ರಾಷ್ಟ್ರೀಯ ಸುದ್ದಿ

ಸುಳ್ಳು ಭರವಸೆಯಿಂದಲೇ ಬಿಜೆಪಿ ಅಧಿಕಾರಕ್ಕೆ ಬಂದಿದೆ: ಕೇಂದ್ರ ಸಚಿವ ನಿತಿನ್ ಗಡ್ಕರಿ

‘ನಮಗೆ ಯಾವತ್ತೂ ಅಧಿಕಾರ ಹಿಡಿಯಲು ಸಾಧ್ಯವಿಲ್ಲ ಎನ್ನುವುದು ತಿಳಿದಿತ್ತು’

‘ಜನರು ಭರವಸೆಗಳನ್ನು ನೆನಪಿಸುವಾಗ ನಾವು ನಗುತ್ತೇವೆ’

ನಿತಿನ್ ಗಡ್ಕರಿ ಹೇಳಿಕೆಯ ವೀಡಿಯೊ ವೈರಲ್

ವರದಿಗಾರ ( ಅ.8): ಸುಳ್ಳು ಭರವಸೆಗಳಿಂದಲೇ ಮೋದಿ ನೇತೃತ್ವದ ಭಾರತೀಯ ಜನತಾ ಪಾರ್ಟಿ-ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದು ಬಿಜೆಪಿಯ ರಾಷ್ಟ್ರೀಯ ನಾಯಕ, ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿರುವ ವೀಡಿಯೋ ವೈರಲ್ ಆಗಿದ್ದು, ಬಿಜೆಪಿಯ ‘ಅಚ್ಛೇ ದಿನ್’ ಹಾಗೂ ಇನ್ನಿತರ ಹಲವಾರು ಸುಳ್ಳು ಭರವಸೆಯ ಸತ್ಯಾಸತ್ಯತೆಯನ್ನು ಬಹಿರಂಗಪಡಿಸಿಕೊಂಡಿದೆ.

ಖಾಸಗಿ ಚಾನೆಲ್ ‘ಕಲರ್ಸ್ ಮರಾಠಿಯ ಕಾರ್ಯಕ್ರಮವೊಂದರಲ್ಲಿ ಬಾಲಿವುಡ್ ನಟ ನಾನಾ ಪಾಟೇಕರ್ ಜೊತೆ ನಿತಿನ್ ಗಡ್ಕರಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ  ‘ಸುಳ್ಳು ಭರವಸೆಗಳಿಂದಲೇ ಬಿಜೆಪಿ ಅಧಿಕಾರವನ್ನು ಹಿಡಿದಿದೆ’ ಎಂಬ ವೀಡಿಯೋ ಇದೀಗ ಸಾಮಾಜಿಕ ತಾಣದಲ್ಲಿ ವೈರಲಾಗಿದ್ದು ಪ್ರತಿಪಕ್ಷ ಕಾಂಗ್ರೆಸ್ ವೀಡಿಯೋ ವನ್ನು ಟ್ವೀಟ್ ಮಾಡುವ ಮೂಲಕ ಬಿಜೆಪಿಯನ್ನು ಕುಟುಕಿದೆ.

ಕಾರ್ಯಕ್ರಮದಲ್ಲಿ ಬಿಜೆಪಿಯ ಕೇಂದ್ರ ಸಚಿವ ನಿತಿನ್ ಗಡ್ಕರಿ ಮಾತನಾಡುತ್ತಾ,“ನಮಗೆ ಯಾವತ್ತೂ ಅಧಿಕಾರ ಹಿಡಿಯಲು ಸಾಧ್ಯವಿಲ್ಲ ಎನ್ನುವುದು ತಿಳಿದಿತ್ತು. ಆದ್ದರಿಂದ ದೊಡ್ಡ ದೊಡ್ಡ ಭರವಸೆಗಳನ್ನು ನೀಡುವಂತೆ ಪಕ್ಷದ ನಾಯಕರು ಹೇಳಿದರು. ಒಂದು ವೇಳೆ ಅಧಿಕಾರಕ್ಕೆ ಬರದಿದ್ದರೆ, ನಾವು ಅವುಗಳಿಗೆ ಜವಾಬ್ದಾರರಾಗಿರುವುದಿಲ್ಲ. ಆದರೆ ಸಮಸ್ಯೆಯೆಂದರೆ ಈಗ ಜನರು ನಮಗೆ ಅಧಿಕಾರ ನೀಡಿದ್ದಾರೆ”ಎಂದು ವ್ಯಂಗ್ಯವಾಡುತ್ತಾ,  “ಸದ್ಯ ಜನತೆ ನಾವು ಚುನಾವಣಾ ಪೂರ್ವ ನೀಡಿದ್ದ ಭರವಸೆಗಳನ್ನು ನೆನಪಿಸುತ್ತಿದ್ದಾರೆ. ಆದರೆ ನಾವು ಇವುಗಳನ್ನು ಕೇಳಿ ನಗುತ್ತೇವೆ ಮತ್ತು ಮುಂದೆ ಸಾಗುತ್ತೇವೆ” ಎಂದು ಹೇಳಿದ್ದಾರೆ.

ವೀಡಿಯೋ ವೀಕ್ಷಿಸಿ:

ನಿತಿನ್ ಗಡ್ಕರಿಯ ಮೇಲಿನ ಹೇಳಿಕೆಯು ರಾಜಕೀಯದಲ್ಲಿ ಹೊಸ ಅಲೆಯನ್ನೆ ಎಬ್ಬಿಸಿದ್ದು, ಬಿಜೆಪಿಯ ವಿರುದ್ಧ ಮಾತುಗಳು ಕೇಳಿ ಬರಲು ಪ್ರಾರಂಭಿಸಿದೆ.

 

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group