ಗುಟ್ಟು

9 ದಿನಗಳಲ್ಲಿ ಡೀಸೆಲ್ ಬೆಲೆಯಲ್ಲಿ ರೂ.2.24 ಹಾಗೂ ಪೆಟ್ರೋಲ್ ಬೆಲೆಯಲ್ಲಿ ರೂ.2.16 ಹೆಚ್ಚಳ!!!

ಮಾಧ್ಯಮದ ಸಹಾಯದೊಂದಿಗೆ ಪ್ರಜೆಗಳ ಕಣ್ಣಿಗೆ ಮಣ್ಣೆರಚುತ್ತಿದೆಯೇ ಸರಕಾರ??

ಅಂತಾರಾಷ್ಟ್ರೀಯ ಮಾರುಕಟ್ಟೆಯ ಕಚ್ಚಾ ತೈಲದ ಬೆಲೆಯಲ್ಲಿ ಮುಂದುವರಿಯುತ್ತಿದೆ ಕುಸಿತ!

ವರದಿಗಾರ (ಅ.14): ಹೆಚ್ಚುತ್ತಿರುವ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ರೂ.2.50 ಕಡಿಮೆ ಮಾಡಿ ಮೋದಿ ಸರಕಾರವು ಅದೇನೋ ದೊಡ್ಡ ಸಾಧನೆ ಮಾಡಿದಂತೆ ಅಬ್ಬರಿಸುತ್ತಿದ್ದ ಮಾಧ್ಯಮಗಳ ಕಿರುಚಾಟ ಮಾಸುವ ಮುನ್ನವೇ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಕ್ರಮವಾಗಿ ರೂ.2.16 ಹಾಗೂ ರೂ.2.24ರಷ್ಟು ಹೆಚ್ಚಳವಾಗಿದೆ.

ತೈಲ ಬೆಲೆ ಕಡಿತಗೊಳಿಸಿದ ಕೇವಲ 9 ದಿನಗಳಲ್ಲೇ ಮತ್ತೆ ಅದೇ ಹಂತಕ್ಕೆ ತಲುಪಿದ ತೈಲ ಬೆಲೆಯು ಮೋದಿ ಸರಕಾರದ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತಿದೆ.

ಅಕ್ಟೋಬರ್ 13ರಂದು ದೆಹಲಿಯಲ್ಲಿ ಪೆಟ್ರೋಲ್ ಬೆಲೆಯು ರೂ.82.66 ಆದರೆ, ಡೀಸೆಲ್ ಬೆಲೆಯು ರೂ.75.19 ಆಗಿದೆ.

ಅದೇ ರೀತಿ ಮುಂಬೈಯಲ್ಲಿ ಪೆಟ್ರೋಲ್ ಬೆಲೆಯು ರೂ.88.12 ಹಾಗೂ ಡೀಸೆಲ್ ಬೆಲೆಯು ರೂ.78.82 ಪ್ರತಿ ಲೀಟರ್ ಆಗಿದೆ.

ಅಕ್ಟೋಬರ್ ತಿಂಗಳ ಆರಂಭದಲ್ಲಿ ಕೇಂದ್ರ ಸರಕಾರವು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ರೂ.2.50 ಪ್ರತೀ ಲೀಟರ್ ಕಡಿತಗೊಳಿಸಿತ್ತು. ಅಂದು ದೆಹಲಿಯಲ್ಲಿ ಪೆಟ್ರೋಲ್ ಬೆಲೆ ರೂ.84 ಹಾಗೂ ಡೀಸೆಲ್ ರೂ.75.45 ಆಗಿತ್ತು. ಆದರೆ,ಇದೀಗ 9 ದಿನಗಳ ಬೆಳವಣಿಗೆಯನ್ನು ಗಮನಿಸಿದರೆ ಭಾರತದ ತೈಲ ಬೆಲೆಯು ಮತ್ತೆ ತನ್ನದೇ ಸಾಧನೆಯನ್ನು ಮುರಿಯುವ ಎಲ್ಲಾ ಲಕ್ಷಣಗಳೂ ಕಂಡು ಬರುತ್ತಿವೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಕುಸಿತ ಮುಂದುವರೆದರೂ, ಭಾರತದ ಮಾರುಕಟ್ಟೆಯಲ್ಲಿ ತೈಲ ಬೆಲೆ ಕಡಿಮೆಯಾಗುವ ಲಕ್ಷಣಗಳು ಕಂಡು ಬರುತ್ತಿಲ್ಲ ಎನ್ನುವುದು ವಿಷಾದನೀಯ!

To Top
error: Content is protected !!
WhatsApp chat Join our WhatsApp group