ಸಮಾಜಸೇವೆ ಮಾಡಲು ಇಲ್ಲಿ ಬಂದು ಕುರ್ಚಿ ಮೇಲೆ ಕೂತುಕೊಂಡಿಲ್ಲ
ಅಭಿವೃದ್ಧಿ ವಿಚಾರದಲ್ಲಿ ತುಟಿ ಪಿಟಿಕ್ ಅನ್ನದ ಕೇಂದ್ರ ಸಚಿವರು!
ವರದಿಗಾರ (ಅ.12): ‘ನಾವು ಬಂದಿರುವುದು ಸಮಾಜಸೇವೆಗಲ್ಲ, ಅಧಿಕಾರ ಮಾಡುವುದಕ್ಕೆ’ ಎಂಬ ಬಾಲಿಶ ಹೇಳಿಕೆಯನ್ನು ಮತ್ತೊಮ್ಮೆ ಕೇಂದ್ರ ಕೌಶಲ್ಯಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗಡೆ ನೀಡಿದ್ದಾರೆ.
ಅವರು ಗುರುವಾರ ಶಿರಸಿಯಲ್ಲಿ ನಡೆದ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ವಿಶೇಷ ಸಭೆಯಲ್ಲಿ ಮಾತನಾಡುತ್ತಾ, ‘ಯರೋ ಕೇಳಬಹುದು ರಾಜಕಾರಣ ಮಾಡ್ತಾರೆ ಅಂತ. ಹೌದು, ನಾವು ರಾಜಕಾರಣ ಮಾಡಲೇ ಬಂದಿರುವುದು. ಮತ್ಯಾಕೆ ರಾಜಕಾರಣ ಮಾಡಕ್ಕಲ್ಲದೆ. ನಾವು ಇರುವುದೇ ರಾಜಕಾರಣ ಮಾಡುವುದಕ್ಕೆ. ಅದಕ್ಕೋಸ್ಕರವೇ ತಾಲೂಕು ಅಧ್ಯಕ್ಷರಾಗಿದ್ದೇವೆ. ಅದಕ್ಕೋಸ್ಕರನೇ ಕಾರ್ಯದರ್ಶಿಯಾಗಿದ್ದೇವೆ, ಜಿಲ್ಲಾ ಸಮಿತಿ ಸದಸ್ಯರಾಗಿದ್ದೇವೆ, ಶಾಸಕರು ಸಂಸದರಾಗಿದ್ದೇವೆ.ರಾಜಕಾರಣ ಬಿಟ್ಟು ನಾವೇನು ಮಾಡುವುದಿಲ್ಲ. ಇನ್ನು ಸಮಾಜಸೇವೆ ಮಾಡಲು ಇಲ್ಲಿ ಬಂದು ಕುರ್ಚಿ ಮೇಲೆ ಕೂತುಕೊಂಡಿಲ್ಲ. ರಾಜಕಾರಣ ಮಾಡುವುದಕ್ಕೇನೇ ಇಲ್ಲಿ ಬಂದು ಕೂತುಕೊಂಡಿದ್ದೇವೆ’ ಎಂಬ ಬಾಲಿಶ ಹೇಳಿಕೆಯನ್ನು ಮುಂದುವರಿಸುತ್ತಾ ‘ಅವರವರ ಭಾವಕ್ಕೆ, ಅವರವರ ಭಕುತಿಗೆ’ ಎಂದು ಹೇಳಿದ್ದಾರೆ.
ಒಂದಲ್ಲ ಒಂದು ರೀತಿಯ ವಿವಾದಾತ್ಮಕ ಹೇಳಿಕೆಯಲ್ಲಿ ಮಾತ್ರ ಚರ್ಚೆಗೆ ಗ್ರಾಸವಾಗುತ್ತಿರುವ ಕೇಂದ್ರ ಸಚಿವರು ಅಭಿವೃದ್ಧಿ ವಿಚಾರದಲ್ಲಿ ತುಟಿ ಪಿಟಿಕ್ ಅನ್ನದಿರುವುದು ಮಾತ್ರ ಖೇಧಕರ. ಜನರಿಂದಲೇ ಅಧಿಕಾರ ಪಡೆದು ಜನರ ಮುಂದೆ ತನ್ನ ಬಾಲಿಶ ಹೇಳಿಕೆಯನ್ನು ನೀಡಿ ಕೊಚ್ಚಿಕೊಂಡು ಅಧಿಕಾರವನ್ನು ದುರುಪಯೋಗಪಡಿಸುವುದು ಜನಪ್ರತಿನಿಧಿಗಳ ಅರ್ಹತೆಗೆ ಹೇಳಿದ್ದಲ್ಲ.
ವೀಡಿಯೋ ವೀಕ್ಷಿಸಿ:

