ರಾಜ್ಯ ಸುದ್ದಿ

‘ಮೋದಿ ಒಬ್ಬ ಭ್ರಷ್ಟ ಪ್ರಧಾನಿ, ಅವರಿಗೆ ತೋಚಿದಂತೆ ಅಧಿಕಾರ ನಡೆಸುತ್ತಿದ್ದಾರೆ’: ಕಾಂಗ್ರೆಸ್

  • ಪ್ರಧಾನಿ ಮೋದಿಯಿಂದ ಸಿಬಿಐ ಸಂಸ್ಥೆಗಳ ದುರ್ಬಳಕೆ; ಆರೋಪ

ವರದಿಗಾರ(ಅ.26): ಮೋದಿ ಒಬ್ಬ ಭ್ರಷ್ಟ ಪ್ರಧಾನಿ, ಅವರಿಗೆ ತೋಚಿದಂತೆ ಅಧಿಕಾರ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

ರಫೇಲ್‌ ಯುದ್ಧ ವಿಮಾನ ಖರೀದಿಯಲ್ಲಿನ ಅವ್ಯವಹಾರದ ಬಗ್ಗೆ ತನಿಖೆ ನಡೆಸಲು ಮುಂದಾಗಿದ್ದ ಸಿಬಿಐ ನಿರ್ದೇಶಕ ಅಲೋಕ್‌ ವರ್ಮಾ ಅವರನ್ನು ಕೆಲಸದಿಂದ ವಜಾಗೊಳಿಸಿರುವುದನ್ನು ಖಂಡಿಸಿ ಕಾಂಗ್ರೆಸ್ ಗಂಗಾನಗರದ ಸಿಬಿಐ ಕಚೇರಿ ಮುಂಭಾಗ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪ್ರಧಾನಿ ಮೋದಿ ಸಿಬಿಐ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ರಫೇಲ್ ಯುದ್ದ ವಿಮಾನ ಖರೀದಿಯಲ್ಲಿ ಬೃಹತ್ ಹಗರಣ ನಡೆದಿದೆ‌‌. ಈ ಸಂಬಂಧ ತನಿಖೆ ಮಾಡಲು ಹೊರಟಿದ್ದಕ್ಕೆ ಅಲೋಕ್ ಅವರನ್ನು ರಾತ್ರೋರಾತ್ರಿ ಕೆಲಸದಿಂದ ತೆಗೆದುಹಾಕಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದಾರೆ..

ಇದೇ ಸಂದರ್ಭ ಸಿಬಿಐ ನಿರ್ದೇಶಕರನ್ನು ಮರು ನಿಯುಕ್ತಿಗೊಳಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ನ ನಾಯಕರು ಉಪಸ್ಥಿತರಿದ್ದರು.

 

To Top
error: Content is protected !!
WhatsApp chat Join our WhatsApp group