ರಾಷ್ಟ್ರೀಯ ಸುದ್ದಿ

ಪೊಲೀಸ್ ಅಧಿಕಾರಿಯ ಮೇಲೆ ಬಿಜೆಪಿ ಪಾಲಿಕೆ ಸದಸ್ಯನಿಂದ ಹಲ್ಲೆ

ವರದಿಗಾರ(.20): ಪೊಲೀಸ್​ ಅಧಿಕಾರಿಯ ಮೇಲೆ ಬಿಜೆಪಿ ಪಾಲಿಕೆ ಸದಸ್ಯ ಹೋಟೆಲ್​ವೊಂದರಲ್ಲಿ ಹಿಗ್ಗಾಮುಗ್ಗಾ  ಥಳಿಸಿರುವ ಘಟನೆ ಮೀರತ್​ನಲ್ಲಿ ನಡೆದಿದ್ದು, ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ನಡೆಸಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ  ವೈರಲ್​ ಆಗುತ್ತಿದೆ.

ಹೋಟೆಲ್​ನಲ್ಲಿ ಸಿಬ್ಬಂದಿಗಳ ವಿಷಯಕ್ಕೆ ಸಂಬಂಧಿಸಿದಂತೆ ಸುಮೊಹದ್ದಿಪೂರ್​ ಪೊಲೀಸ್​ ಠಾಣೆಯ​ ಇನ್ಸ್​ಪೆಕ್ಟರ್ ಸುಕ್ಪಾಲ್​ ​ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ ಬಿಜೆಪಿ ಪಾಲಿಕೆ ಸದಸ್ಯ ಮನಿಶ್​ ಶರ್ಮಾ ಪೊಲೀಸ್ ಅಧಿಕಾರಿಯ ಮೇಲೆ ತನ್ನ ದರ್ಪವನ್ನು ತೋರ್ಪಡಿಸಿ ಹಲ್ಲೆ ನಡೆಸಿದ್ದಾರೆ.

ವೀಡಿಯೋ ವೀಕ್ಷಿಸಿ:

ಘಟನೆ ತಿಳಿಯುತ್ತಿದ್ದಂತೆ ಹಿರಿಯ ಪೊಲೀಸ್​ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಬಿಜೆಪಿ ಕೌನ್ಸಿಲರ್ ಸೇರಿದಂತೆ ಅವರ ಜೊತೆ ಇದ್ದವರನ್ನು ಬಂಧಿಸಲಾಗಿದ್ದು, ದೂರು ದಾಖಲಿಸಲಾಗಿದೆ. ಗಾಯಗೊಂಡ ಪೊಲೀಸ್​ ಅಧಿಕಾರಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಕರಣದ ಕುರಿತು ತನಿಖೆಗೆ ನಡೆಯುತ್ತಿದ್ದು ವಿಡಿಯೋ ಆಧಾರದ ಮೇಲೆ ತನಿಖೆ ನಡೆಸುತ್ತೇವೆ ಎಂದು ಮೀರತ್​ ಎಸ್ಪಿ ರಂವಿಜಯ್​ ಸಿಂಗ್​ ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group