ರಾಷ್ಟ್ರೀಯ ಸುದ್ದಿ

ಅಗರ್ವಾಲ್ ರ ಗಂಗಾ ಪರ ಸತ್ಯಾಗ್ರಹವನ್ನು ಅವಗಣಿಸಿ ಮರಣದ ನಂತರ ಟ್ವೀಟ್ ಯಾಕೆ : ಮೋದಿಗೆ ರಮ್ಯಾ ಪ್ರಶ್ನೆ

ಬಲವಂತವಾಗಿ ಸತ್ಯಾಗ್ರಹವನ್ನು ತಡೆದ ಬಿಜೆಪಿಯ ವಿರುದ್ಧ ವ್ಯಾಪಕ ಆಕ್ರೋಶ !!

ವರದಿಗಾರ (ಅ 12) :  ಗಂಗಾನದಿಯ ಶುದ್ಧೀಕರಣಕ್ಕಾಗಿ ಜೂನ್ 22 ರಿಂದ 111 ದಿನಗಳ ಕಾಲ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಲೇ ನಿನ್ನೆ ಮರಣಹೊಂದಿದ ಜಿ ಡಿ ಅಗರ್ವಾಲ್ ರ ನಿಧನಕ್ಕೆ ಟ್ವೀಟ್ ಮೂಲಕ ಸಂತಾಪ ಸೂಚಿಸಿದ ಪ್ರಧಾನಿ ನರೇಂದ್ರ ಮೋದಿಯ ವಿರುದ್ಧ  ಟ್ವಿಟ್ಟರಿನಲ್ಲೇ ಮರುದಾಳಿ ನಡೆಸಿರುವ ಕಾಂಗ್ರೆಸ್ಸಿನ ಸಾಮಾಜಿಕ ತಾಣಗಳ ಮುಖ್ಯಸ್ಥೆ ರಮ್ಯಾ, ಅಗರ್ವಾಲ್ ಜೀವಂತವಿದ್ದು ಸತ್ಯಾಗ್ರಹ ನಡೆಸುತ್ತಿದ್ದಾಗ ಅವರನ್ನು ಅವಗಣಿಸಿ, ಈಗ ಟ್ವೀಟ್ ಮಾಡಿಯೇನು ಪ್ರಯೋಜನ ಎಂದು ಕಿಡಿ ಕಾರಿದ್ದಾರೆ. ಮಾತ್ರವಲ್ಲ ಗಂಗೆಯ ಮೂಲಕ ಜನರನ್ನು ಭಾವನಾತ್ಮಕವಾಗಿ ಬಳಸಿಕೊಂಡಿದ್ದ ಬಿಜೆಪಿಯು ಅಗರ್ವಾಲ್ ರ ‘ಸ್ವಚ್ಚ ಗಂಗಾ’ ಹೋರಾಟವನ್ನು ಕಡೆಗಣಿಸಿದ್ದರ ವಿರುದ್ಧ ಸಾಮಾಜಿಕ ತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಗಂಗಾನದಿಯನ್ನು ತಮ್ಮ ಚುನಾವಣಾ ಪ್ರಚಾರದಲ್ಲಿ ಬಳಸಿಕೊಂಡಿದ್ದ ಬಿಜೆಪಿ, ಕಾನ್ಪುರದ ಐಐಟಿಯಲ್ಲಿ ಪ್ರೊಫೆಸ್ಸರ್ ಆಗಿದ್ದ ಜಿ ಡಿ ಅಗರ್ವಾಲ ರ ಶುದ್ಧ ಗಂಗಾ ಹೋರಾಟದ ಕುರಿತಂತೆ ದಿವ್ಯ ಮೌನ ವಹಿಸಿತ್ತು. ಅಗರವಾಲ್ ಈ ಕುರಿತಂತೆ ಮೂರು ಪತ್ರಗಳನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದಿದ್ದು, ಪ್ರಧಾನಿಗಳಿಂದ ಕೂಡಾ ಪ್ರತ್ಯುತ್ತರ ಬಂದಿರಲಿಲ್ಲವೆನ್ನಲಾಗಿದೆ.  ಅದು ಮಾತ್ರವಲ್ಲ ಜೂನ್ 22 ರಂದು ಉತ್ತರಖಂಡದಲ್ಲಿ ಪ್ರಾರಂಭಿಸಿದ್ದ ತನ್ನ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಜುಲೈ 10 ರಂದು ರಾಜ್ಯ ಪೊಲೀಸರು ಬಲವಂತದಿಂದ ಅಗರವಾಲ್ ರನ್ನು ಸತ್ಯಾಗ್ರಹ ಸ್ಥಳದಿಂದ ಎತ್ತಂಗಡಿ ಮಾಡಿಸಿದ್ದರು. ಮಾತ್ರವಲ್ಲ ನಂತರ ಅಗರ್ವಾಲ್ ಇದರ ವಿರುದ್ಧ ಉತ್ತರಖಂಡದ ಬಿಜೆಪಿ ಸರ್ಕಾರದ ವಿರುದ್ಧ ಹೈಕೋರ್ಟಿನಲ್ಲಿ ಪಿ ಐ ಎಲ್ ಕೂಡಾ ಸಲ್ಲಿಸಿದ್ದರು.  ಇವುಗಳೆಲ್ಲವನ್ನೂ ಬಳಸಿಕೊಂಡು ಸಾಮಾಜಿಕ ತಾಣಗಳಲ್ಲಿ ಅಗರವಾಲ್ ಮರಣದ ಬಳಿಕ ಮೋದಿ ಮತ್ತು ಬಿಜೆಪಿಯನ್ನು ತೀವ್ರ ತರದಲ್ಲಿ ಗುರಿಪಡಿಸಿದ ಟ್ವೀಟ್ ಗಳು ಹರಿದಾಡತೊಡಗಿದೆ.

ಸಾಮಾಜಿಕ ತಾಣದ ಕಾರ್ಯಕರ್ತ ಧ್ರುವ್ ರತಿ ಈ ಕುರಿತು ಟ್ವೀಟ್ ಮಾಡಿದ್ದು, ಮೋದಿಯವರೇ ಅಗರ್ವಾಲ್ ರನ್ನು ನೆನಪಿಸುವುದನ್ನು, ಗಂಗಾ ಶುದ್ಧೀಕರಣಕ್ಕಾಗಿ ಕೆಲವೊಂದು ಆಗ್ರಹಗಳನ್ನಿಟ್ಟುಕೊಂಡು ಅವರು ಸತ್ಯಾಗ್ರಹ ನಡೆಸುತ್ತಿದ್ದರು. ಅವರ ಆಗ್ರಹಗಳನ್ನು ನೆರವೇರಿಸಿ ಎಂದಿದ್ದಾರೆ.

ಅದೇ ರೀತಿ ಹಲವು ರೀತಿಗಳಲ್ಲಿ ಟ್ವಿಟ್ಟರಿಗರು, ನರೇಂದ್ರ ಮೋದಿಯವರ ಗಂಗಾ ಶುದ್ಧೀಕರಣದ ಬಗ್ಗೆ ಇರುವ ಅನಾಸ್ಥೆಯನ್ನು ಬಯಲುಗೊಳಿಸಿದ್ದಾರೆ. ಒಟ್ಟಿನಲ್ಲಿ ಕಳೆದ ಲೋಕಸಭಾ ಚುನಾವಣೆಯ ವೇಳೆ ಅಧಿಕಾರಕ್ಕೇರಿದ 100 ದಿನಗಳೊಳಗಾಗಿ ಗಂಗೆಯನ್ನು ಶುದ್ಧಗೊಳಿಸಲಾಗುವುದು ಎಂಬ ಆಶ್ವಾಸೆಯೊಂದಿಗೆ ಅಧಿಕಾರಕ್ಕೇರಿದ ಮೋದಿ ಸರಕಾರ ಅಧಿಕಾರದಲ್ಲಿರುವಾಗಲೇ, ಇದೀಗ ಅದೇ ಹೆಸರಿನಲ್ಲಿ ಪರಿಸರವಾದಿ ಹಿರಿಯರೊಬ್ಬರನ್ನು ನಾವೆಲ್ಲಾ ಕಳೆದುಕೊಳ್ಳಬೇಕಾಗಿ ಬಂದಿರುವುದು ಪರಿಸ್ಥಿತಿಯ ವಿಪರ್ಯಾಸವೆನ್ನದೆ ವಿಧಿಯಿಲ್ಲ

ಟ್ವಿಟ್ಟರಿಗರ ಆಕ್ರೋಶದ ಕೆಲ ಟ್ವೀಟ್ ಗಳು :

https://twitter.com/sarvmanglamcom/status/1050491032939503618?s=19

https://twitter.com/PrachiP988/status/1050425532427300864?s=19

 

To Top
error: Content is protected !!
WhatsApp chat Join our WhatsApp group