ಅಭಿಪ್ರಾಯ

ನನ್ನ ದೇಶ ಇಂದೇನಾಗಿದೆ !! -ಕವನ

ಬೇಯುತಿದೆ ಅನ್ನ
ಬೆಲೆ ಏರಿಕೆಯ ತಾಪದಲಿ..
ಪದವೀಧರರು ರಸ್ತೆಯಲಿ,
ಪದವೇತರರು ವಿಧಾನಸೌಧದಲಿ,
ಜನ ಜೀವನ ಸಂಕಷ್ಟದಲಿ,

ಮಾಧ್ಯಮಗಳು ಇದ್ದವರ ಬಳಿಯಲ್ಲಿ
ಪ್ರಧಾನ ಮಂತ್ರಿ ಪ್ರವಾಸದಲ್ಲಿ..
ಅಧಿಕಾರವು ದುರುಪಯೋಗದಲ್ಲಿ ..
ಅಧಿಕಾರಿಗಳು ಗುಲಾಮಗಿರಿಯಲ್ಲಿ,

ರೈತರು ನೇಣು ಕುಣಿಕೆಯಲ್ಲಿ,
ಬ್ಯಾಂಕುಗಳು ಲೂಟಿಯಲ್ಲಿ..
ರೂಪಾಯಿ ಮೌಲ್ಯ ಕುಸಿತದಲ್ಲಿ,
ಸೈನಿಕರು ಅಪಾಯದಲ್ಲಿ,
ನಾರಿಯರು ಕಾಮುಕರ ಕೈಯಲ್ಲಿ,

ಗೋವುಗಳು ಸಂಸತ್ತಿನಲ್ಲಿ,
ಪೊಲೀಸರು ದೌರ್ಜನ್ಯದಲ್ಲಿ,
ಅಮಾಯಕರು ಜೈಲಿನಲ್ಲಿ,
ತಪ್ಪಿತಸ್ಥನು ಮೆರವಣಿಗೆಯಲ್ಲಿ
ನ್ಯಾಯವು ಮರೀಚಿಕೆಯಲ್ಲಿ,

ಪ್ರಜೆಗಳು ಮೌನವೃತದಲ್ಲಿ;
ಹಕ್ಕು ಪಡೆಯಲಾಗದ ಒದ್ದಾಟದಲ್ಲಿ
ಒಳಿತು ಬಯಸುವ ಹುಡುಕಾಟದಲ್ಲಿ
ನನ್ನ ದೇಶ ಇಂದೇನಾಗಿದೆ !!
ನನ್ನ ದೇಶ ಹಸನಾಗಬಾರದೆ? !!!

-ಅಬೂಬಕ್ಕರ್ ಸಿದ್ದೀಕ್ ಹೊಂಬೆಳಕು

To Top
error: Content is protected !!
WhatsApp chat Join our WhatsApp group