ಜಿಲ್ಲಾ ಸುದ್ದಿ

ಕಳವು ಮಾಡಿದ ಬೈಕ್ ಖರೀದಿಸಿದ ಬಜರಂಗದಳ ನಾಯಕನ ಬಂಧನ

ವರದಿಗಾರ (ಅ.6): ಕಳವುಗೈದಿರುವ ಬೈಕನ್ನು ಖರೀದಿಸಿದ ಆರೋಪದಲ್ಲಿ ಬಜರಂಗದಳ ಜಿಲ್ಲಾ ಸಹ ಸಂಚಾಲಕನ್ನು ಬಂಧಿಸಿರುವುದು ವರದಿಯಾಗಿದೆ.

ಬಂಧಿತ ಬಜರಂಗಳದ ಜಿಲ್ಲಾ ಸಹ ಸಂಚಾಲಕನನ್ನು ಹೇರೂರಿನ ಶಶಾಂಕ್ ಗೌಡ ಎಂದು ಗುರುತಿಸಲಾಗಿದೆ. ಅವರನ್ನು ಗುರುವಾರದಂದು ಬಂಧಿಸಿ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

2015ರಲ್ಲಿ ಬೆಂಗಳೂರಿನಲ್ಲಿ ಬೈಕ್ ಕಳವುಗೈದ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಾಳೆಹೊನ್ನೂರು ಪೊಲೀಸರು ವಾಹನ ತಪಾಸಣೆ ವೇಳೆ ಬೈಕ್ ವಶಕ್ಕೆ ಪಡೆದು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಜಗ್ಗ ಎಂಬವರಿಂದ ಶಶಾಂಕ್ ಗೌಡ ಬೈಕ್ ಖರೀದಿ ಮಾಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತಿದೆ. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

To Top
error: Content is protected !!
WhatsApp chat Join our WhatsApp group