ಜಿಲ್ಲಾ ಸುದ್ದಿ

ಬಜ್ಪೆ ಠಾಣಾಧಿಕಾರಿಯಿಂದ ಮಹಿಳೆಯ ಮೇಲೆ ಹಲ್ಲೆ: ಜೆಡಿಎಸ್ ಖಂಡನೆ

  • ಪೊಲೀಸ್ ಕಮೀಷನರರು ಮಧ್ಯ ಪ್ರವೇಶಿಸಿ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಆಗ್ರಹ

ವರದಿಗಾರ(ಅ.26): ಗಂಜಿಮಠ ಮೂಲದ ಮುಸ್ಲಿಂ ಮಹಿಳೆ ಸಲೀಕ ಎಂಬವರ ಮೇಲೆ ಬಜ್ಪೆ ಪೊಲೀಸ್ ಠಾಣಾಧಿಕಾರಿ ಪರಶಿವಮೂರ್ತಿ ತಲೆಮರೆಸಿಕೊಂಡಿರುವ ಆರೋಪಿ ಗಂಡನ ಬಗ್ಗೆ ವಿಚಾರಿಸಲು ಠಾಣೆಗೆ ಕರೆಸಿ ಹಲ್ಲೆ ನಡೆಸಿರುವುದನ್ನು  ಜೆಡಿಎಸ್ ರಾಜ್ಯ ಪ್ರ.ಕಾರ್ಯದರ್ಶಿ ಇಕ್ಬಾಲ್ ಅಹ್ಮದ್ ಮುಲ್ಕಿ, ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷರಾದ ರಿಯಾಝ್ ಹೆಚ್.ಕಾರ್ನಾಡ್ ಹಾಗು ಆ.ಸ.ಘಟಕದ ನಿಸಾರ್ ಅಹ್ಮದ್  ತೀವ್ರವಾಗಿ ಖಂಡಿಸಿದ್ದಾರೆ.

ಹಳೆಯ ಪ್ರಕಣವೊಂದಕ್ಕೆ ಸಂಬಂಧಪಟ್ಟಂತೆ ಮಹಿಳೆಯ ಗಂಡ ತಲೆಮರೆಸಿಕೊಂಡಿದ್ದು, ಆರೋಪಿಯು ವಿಚಾರಣೆಗೆ ಸಿಗಲಿಲ್ಲವೆಂದು ಹಾಗು  ಆತ ತನ್ನ ಹೆಂಡತಿಯೊಂದಿಗೆ ನಿರಂತರವಾಗಿ ಟೆಲಿಫೋನ್ ಸಂಪರ್ಕದಲ್ಲಿದರೆಂದು ಅಪವಾದ ಹೊರೆಸಿ ವಿಚಾರಣೆಯ ನೆಪದಲ್ಲಿ ಅವರನ್ನು ಪೊಲೀಸ್ ಠಾಣೆಗೆ ಕರೆಸಿ ಅವರಿಗೆ ಠಾಣೆಯಲ್ಲಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಲ್ಲೆ ನಡೆಸಿರುವುದು ಕಂಡುಬಂದಿದೆ, ಇದರಿಂದ ಆಘಾತಗೊಂಡು ಮಹಿಳೆ ಚಿಕಿತ್ಸೆಗಾಗಿ ಆಸ್ಫತ್ರೆಗೆ ದಾಖಲಾಗಿರುತ್ತಾರೆ.

ವಿಚಾರಣೆಯ ನೆಪದಲ್ಲಿ ಮಹಿಳೆಯನ್ನು ಠಾಣೆಗೆ ಕರೆಸಿ ನಡೆಸಿದ ಹಲ್ಲೆ ಸ್ಪಷ್ಟ ಮಾನವ ಹಕ್ಕಿನ ಉಲ್ಲಂಘನೆಯಾಗಿರುತ್ತದೆ. ಅದಲ್ಲದೆ ಇದೆ ಠಾಣಾಧಿಕಾರಿಯ ಮೇಲೆ ಪಾಸ್ಪೋರ್ಟ್ ವಿಚಾರಣೆಗೆ ಬರುವ ಅಲ್ಪಸಂಖ್ಯಾತ ಸಮುದಾಯದವರನ್ನು ವಿನಾ ಕಾರಣ ಸತಾಯಿಸುತ್ತಿದ್ದಾರೆ ಎಂಬ ಅಪವಾದವು ಕೇಳಿಬರುತ್ತಿದೆ.

ಪೊಲೀಸ್ ಕಮೀಷನರರು ಈ ಎಲ್ಲಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಕ್ಷಣವೇ ಮಧ್ಯ ಪ್ರವೇಶಿಸಿ ಬಜ್ಪೆ ಠಾಣಾಧಿಕಾರಿ ಪರಶಿವಮೂರ್ತಿಯವರ ಮೇಲೆ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಜೆಡಿಎಸ್ ನಾಯಕರು ಆಗ್ರಹಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸ್ ಇಲಾಖೆ ಶೀಘ್ರದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸದೆ ಇದ್ದಲ್ಲಿ ಜೆಡಿಎಸ್ ಪಕ್ಷ ದ.ಕ. ಜಿಲ್ಲಾಧ್ಯಕ್ಷರಾದ ಮಹಮ್ಮದ್ ಕುಂಞಃ ಯವರೊಡನೆ ಚರ್ಚಿಸಿ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಮುಂದಿನ ಹೆಜ್ಜೆ ಇಡಲಾಗುವುದೆಂದು ದ.ಕ.ಜಿಲ್ಲಾ ಉಪಾಧ್ಯಕ್ಷರಾದ ರಿಯಾಝ್ ಹೆಚ್.ಕಾರ್ನಾಡ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

To Top
error: Content is protected !!
WhatsApp chat Join our WhatsApp group