ಜಿಲ್ಲಾ ಸುದ್ದಿ

ಬಜ್ಪೆ ಇನ್ಸ್ ಪೆಕ್ಟರ್ ರಿಂದ ಮಹಿಳೆಯ ಮೇಲೆ ಹಲ್ಲೆ: SDPI ಖಂಡನೆ

ವರದಿಗಾರ (ಅ 24) : ಗಂಜಿಮಠ ಮೂಲದ ಮುಸ್ಲಿಂ ಮಹಿಳೆಯ ಮೇಲೆ ಬಜ್ಪೆ ಪೊಲೀಸ್ ಇನ್ಸ್ ಪೆಕ್ಟರ್ ಹಲ್ಲೆ ನಡೆಸಿರುವುದು ಖಂಡನೀಯವೆಂದು SDPI ಜಿಲ್ಲಾಧ್ಯಕ್ಷರಾದ ಅಥಾವುಲ್ಲಾ ಜೋಕಟ್ಟೆ ಪ್ರಖಟನೆಯಲ್ಲಿ ತಿಳಿಸಿದ್ದಾರೆ.

ಹಳೆಯ ಪ್ರಕರಣಕ್ಕೆ ಸಂಬಂಧಿಸಿ ಗಂಡ ವಿಚಾರಣೆಗೆ ಸಿಗಲಿಲ್ಲವೆಂದು ಪತ್ನಿಯನ್ನು ಪೊಲೀಸ್ ಠಾಣೆಗೆ ಕರೆದು ಕೊಂಡು ಹೋಗಿರುವುದು ಮಾತ್ರವಲ್ಲದೆ ಕೈಯಿಂದ ಮತ್ತು ಊಟ ಮಾಡುವ ಪ್ಲೇಟಿನಿಂದ ಹಲ್ಲೆ ನಡೆಸಿರುವುದು ಸ್ಪಷ್ಟ ಮಾನವ ಹಕ್ಕಿನ ಉಲ್ಲಂಘನೆಯಾಗಿದೆ..

ಪೊಲೀಸ್ ಕಮೀಷನರ್ ಈ ಪ್ರಕರಣಕ್ಕೆ ಸಂಬಂಧಿಸಿ ತಕ್ಷಣ ಮಧ್ಯ ಪ್ರವೇಶಿಸಿ ಇನ್ಸ್ಪೆಕ್ಟರ್ ಪರಶಿವಮೂರ್ತಿ ಯವರ ಮೇಲೆ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಇದೇ ಸಂದರ್ಭದಲ್ಲಿ ಆಗ್ರಹಿಸಿದ್ದಾರೆ.

SDPI ನಿಯೋಗ ಸಂತ್ರಸ್ತ ಮಹಿಳೆ ಸಲೀಖರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ್ದು ನಿಯೋಗದಲ್ಲಿ SDPI ಜಿಲ್ಲಾ ಕಾರ್ಯದರ್ಶಿ ಅಶ್ರಫ್ ಮಂಚಿ,ಪಾಪ್ಯುಲರ್ ಫ್ರಂಟ್ ರಾಜ್ಯ ಸಮಿತಿ ಸದಸ್ಯ ಅಶ್ರಫ್ AK,ಶೆರೀಫ್ ಪಾಂಡೇಶ್ವರ,ಆಸಿಫ್ ಬಜ್ಪೆ,ರಹೀಮ್ ಮತ್ತಿತರರು ಉಪಸ್ಥಿತರಿದ್ದರು…

To Top
error: Content is protected !!
WhatsApp chat Join our WhatsApp group