ರಾಜ್ಯ ಸುದ್ದಿ

ಗುಲ್ಬರ್ಗದ ವ್ಯಕ್ತಿ ಸೌದಿ ಅರೇಬಿಯಾದಲ್ಲಿ ನಿಧನ : ಮೃತದೇಹ ತವರಿಗೆ ಸಾಗಿಸಲು ಜಿಲ್ಲಾಡಳಿತ ನಿರ್ಲಕ್ಷ್ಯ ; ಐ ಎಸ್ ಎಫ್ ನೆರವು

ವರದಿಗಾರ :  ಸೌದಿ ಅರೇಬಿಯಾದ ಜೆದ್ದಾದಲ್ಲಿ ಉದ್ಯೋಗದಲ್ಲಿದ್ದ ಗುಲ್ಬರ್ಗ ಜಿಲ್ಲೆಯ ಜೇವರ್ಗಿ ತಾಲೂಕಿನ ಕುಂಬಡ ಗ್ರಾಮದ ಗೊಲ್ಲಾಳಪ್ಪ ಕಿಡ್ನಿ ವೈಫಲ್ಯದಿಂದ ದಿನಾಂಕ 27.09.2018 ರಂದು ಅಸುನೀಗಿದ್ದರು.ಮೃತದೇಹವನ್ನು ಊರಿಗೆ ತರಿಸಲು ಗೊಲ್ಲಾಳಪ್ಪ ಕುಟುಂಬ ಜಿಲ್ಲಾಡಳಿತಕ್ಕೆ ಮತ್ತು ಸ್ಥಳೀಯ ಶಾಸಕರಾದ ಅಜಯ್ ಸಿಂಗ್ ಹಾಗು ಗುಲ್ಬರ್ಗ ಸಂಸದರಾದ ಮಲ್ಲಿಕಾರ್ಜುನ ಖರ್ಗೆ ರವರಿಗೆ ಮನವಿ ಮಾಡಿತ್ತು.ಆದರೆ ವ್ಯಕ್ತಿ ನಿಧನರಾಗಿ ನಾಲ್ಕೈದು ದಿನಗಳಾದರೂ ಶಾಸಕರಾಗಲಿ,ಜಿಲ್ಲಾಡಳಿತವಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ.ಪರಿಪರಿಯಾಗಿ ಸರಕಾರದೊಂದಿಗೆ ಬೇಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಮೃತರ ಕುಟುಂಬ ಆಕ್ರೋಶ ವ್ಯಕ್ತಪಡಿಸಿದೆ.

ಎಸ್ಡಿಪಿಐಯಿಂದ ನೆರವಿನ ಭರವಸೆ
ಜಿಲ್ಲಾಡಳಿತ ಹಾಗು ಜನ ಪ್ರತಿನಿಧಿಗಳ ನಿರ್ಲಕ್ಷತೆಯ ಬಗ್ಗೆ ಮಾಧ್ಯಮಗಳ ಮೂಲಕ ವಿಷಯ ತಿಳಿದ ಸ್ಥಳೀಯ ಎಸ್ಡಿಪಿಐ ನಾಯಕರು ಗೊಲ್ಲಾಳಪ್ಪ ಕುಟುಂಬವನ್ನು ಸಂಪರ್ಕಿಸಿ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಿ ಸಹಾಯದ ಭರವಸೆಯನ್ನು ನೀಡಿದರು.ತಕ್ಷಣ ಕಾರ್ಯಪ್ರವೃತ್ತರಾದ ಜೇವರ್ಗಿ ತಾಲೂಕು ಎಸ್ಡಿಪಿಐ ಮುಖಂಡರು ಸೌದಿ ಅರೇಬಿಯಾದ ಅನಿವಾಸಿಗಳ ಸಂಘಟನೆಯಾದ ಇಂಡಿಯನ್ ಸೋಶಿಯಲ್ ಫೋರಮ್ ನಾಯಕರನ್ನು ಸಂಪರ್ಕಿಸಿ ವಿವರಗಳನ್ನು ತಿಳಿಸುತ್ತಾರೆ.ಇದರ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕಲು ಆಸ್ಪತ್ರೆ ಹಾಗು ಗೊಲ್ಲಾಳಪ್ಪ ಕೆಲಸ ನಿರ್ವಹಿಸುತ್ತಿದ್ದ ಕಂಪನಿಗೆ ಭೇಟಿ ನೀಡಿ ವಿವರಗಳನ್ನು ಸಂಗ್ರಹಿಸಿ ಐ ಎಸ್ ಎಫ್ ಅಧ್ಯಕ್ಷ ಮುಹಮ್ಮದ್ ಅಲಿ ಮೂಳೂರ್ ಮತ್ತು ಐ ಎಸ್ ಎಫ್ ರಾಜ್ಯ ಸಮಿತಿ ಸದಸ್ಯ ಹಾರಿಸ್ ಗೂಡಿನಬಳಿ ಮೃತದೇಹವನ್ನು ಊರಿಗೆ ತಲುಪಿಸುವ ವ್ಯವಸ್ಥೆಗೆ ಚಾಲನೆ ನೀಡುತ್ತಾರೆ.


ಪವರ್ ಆಫ್ ಅಟಾರ್ನಿ
ಸೌದಿ ಕಾನೂನಿನ ಪ್ರಕಾರ ಮೃತದೇಹವನ್ನು ಊರಿಗೆ ಸಾಗಿಸಲು ಮೃತ ವ್ಯಕ್ತಿಯ ಪತ್ನಿಯ ಒಪ್ಪಿಗೆ ಸೂಚನಾ ಪತ್ರ( ಪವರ್ ಆಫ್ ಅಟಾರ್ನಿ) ಯನ್ನು, ಅವರ ಸಂಬಂದಿಕರು ಯಾರು ಸೌದಿ ಅರೇಬಿಯಾದಲ್ಲಿ ಇಲ್ಲದ ಕಾರಣ ಮೃತದೇಹವನ್ನು ದಫನ ಮಾಡಲು ಅಥವಾ ಊರಿಗೆ ಸಾಗಿಸಲು ಇರುವ ಸಂಪೂರ್ಣ ಹಕ್ಕನ್ನು ಮೃತರ ಪತ್ನಿ ಕವಿತಾರವರು ಇಂಡಿಯನ್ ಸೋಶಿಯಲ್ ಫೋರಮ್ ಅಧ್ಯಕ್ಷ ಮುಹಮ್ಮದ್ ಅಲಿ ಮೂಳೂರ್ ರವರಿಗೆ ನೀಡಿದ್ದಾರೆ.ಕಾನೂನಾತ್ಮಕ ಇರುವ ಎಲ್ಲಾ ಕೆಲಸ ಕಾರ್ಯಗಳು ಈಗಾಗಲೇ ಪೂರ್ಣಗೊಂಡಿದ್ದು ಮುಂದಿನ ಒಂದೆರಡು ದಿನಗಳಲ್ಲಿ ಮೃತದೇಹವನ್ನು ಭಾರತಕ್ಕೆ ಕಳುಹಿಸಲಾಗುವುದು ಎಂದು ಮುಹಮ್ಮದ್ ಅಲಿಯವರು ತಿಳಿಸಿರುತ್ತಾರೆ. ಹೈದರಾಬಾದ್ ವಿಮಾನ ನಿಲ್ದಾಣ ಮೂಲಕ ಜೇವರ್ಗಿಗೆ ಮೃತದೇಹವನ್ನು ತಲುಪಿಸುವ ಸಂಪೂರ್ಣ ಜವಾಬ್ದಾರಿಯನ್ನು ಜೇವರ್ಗಿ ತಾಲೂಕು ಎಸ್ಡಿಪಿಐ ನಾಯಕ ರಫೀಕ್ ಜಮಾದಾರ ವಹಿಸಿಕೊಂಡಿದ್ದಾರೆ ಎಂದು ಗೊಲ್ಲಾಳಪ್ಪ ಕುಟುಂಬ ತಿಳಿಸಿದೆ.

ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ಆಕ್ರೋಶ
ಗೊಲ್ಲಾಳಪ್ಪ ಮೃತದೇಹವನ್ನು ಊರಿಗೆ ತಲುಪಿಸುವಲ್ಲಿ ಜಿಲ್ಲಾಡಳಿತ, ಸ್ಥಳೀಯ ಶಾಸಕರು ಹಾಗು ಸಂಸದರು ದಿವ್ಯ ನಿರ್ಲಕ್ಶ್ಯ ವಹಿಸಿದಕ್ಕೆ ಗೊಲ್ಲಾಳಪ್ಪ ಕುಟುಂಬ ಮತ್ತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಜಿಲ್ಲಾಡಳಿತ ಮತ್ತು ಜನಪ್ರತಿಧಿಗಳು ನಿರ್ಲಕ್ಷ್ಯ ವಹಿಸಿದ ಒಂದು ಪ್ರಕರಣವನ್ನು ಕೈಗೆತ್ತಿ ಗೊಲ್ಲಾಳಪ್ಪ ಮೃತದೇಹವನ್ನು ಊರಿಗೆ ತಲುಪಿಸಲು ನೆರವಾದ ಎಸ್ಡಿಪಿಐ ಮತ್ತು ಇಂಡಿಯನ್ ಸೋಶಿಯಲ್ ಫೋರಮ್ ಕಾರ್ಯವನ್ನು ಗೊಲ್ಲಾಳಪ್ಪ ಕುಟುಂಬ ಮುಕ್ತಕಂಠದಿಂದ ಶ್ಲಾಘಿಸಿತು.

To Top
error: Content is protected !!
WhatsApp chat Join our WhatsApp group