ರಾಷ್ಟ್ರೀಯ ಸುದ್ದಿ

ಅಶ್ಲೀಲ ಸಂದೇಶ ರವಾನಿಸಿದ ಬಿಜೆಪಿ ಕಾರ್ಯಕರ್ತ: ಐಪಿಎಸ್ ಅಧಿಕಾರಿಯ ಪತ್ನಿಯಿಂದ ಚಪ್ಪಲಿಯೇಟು

ವರದಿಗಾರ (ಅ.7): ಅಶ್ಲೀಲ ಸಂದೇಶಗಳನ್ನು ರವಾನಿಸಿದ್ದ ಬಿಜೆಪಿ ಕಾರ್ಯಕರ್ತನೋರ್ವನಿಗೆ ಐಪಿಎಸ್ ಅಧಿಕಾರಿಯ ಪತ್ನಿ ಚಪ್ಪಲಿಯೇಟು ನೀಡಿದ ಘಟನೆ ರುದ್ರಾಪುರ (ಉತ್ತರಾಖಂಡ) ಎಂಬಲ್ಲಿ ನಡೆದಿದೆ. ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ ರಾಷ್ಟ್ರೀಯ ಸುದ್ದಿ ವಾಹಿನಿಗಳು ವರದಿ ಮಾಡಿವೆ.

ಐಪಿಎಸ್ ಅಧಿಕಾರಿಯ ಪತ್ನಿ ಚಪ್ಪಲಿಯೇಟು ತಿಂದ ಬಿಜೆಪಿ ಕಾರ್ಯಕರ್ತನನ್ನು ಸಿತಾರಗಂಜ್‌ನ ಈ ಬಿಜೆಪಿ ಕಾರ್ಯಕರ್ತ ಐಪಿಎಸ್ ಅಧಿಕಾರಿಯ ಕುಟುಂಬ ವಾಸವಿರುವ ಸೊಸೈಟಿಯಲ್ಲಿ ತನ್ನ ಕುಟುಂಬದೊಂದಿಗೆ ವಾಸವಾಗಿದ್ದಾನೆ. ಆತ ತನ್ನ ಮೊಬೈಲ್‌ಗೆ ಅಶ್ಲೀಲ ಸಂದೇಶಗಳನ್ನು ರವಾನಿಸುತ್ತಿದ್ದಾನೆ ಎಂದು ಐಪಿಎಸ್ ಅಧಿಕಾರಿ ಪತ್ನಿ ಸೊಸೈಟಿಯ ಅಧ್ಯಕ್ಷ ದೇವೇಂದ್ರ ಶಾಹಿ ಬಳಿ ದೂರಿಕೊಂಡಿದ್ದರು. ಶಾಹಿ ಮತ್ತು ಇತರರು ಶನಿವಾರ ಆತನ ಫ್ಲಾಟ್‌ಗೆ ತೆರಳಿ ವಿಚಾರಿಸಿದಾಗ ತಪ್ಪೊಪ್ಪಿಕೊಳ್ಳುವ ಬದಲು ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದ. ಇದರಿಂದ ಕೆರಳಿದ ಐಪಿಎಸ್ ಅಧಿಕಾರಿಯ ಪತ್ನಿ ಆತನನ್ನು ಚಪ್ಪಲಿಯಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಪೊಲೀಸರು ಸ್ಥಳಕ್ಕೆ ಧಾವಿಸಿದ್ದರಾದರೂ ಬಿಜೆಪಿ ಕಾಯಕರ್ತ ಬಳಿಕ ತನ್ನ ತಪ್ಪು ಒಪ್ಪಿಕೊಂಡ ಹಿನ್ನೆಲೆಯಲ್ಲಿ ಐಪಿಎಸ್ ಅಧಿಕಾರಿಯ ಪತ್ನಿ ಕ್ಷಮಿಸಿದ್ದರಿಂದ ಯಾವುದೇ ಪ್ರಕರಣ ದಾಖಲಾಗಿಲ್ಲ. ಮಹಿಳೆಯ ಪತಿ ಉತ್ತರ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಈ ಘಟನೆಯು ರಾಜ್ಯದ ಆಡಳಿತ ಬಿಜೆಪಿಯಲ್ಲಿ ಮುಜುಗರವನ್ನುಂಟು ಮಾಡಿದೆ.ಈ ಘಟನೆಯು ಪಕ್ಷದ ವರ್ಚಸ್ಸಿಗೆ ಚ್ಯುತಿಯುಂಟು ಮಾಡಿದೆ. ಪಕ್ಷವು ಘಟನೆಯ ಬಗ್ಗೆ ಗಮನ ಹರಿಸಬೇಕು ಮತ್ತು ಸೂಕ್ತ ಕ್ರಮವನ್ನು ಕೈಗೊಳ್ಳಬೇಕು ಎಂದು ಸ್ಥಳೀಯ ಬಿಜೆಪಿ ಶಾಸಕ ರಾಮಕುಮಾರ ಹೇಳಿದರು.

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group