ರಾಜ್ಯ ಸುದ್ದಿ

‘ಯಡಿಯೂರಪ್ಪ ಒಬ್ಬ ಸುಳ್ಳುಗಾರ, ಈಶ್ವರಪ್ಪನಿಗೆ ಮೆದುಳೇ ಇಲ್ಲ’; ಸಿದ್ದರಾಮಯ್ಯ

ವರದಿಗಾರ (ಅ. 25): ‘ಯಡಿಯೂರಪ್ಪ ಸಂಸದ ಸ್ಥಾನಕ್ಕೆ ಯಾಕೆ ರಾಜೀನಾಮೆ ನೀಡಿದರು?  ಈಗಾಗಲೇ ಅಧಿಕಾರ, ಹಣದ ರುಚಿ ನೋಡಿದ್ದಾರೆ. ಹಾಗಾಗಿ, ಈಶ್ವರಪ್ಪ, ಯಡಿಯೂರಪ್ಪ ಇಬ್ಬರೂ ಆಸ್ತಿ ಮಾಡಲು ಮುಗಿಬಿದ್ದಿದ್ದಾರೆ. ತಮ್ಮದೇ ಇಷ್ಟೆಲ್ಲ ಇಟ್ಟುಕೊಂಡು ನನ್ನ ಬಗ್ಗೆ ಮಾತನಾಡುವ ಈಶ್ವರಪ್ಪನಿಗೆ ಮೆದುಳೇ ಇಲ್ಲ’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಯಡಿಯೂರಪ್ಪನವರು ಲೋಕಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ತೆರವಾಗಿರುವ ಸ್ಥಾನಕ್ಕೆ ನಡೆಯಲಿರುವ ಉಪಚುನಾವಣೆಯಲ್ಲಿ ಕಾಂಗ್ರೆಸ್​-ಜೆಡಿಎಸ್​ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ಪರವಾಗಿ ಇಂದು ಶಿವಮೊಗ್ಗದಲ್ಲಿ ಉಪಚುನಾವಣೆ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಕುರುಬ ಮಠ ಕಟ್ಟಬೇಕಾದ ಸಮಯದಲ್ಲಿ ಹಣ ಸಂಗ್ರಹ ಮಾಡಬೇಕು ಎಂದು ಹೇಳಿದ್ದೆವು.  ಆಗ ಮೊದಲು ಸಭೆಗೆ ಆಗಮಿಸಿದ್ದ ಈಶ್ವರಪ್ಪ ನಂತರ ದುಡ್ಡು ಸಂಗ್ರಹ ಮಾಡಿಕೊಡಬೇಕಾಗುತ್ತದೆ ಎಂದು ಹೇಳಿದ ನಂತರ 2ನೇ ಸಭೆಗೆ ಚಕ್ಕರ್ ಹಾಕಿದ್ದರು.

ಈಶ್ವರಪ್ಪನವರದು ಒಂದು ಕತೆಯಾದರೆ ಯಡಿಯೂರಪ್ಪನವರದು ಇನ್ನೊಂದು ಕತೆ. ಯಡಿಯೂರಪ್ಪನವರ ಮಾತನ್ನು ನೀವು ಎಷ್ಟು ಬಾರಿ ನಂಬುತ್ತೀರಾ? ಬಂಗಾರಪ್ಪನವರಲ್ಲಿ ಮಾತ್ರ ನಾಯಕತ್ವದ ಗುಣವಿತ್ತು. ಬರಗಾಲ ಬಂದ ಸಮಯದಲ್ಲಿ ಬಂಗಾರಪ್ಪ ಎಲ್ಲ ವರ್ಗದವರಿಗೆ ಬಿತ್ತನೆ ಬೀಜ, ಗೊಬ್ಬರ ನೀಡಿದ್ದರು. ರೈತ ನಾಯಕ ಎಂದೆಲ್ಲ ಬಿಂಬಿಸಿಕೊಳ್ಳುತ್ತಿರುವ ಯಡಿಯೂರಪ್ಪ ಎಂದಾದರೂ ಇಂತಹ ಕೆಲಸ ಮಾಡಿದ್ದಾರಾ? ಚೆಕ್ ಮೂಲಕ ಲಂಚ ಪಡೆದ ವ್ಯಕ್ತಿ ಯಡಿಯೂರಪ್ಪ. ಅಂಥವರಿಂದ ನಾವು ಪ್ರಾಮಾಣಿಕತೆಯ ಮಾತು ಕೇಳಬೇಕಾಗಿದೆ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group