ರಾಜ್ಯ ಸುದ್ದಿ

ಪಾಪ್ಯುಲರ್ ಫ್ರಂಟ್ ಶೈಕ್ಷಣಿಕ ಸಬಲೀಕರಣ ಕಾರ್ಯಕ್ರಮ ವಿಸ್ತರಣೆ

ವರದಿಗಾರ (ಅ 13): ಸಮಾಜದ ಎಲ್ಲ ದಮನಿತ ವರ್ಗಗಳ ಸಬಲೀಕರಣವನ್ನೊಳಗೊಂಡ ಒಟ್ಟು ದೇಶದ ಸಮಗ್ರ ಸಬಲೀಕರಣಕ್ಕಾಗಿ ಪಾಪ್ಯುಲರ್ ಫ್ರಂಟ್ ಕಾರ್ಯಾಚರಿಸುತ್ತಿದೆ. ಇಂತಹ ಕಾರ್ಯಚಟುವಟಿಕೆಗಳ ಪೈಕಿ ಶೈಕ್ಷಣಿಕ ಸಬಲೀಕರಣವು ಅತಿ ಮಹತ್ವದ ಹೆಜ್ಜೆಗಳಲ್ಲೊಂದು. ಈ ನಿಟ್ಟಿನಲ್ಲಿ ಶಿಕ್ಷಣದ ಹಕ್ಕು ಕಾಯ್ದೆಯ ಪ್ರಕಾರ ಪ್ರತಿಯೊಂದು ಮಗು 10ನೇ ತರಗತಿ ವರೆಗಿನ ಪ್ರಾಥಮಿಕ ಶಿಕ್ಷಣದ ಅವಕಾಶ ಪಡೆದು, ಸಂಪೂರ್ಣ ಸಾಕ್ಷರತೆ ಸಾಧಿಸಿದ ರಾಷ್ಟ್ರ ನಿರ್ಮಾಣಕ್ಕಾಗಿ ಪಾಪ್ಯುಲರ್ ಫ್ರಂಟ್ ಕಾರ್ಯೋನ್ಮುಖವಾಗಿದೆ. ಮಾತ್ರವಲ್ಲದೆ, ದುರ್ಬಲ ವರ್ಗದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುವಂತಾಗಲು ನೆರವಾಗುತ್ತದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ದಮನಿತ ಸಮುದಾಯಗಳ ಸಬಲೀಕರಣದ ಗುರಿ ಸಾಧನೆಗಾಗಿ 2011ರಿಂದ ಬಹುಮುಖಿ ಯೋಜನೆಗಳನ್ನು ಹಮ್ಮಿಕೊಂಡು ಕಾರ್ಯಾಚರಿಸಲಾಗುತ್ತಿದೆ. ನಮ್ಮ ಹೆಚ್ಚಿನ ಯೋಜನೆಗಳಲ್ಲಿ ಶೇ.100 ಶೈಕ್ಷಣಿಕ ದಾಖಲಾತಿ ಖಾತರಿ ಪಡಿಸುವ “ಸ್ಕೂಲ್ ಚಲೋ”, ಅತಿಹಿಂದುಳಿದ ಗ್ರಾಮಗಳಲ್ಲಿ ವಿಶೇಷ ಶೈಕ್ಷಣಿಕ ಸಬಲೀಕರಣಕ್ಕಾಗಿ “ಸರ್ವಶಿಕ್ಷಾ ಗ್ರಾಮ್”, ಉನ್ನತ ಶಿಕ್ಷಣಕ್ಕಾಗಿ “ರಾಷ್ಟ್ರೀಯ ಸ್ಕಾಲರ್ ಶಿಪ್ ಯೋಜನೆ” ಮುಂತಾದ ಶೈಕ್ಷಣಿಕ ಕಾರ್ಯಕ್ರಮಗಳು ಹೊಂದಿರುತ್ತವೆ.

ಪಾಪ್ಯುಲರ್ ಫ್ರಂಟ್ ಪ್ರಸಕ್ತ ಚಾಲ್ತಿಯಲ್ಲಿರುವ “ಸರ್ವಶಿಕ್ಷಾ ಗ್ರಾಮ್ (ಎಸ್ ಎಸ್ ಜಿ) ಯೋಜನೆಯನ್ನು ಬಿಹಾರದ ಗ್ರಾಮೀಣ ಪ್ರದೇಶಗಳಿಗೆ ವಿಸ್ತರಿಸಲು ಯೋಜನೆ ಹಾಕಿದೆ. ಇದು ಇಲ್ಲಿನ ಮೊದಲ ಎಸ್ ಎಸ್ ಜಿ ಕ್ಲಸ್ಟರ್ ಮಾದರಿಯಾಗಿದ್ದು, ಈ ಮೂಲಕ ದೇಶದ ಅತಿಹಿಂದುಳಿದ ವರ್ಗವನ್ನು ಗ್ರಾಮೀಣ ಮಟ್ಟದಲ್ಲೇ ಶೈಕ್ಷಣಿಕ ಪ್ರಗತಿಯ ಮೂಲಕ ಸಬಲೀಕರಣಗೊಳಿಸುವ ಗುರಿ ಹೊಂದಲಾಗಿದೆ. ಪಾಪ್ಯುಲರ್ ಫ್ರಂಟ್ ಚೆಯರ್ ಮ್ಯಾನ್ ಇ. ಅಬೂಬಕರ್ ಕಟಿಹಾರ್ ನ ಮನ್ಸಾಹಿ ಮತ್ತು ಬರಾರಿ ಬ್ಲಾಕ್ ಗಳಲ್ಲಿ “ಸರ್ವಶಿಕ್ಷಾ ಗ್ರಾಮ್ (ಎಸ್ ಎಸ್ ಜೆ) ನ ಮೊದಲ ಮಾದರಿಯನ್ನು ಉದ್ಘಾಟಿಸಲಿದ್ದು ಈ ಎರಡು ಬ್ಲಾಕ್ ಗಳು ಅಲ್ಪಸಂಖ್ಯಾತ ಸಮುದಾಯದ ಬಾಹುಳ್ಯವಿರುವ ಪ್ರದೇಶಗಳಾಗಿದ್ದು, ದೇಶದಲ್ಲೇ ಶೈಕ್ಷಣಿಕವಾಗಿ ಅತಿಹಿಂದುಳಿದ ಕುಗ್ರಾಮಗಳಾಗಿವೆ. ಅಕ್ಟೋಬರ್ 14ರಂದು ಅಪರಾಹ್ನ ಇ. ಅಬೂಬಕರ್ ಅವರು ಮನ್ಸಾಹಿ ಮತ್ತು ಬರಾರಿ ಬ್ಲಾಕ್ ಗಳ ಸಾಹೇಬ್ ನಗರ್, ಬಂದ್ ತೋಲ ಮತ್ತು ಮಿಯಾಪುರ ಗ್ರಾಮಗಳಲ್ಲಿ ನೂರಾರು ಸಮುದಾಯ ಅಭಿವೃದ್ಧಿ ಸ್ವಯಂಸೇವಕರ ಉಪಸ್ಥಿತಿಯಲ್ಲಿ “ಸರ್ವಶಿಕ್ಷಾ ಗ್ರಾಮ್” ಯೋಜನೆಗೆ ಚಾಲನೆ ನೀಡಲಿದ್ದಾರೆ.

ಈ ಶೈಕ್ಷಣಿಕ ಕಾರ್ಯಕ್ರಮಗಳ ಮೂಲಕ ದಮನಿತ ಸಮುದಾಯಗಳ ಸಬಲೀಕರಣಕ್ಕಾಗಿ ಪಾಪ್ಯುಲರ್ ಫ್ರಂಟ್ ರೂಪಿಸಿರುವ ಯೋಜನೆಗಳಿಗೆ ಎಲ್ಲ ಕೇಡರ್ ಗಳು ಹಾಗೂ ಹಿತೈಷಿಗಳು ತಮ್ಮ ಸಹಕಾರವನ್ನು ಮುಂದುವರಿಸಲು ಪಾಪ್ಯುಲರ್ ಫ್ರಂಟ್ ಕೇಳಿಕೊಳ್ಳುತ್ತಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group