ಸಾಮಾಜಿಕ ತಾಣ

ಮಂಜೇಶ್ವರದ ಶಾಸಕ ಪಿ ಬಿ ರಝಾಕ್ ರ ಮರಣವನ್ನು ಹಬ್ಬದಂತೆ ಆಚರಿಸಿದ ಸಂಘಪರಿವಾರದ ದುರುಳರು !

ವರದಿಗಾರ (ಅ 20) :  ಇಂದು ಬೆಳಗ್ಗೆ ಮರಣ ಹೊಂದಿದ ಮಜೇಶ್ವರದ ಮುಸ್ಲಿಮ್ ಲೀಗ್ ಶಾಸಕ ಪಿ ಬಿ ಅಬ್ದುಲ್ ರಝಾಕ್ ರವರ ಮರಣವನ್ನು ಬಿಜೆಪಿ – ಸಂಘಪರಿವಾರದ ದುರುಳರು ಹಬ್ಬದಂತೆ ಆಚರಿಸಿದ್ದಾರೆ. ರಝಾಕ್ ರವರ ಮರಣಕ್ಕೆ ಅಯ್ಯಪ್ಪನೇ ಕಾರಣ, ಇಲ್ಲದಿದ್ದರೆ ಬಿಜೆಪಿಗೆ ಇಷ್ಟು ಬೇಗ ಒಬ್ಬ ಎಂ ಎಲ್ ಎ ಸಿಗುವ ಅವಕಾಶ ಲಭಿಸುತ್ತಿತ್ತೇ ಎಂದು ಪ್ರಶ್ನಿಸಿದ್ದಾರೆ !!  ಸಂಘಪರಿವಾರದ ಕಾರ್ಯಕರ್ತನಾಗಿರುವ ಮಧುಲಾಲ್ ಎನ್ನುವವನೊಬ್ಬ ತನ್ನ ಫೇಸ್ಬುಕ್ ಖಾತೆಯಲ್ಲಿ ಹೀಗೆಂದು ಬರೆದುಕೊಂಡು ವಿಕೃತಿ ಮೆರೆದಿದ್ದಾನೆ.

“ಅಯ್ಯಪ್ಪ ಎಲ್ಲವನ್ನೂ ನೋಡುತ್ತಿದ್ದಾನೆ. ಇಲ್ಲದಿದ್ದರೆ ಇಷ್ಟು ಬೇಗ ಬಿಜೆಪಿಗೆ ಒಂದು ಎಂ ಎಲ್ ಎ ಸಿಗುವ ಅವಕಾಶ ಕೊಡುತ್ತಿದ್ದನೇ? ಮಂಜೇಶ್ವರ ಶಾಸಕ ಅಬ್ದುಲ್ ರಝಾಕ್ ನಿಧನರಾಗಿದ್ದಾರೆ. ಶ್ರದ್ಧಾಂಜಲಿಗಳು !” ಎಂದು ಮಧು ಲಾಲ್ ಪೋಸ್ಟ್ ಹಾಕಿದ್ದಾನೆ. ಇದನ್ನು ಹಲವರು ತಮ್ಮ ಫೇಸ್ಬುಲ್ ವಾಲ್ ಗಳಿಗೆ ಶೇರ್ ಮಾಡಿದ್ದಾರೆ ಕೂಡಾ.

ಮಧು ಲಾಲನ ಪೋಸ್ಟಿಗೆ ಕಮೆಂಟ್ ಹಾಕಿರುವ ಸಂಘಪರಿವಾರ – ಬಿಜೆಪಿಯ ಕಾರ್ಯಕರ್ತರು ಶಾಸಕ ರಝಾಕ್ ರವರ ಮರಣವನ್ನು ಹಬ್ಬದಂತೆ ಆಚರಿಸಿ ಸಂಭ್ರಮಿಸಿ ತಮ್ಮ ಎಂದಿನ ವಿಕೃತಿ ಮೆರೆದಿದ್ದಾರೆ. “ನಿಯೋಜಿತ ಬಿಜೆಪಿ ಶಾಸಕರಿಗೆ ಅಭಿನಂದನೆಗಳು. ಅಯ್ಯಪ್ಪ ನೋಡುತ್ತಿದ್ದಾನೆ, ಭಕ್ತನ ಲೀಲೆಗಳನ್ನು, ಸ್ವಾಮಿ ಶರಣಂ ” ಎಂದು ಮತ್ತೊಬ್ಬ ದುರುಳ ಕಮೆಂಟಿಸಿದ್ದಾನೆ.

ರಝಾಕ್ ರ ಮರಣವಾರ್ತೆ ಹೊರಬೀಳುತ್ತಿದ್ದಂತೆ ಬಿಜೆಪಿ ಸಂಘಪರಿವಾರದ ವಾಟ್ಸಪ್ ಗ್ರೂಪುಗಳಲ್ಲಿ ಸುರೇಂದ್ರನ್ ತಮ್ಮ ಎಂ ಎಲ್ ಎ ಅಭ್ಯರ್ಥಿ ಎಂಬರ್ಥದಲ್ಲಿ ಚರ್ಚೆಗಳು ನಡೆಸಲು ಶುರು ಮಾಡಿಯಾಗಿತ್ತು! ಮಾತ್ರವಲ್ಲ ಸದ್ಯದ ವಿವಾದದ ಕೇಂದ್ರ ಬಿಂದುವಾಗಿರುವ ಶಬರಿಮಲೆಯ ಕುರಿತಂತೆ ತಮಗೆ ಅನುಕೂಲವಾಗುವಂತಹ ಪೋಸ್ಟ್ ಗಳನ್ನು ಹರಿಯಬಿಟ್ಟು, ಆ ಮೂಲಕ ಮುಂದಿನ ಚುನಾವಣೆಯಲ್ಲಿ ತಮ್ಮ ಲಾಭದ ಲೆಕ್ಕಾಚಾರಗಳ ಕುರಿತಂತೆಯೂ ಬಿಸಿ ಬಿಸಿ ಚರ್ಚೆ ನಡೆಸುತ್ತಿರುವುದು ಕಂಡು ಬಂದಿತ್ತು ಎನ್ನಲಾಗಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಮ್ ಲೀಗಿನ ಅಭ್ಯರ್ಥಿಯಾಗಿದ್ದ ಅಬ್ದುಲ್ ರಝಾಕ್ ತನ್ನ ಬಿಜೆಪಿಯ ಎದುರಾಳಿ ಸುರೇಂದ್ರನ್ ರ ವಿರುದ್ಧ ಕೇವಲ 89 ಮತಗಳ ಅಂತರದಿಂದ ವಿಜಯಶಾಲಿಯಾಗಿದ್ದರು. ಇದರ ವಿರುದ್ಧ ಸುರೇಂದ್ರನ್ ಕೋರ್ಟ್ ಮೆಟ್ಟಿಲೇರಿದ್ದು, ವಿಚಾರಣೆ ಹಂತದಲ್ಲೇ ಮಂಜೇಶ್ವರ ಕ್ಷೇತ್ರ ಮತ್ತೊಂದು ಉಪಚುನಾವಣೆಯನ್ನು ಎದುರಿಸಬೇಕಾಗಿ ಬಂದಿದೆ. ಸುರೇಂದ್ರ ಅವರೇ ಬಿಜೆಪಿಯ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದ್ದರೂ, ಸಂಘಪರಿವಾರದ ಕಾರ್ಯಕರ್ತರು ಮಾತ್ರ ವಿರೋಧಪಕ್ಷದ ಶಾಸಕನ ಮರಣವನ್ನು ಹಬ್ಬದಂತೆ ಆಚರಿಸಿದ್ದು ಬಿಜೆಪಿಯ ಕುರಿತಂತೆ ಜನರಿಗೆ ಜಿಗುಪ್ಸೆ ಹುಟ್ಟುವಂತೆ ಮಾಡಿದೆ ಎನ್ನಲಾಗಿದೆ.

To Top
error: Content is protected !!
WhatsApp chat Join our WhatsApp group