ಜಿಲ್ಲಾ ಸುದ್ದಿ

ಬ‌ಜ್ಪೆ ಪೋಲೀಸ್ ಇನ್ಸ್ ಪೆಕ್ಟ‌ರ್ ನಿಂದ ಮ‌ಹಿಳೆಯ‌ ಮೇಲೆ ಹ‌ಲ್ಲೆ: ವಿಮೆನ್ ಇಂಡಿಯಾ ಮೂಮೆಂಟ್ ಖಂಡ‌ನೆ

ವರದಿಗಾರ (ಅ 24 ) :  ಬ‌ಜ್ಪೆ ಪೋಲೀಸ್ ಇನ್ಸ್ ಪೆಕ್ಟ‌ರ್ ಪ‌ರಶಿವ‌ ಮೂರ್ತಿಯ‌ವ‌ರು ಅವಾಚ್ಯ‌ ಶ‌ಬ್ಧ‌ಗ‌ಳಿಂದ ನಿಂದಿಸಿ ಹ‌ಲ್ಲೆಗೈದಿರುವುದ‌ನ್ನು ವುಮೆನ್ ಇಲ್,ಡಿಯಾ ಮೂಮೆಂಟ್ ದ‌ಕ್ಷಿಣ ಕ‌ನ್ನ‌ಡ‌ ಜಿಲ್ಲೆ ಬ‌ಲ‌ವಾಗಿ ಖಂಡಿಸುತ್ತ‌ದೆ.
ಹ‌ಳೆಯ‌ ಪ್ರ‌ಕ‌ರ‌ಣ‌ಕ್ಕೆ ಸಂಬಂಧಿಸಿ ಪ‌ತಿಯು ಸಿಗ‌ಲಿಲ್ಲ‌ವೆಂದು ಪ‌ತ್ನಿಯ‌ನ್ನು ಪೋಲೀಸ್ ಠಾಣೆಗೆ ವಿಚಾರ‌ಣೆಗೆಂದು ಕ‌ರೆಸಿ ಅವಾಚ್ಯ‌ ಶ‌ಬ್ಧ‌ಗಳಿಂದ ನಿಂದಿಸಿ ಹ‌ಲ್ಲೆಗೈದಿರುವ‌ ಈ ಘ‌ಟ‌ನೆಯಿಂದ‌ ಮ‌ಹಿಳೆಯು ಪೋಲೀಸ್ ಠಾಣೆಯ‌ಲ್ಲೂ ಸುರ‌ಕ್ಷಿತ‌ಳ‌ಲ್ಲ‌ ಎಂಬುದ‌ನ್ನು ಬಿಂಬಿಸುತ್ತ‌ದೆ. ಮಾತ್ರ‌ವ‌ಲ್ಲ‌ ಇದು ಮಾನ‌ವ‌ ಹ‌ಕ್ಕು ಉಲ್ಲಂಘ‌ನೆಯ‌ ಸ್ಪ‌ಷ್ಟ‌ ನಿದರ್ಶ‌ನ‌ವಾಗಿದೆ. ಹೀಗೆ ಹ‌ಲ್ಲೆ ನ‌ಡೆಸಿದ‌ ಪೋಲೀಸ‌ರ‌ ಮ‌ನೋಸ್ಥಿತಿಯು ಬೇಲಿಯೇ ಎದ್ದು ಹೊಲ‌ ಮೇಯ್ದಂತಾಗಿದೆ. ಆದ್ದ‌ರಿಂದ‌ ಕೂಡ‌ಲೇ ಈ ಪ್ರ‌ಕ‌ರ‌ಣ‌ದ‌ಲ್ಲಿ ಪೋಲೀಸ್ ಕ‌ಮಿಷ‌ನ‌ರ್ ಮ‌ಧ್ಯಪ್ರ‌ವೇಶಿಸಿ ನಿಷ್ಪ‌ಕ್ಷ‌ಪಾತ‌ ತ‌ನಿಖೆ ನ‌ಡೆಸಿ ಮ‌ಹಿಳೆಗೆ ನ್ಯಾಯ‌ ಒದ‌ಗಿಸ‌ಬೇಕೆಂದು ವುಮೆನ್ ಇಂಡಿಯಾ ಮೂಮೆಂಟ್ ಆಗ್ರ‌ಹಿಸುತ್ತ‌ದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷೆಯಾಗಿರುವ ನಸ್ರೀನ ಬೆಳ್ಳಾರೆಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

To Top
error: Content is protected !!
WhatsApp chat Join our WhatsApp group