ಅನಿವಾಸಿ ಕನ್ನಡಿಗರ ವಿಶೇಷ

ವಿದೇಶದಿಂದ ಮರಳುವವರಿಗೆ ಸೂಕ್ತ ಸೌಲಭ್ಯ ಕಲ್ಪಿಸಲು ಯು.ಟಿ. ಖಾದರ್ ಗೆ ಮನವಿ ಸಲ್ಲಿಸಿದ ಐ.ಎಸ್.ಎಫ್

ವರದಿಗಾರ-ಮನಾಮ (ಆ.9): ವಿದೇಶದಲ್ಲಿ ಆರ್ಥಿಕ ಬಿಕ್ಕಟ್ಟಿನ ಪರಿಣಾಮ ಸ್ವದೇಶಕ್ಕೆ ವಾಪಾಸಗುತ್ತಿರುವ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರಿಂದ ಕರಾವಳಿ ಕರ್ನಾಟಕ ಮತ್ತು ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಅನೀರೀಕ್ಷಿತ ತುರ್ತು ಪರಿಸ್ಥಿತಿ ಘೋಷಣೆಯಾದಂತಿದೆ. ಆದ್ದರಿಂದ ಸ್ವದೇಶಕ್ಕೆ ವಾಪಾಸಗುತ್ತಿರುವ ಅನಿವಾಸಿ ಕನ್ನಡಿಗರ ಪುರ್ನವಸತಿ ಪ್ರಕ್ರಿಯೆಗಾಗಿ ಯೋಜನೆಗಳನ್ನು ಸರಕಾರವು ಹಮ್ಮಿಕೊಳ್ಳಬೇಕೆಂದು ಇಂಡಿಯನ್ ಸೋಶಿಯಲ್ ಫೋರಂ ಬಹರೈನ್ ನ ಕರ್ನಾಟಕ ಘಟಕವು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ರವರಿಗೆ ಮನವಿ ಮೂಲಕ ಆಗ್ರಹಿಸಿದೆ.

ಬಹರೈನ್ ಪ್ರವಾಸದಲ್ಲಿದ್ದ ವಸತಿ ಮತ್ತು ನಗರಾಭಿವೃಧ್ಧಿ ಸಚಿವ ಯು.ಟಿ. ಖಾದರ್ ರವರನ್ನು ಐ.ಎಸ್.ಎಫ್ ನಿಯೋಗವು ಭೇಟಿ ಮಾಡಿ ಮನವಿಯನ್ನು ಸಲ್ಲಿಸಿತು. ಮನವಿ ಸ್ವೀಕರಿಸಿ ಪ್ರತಿಕ್ರಿಯಿಸಿರುವ ಸಚಿವರು, ಈ ಬಗ್ಗೆ ವಿಶೇಷ ಗಮನ ಹರಿಸಿ ಸೂಕ್ತ ಸೌಲಭ್ಯ ಮತ್ತು ಯೋಜನೆಗಳನ್ನು ರೂಪಿಸಲಾಗುವುದು ಎಂದು ಸಚಿವರು ಭರವಸೆಯನ್ನು ನೀಡಿದರು.

ನಿಯೋಗದಲ್ಲಿ ಐ.ಎಸ್.ಎಫ್ ಕರ್ನಾಟಕ ಘಟಕದ ಅಧ್ಯಕ್ಷ ಇರ್ಫಾನ್ ಅಬ್ದುಲ್ ರಹಿಮಾನ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಫೀಝ್ ಉಳ್ಳಾಲ, ಮತ್ತು ಸಿದ್ದೀಕ್ ಮಂಜೇಶ್ವರ ಉಪಸ್ಥಿತರಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

To Top
error: Content is protected !!
WhatsApp chat Join our WhatsApp group