019ರಲ್ಲಿ ಮನೆಗೆ ಹೋಗ್ತಾನೆ’: ಭವಿಷ್ಯ ನುಡಿದ ಸಿದ್ದರಾಮಯ್ಯ

ವರದಿಗಾರ(ಅ.26): ‘ಸಿಬಿಐ ನಲ್ಲಿ ಏನೆಲ್ಲಾ ಬೆಳವಣಿಗೆ ನಡೆದಿದೆಯೋ ಇದಕ್ಕೆಲ್ಲಾ ನರೇಂದ್ರ ಮೋದಿಯವರೇ ಕಾರಣ’ ಎಂದು ಮಾಜಿ ಮುಖ್ಯಮಂತ್ರಿ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದಾರಾಮಯ್ಯ ಹೇಳಿದ್ದಾರೆ.

ಅವರು ಬಾಗಲಕೋಟೆಯ ಜಮಖಂಡಿ ತಾಲೂಕಿನ ಹಿರೇಪಡಸಲಗಿಯಲ್ಲಿ ಉಪಚುನಾವಣೆ ಪ್ರಚಾರದ ಸಂದರ್ಭ ಸುದ್ದಿಗಾರರೊಂದಿಗೆ ಸಿಬಿಐ ಆಂತರಿಕ ಬಿಕ್ಕಟ್ಟಿನಲ್ಲಿ ಕೇಂದ್ರ ಸರ್ಕಾರದ ಹಸ್ತಕ್ಷೇಪ ವಿಚಾರವಾಗಿ ಮಾತನಾಡುತ್ತಿದ್ದರು.

‘ಸಿಬಿಐ ನಲ್ಲಿ ಏನೆಲ್ಲಾ ಬೆಳವಣಿಗೆ ನಡೆದಿದೆಯೋ ಇದಕ್ಕೆಲ್ಲಾ ನರೇಂದ್ರ ಮೋದಿಯವರೇ ಕಾರಣ. ಯಾಕೆಂದರೆ ಅ ಸ್ವತಂತ್ರ ತನಿಖಾ ಸಂಸ್ಥೆಗಳನ್ನ ಇವರು ಅದರಲ್ಲಿ ಕೈ ಹಾಕಿ ಹಾಳು ಮಾಡಿದ್ದಾರೆ. ಕೇಂದ್ರ ಸರ್ಕಾರ ತಮ್ಮ ಮಾತುಗಳನ್ನು ಕೇಳುವವರನ್ನು ಕರೆತಂದಿರುವುದರಿಂದ ಅಸಮಾಧಾನ ಸ್ಫೋಟವಾಗಿದೆ’ ಎಂದು ಹೇಳಿದ್ದಾರೆ.

ಸಂಸದ ಪ್ರತಾಪ್ ಸಿಂಹ ಇತ್ತೀಚೆಗೆ ಸಿದ್ದರಾಮಯ್ಯ ವಿರುದ್ಧ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ‘ಪ್ರತಾಪ್​ ಸಿಂಹನನ್ನು ಯಾಕ್ರೀ ಗಂಭೀರವಾಗಿ ತಗೋತೀರಿ. ಆತ 2019ರಲ್ಲಿ ಮನೆಗೆ ಹೋಗ್ತಾನೆ’ ಎಂದು ಹೇಳಿದ್ದಾರೆ.

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group