ರಾಷ್ಟ್ರೀಯ ಸುದ್ದಿ

‘2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ನಾವೆಲ್ಲರೂ ಸಂಘಟಿತರಾಗಬೇಕು’: ಬಿಜೆಪಿ ನಾಯಕ ಶತ್ರುಘ್ನ ಸಿನ್ಹಾ

ರಫೇಲ್ ಒಪ್ಪಂದದಲ್ಲಿ ಭ್ರಷ್ಟಾಚಾರ ನಡೆದಿದೆ: ಆರೋಪ

ವರದಿಗಾರ(ಅ.16): ಮುಂಬರುವ 2019ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ನಾವು ಸಂಘಟಿತರಾಗಬೇಕೆಂದು ಬಿಜೆಪಿಯ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ, ಸಂಸದ ಶತ್ರುಘ್ನ ಸಿನ್ಹಾ ವಿಪಕ್ಷಗಳಿಗೆ ಕರೆ ನೀಡಿದ್ದಾರೆ.

ಅವರು ಮುಝಪ್ಫರನಗರದ  ತಾವ್ಲಿ ಗ್ರಾಮದಲ್ಲಿ ರವಿವಾರ ಸಂಜೆ ನಡೆದ ರೈತರ ಪಂಚಾಯತ್‌ನಲ್ಲಿ ಮಾತನಾಡುತ್ತ ಬಿಜೆಪಿ ವಿರುದ್ಧನೇ ವಾಗ್ದಾಳಿ ನಡೆಸಿದ್ದು ಬಿಜೆಪಿಯನ್ನು ಸೋಲಿಸಲು ಸಂಘಟಿತರಾಗುವಂತೆ ಕರೆ ನೀಡಿರುವುದು ಸದ್ಯ ರಾಷ್ಟ್ರ ರಾಜಕಾರಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ರಫೇಲ್ ಒಪ್ಪಂದದ ಬಗ್ಗೆ ಮಾತನಾಡುತ್ತಾ, ರಫೇಲ್ ಒಪ್ಪಂದದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಹೇಳಿದ್ದಾರೆ.

ಒಪ್ಪಂದದಲ್ಲಿ ರಿಲಾಯನ್ಸ್ ಡಿಫೆನ್ಸ್ ಅನ್ನು ಫ್ರಾನ್ಸ್‌ನ ವೈಮಾನಿಕ ಸಂಸ್ಥೆ ಡಸ್ಸಾಲ್ಟ್ ಏವಿಯೇಶನ್‌ನ ಪಾಲುದಾರ ರನ್ನಾಗಿ ಮಾಡುವ ಬಗ್ಗೆ ಭಾರತ ಸರಕಾರ ಪ್ರಸ್ತಾಪಿಸಿತ್ತು ಎಂದು ಫ್ರಾನ್ಸ್‌ನ ಮಾಜಿ ಅಧ್ಯಕ್ಷ ಫ್ರಾಂಸ್ವಾ ಒಲಾಂಡ್ ಹೇಳಿರುವು ದನ್ನು ಫ್ರಾನ್ಸ್‌ನ ಪತ್ರಿಕೆಯೊಂದು ಉಲ್ಲೇಖಿಸಿರುವುದಾಗಿ ಅವರು ಹೇಳಿದ್ದಾರೆ.

ಹಿಂದೂಸ್ತಾನ ಏರೋನಾಟಿಕ್ ಲಿಮಿಟೆಡ್‌ನಂತಹ ಅನುಭವಿ ಕಂಪೆನಿಗಳನ್ನು ಯಾಕೆ ನಿರ್ಲಕ್ಷಿಸಲಾಯಿತು. ರಫೇಲ್ ತಯಾರಿಯ ಗುತ್ತಿಗೆಯನ್ನು ನೂತನ ಕಂಪೆನಿಗಳಿಗೆ ಯಾಕೆ ನೀಡಲಾಯಿತು? ಎಂದೂ ಅವರು ಕೇಂದ್ರ ಸರಕಾರವನ್ನು ಪ್ರಶ್ನಿಸಿದ್ದಾರೆ.

To Top
error: Content is protected !!
WhatsApp chat Join our WhatsApp group