ಜಿಲ್ಲಾ ಸುದ್ದಿ

ಜಿಲ್ಲೆಯ ಶಾಂತಿ ಕದಡುವ ಸಂಘ ಪರಿವಾರದ ಕೃತ್ಯವನ್ನು ಸಹಿಸಲು ಸಾಧ್ಯವಿಲ್ಲ : ಎಸ್ ಡಿ ಪಿ ಐ

ವರದಿಗಾರ (ಸೆ 24) : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಸಾಮರಸ್ಯದ ವಾತಾವರಣ ನಿರ್ಮಾಣವಾಗುತ್ತಿರುವ ಸಂದರ್ಭದಲ್ಲಿ ಮತ್ತೊಮ್ಮೆ ಜಿಲ್ಲೆಯ ಶಾಂತಿಯನ್ನು ಕದಡಿ ಕೋಮು ಗಲಭೆಯನ್ನು ಸೃಷ್ಟಿಸಲು ಸಂಘಪರಿವಾರ ತಯಾರಾಗುತ್ತಿದೆ. ಅದರ ಭಾಗವಾಗಿದೆ ಮೂಡಬಿದ್ರೆಯ ಗಂಟಲ್ಕಟ್ಟೆಯಲ್ಲಿ ಇಮ್ತಿಯಾಝ್ ಎಂಬ ಅಲ್ಪಸಂಖ್ಯಾತ ಮುಸ್ಲಿಂ  ಯುವಕನ ಮೇಲೆ ತಲವಾರು  ದಾಳಿಯ ಮೂಲಕ ಕೊಲೆಯತ್ನ ನಡೆಸಿದ್ದು, ಇದನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ತೀವ್ರವಾಗಿ ಖಂಡಿಸುತ್ತದೆ.

ಸಂಘಪರಿವಾರ ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜಕೀಯ ಲಾಭವನ್ನು ಪಡೆಯಲು ಈ ರೀತಿಯ ಕೃತ್ಯವನ್ನು ನಡೆಸುತ್ತಿದ್ದಾರೆ. ಜಿಲ್ಲೆಯ ಶಾಂತಿಯನ್ನು ಕದಡಿ ಕೋಮು ದ್ವೇಷವನ್ನು ಹರಡಿಸುಲು ಪ್ರಯತ್ನಿಸುತ್ತಿರುವವರ ಮೇಲೆ ಪೊಲೀಸ್ ಇಲಾಖೆ ಕಠಿಣ ಕ್ರಮ ಜರುಗಿಸಬೇಕು ಹಾಗೂ ಕೊಲೆಯತ್ನ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಬೇಕು ಮತ್ತು ಗಂಟಲ್ಕಟ್ಟೆಯ ಪ್ರಕರಣದ ನೈಜ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಿ ಅವರ ಮೇಲೆ ಗೂಂಡಾ ಕಾಯ್ದೆಯನ್ನು ಹಾಕಬೇಕು.  ಇಲ್ಲದಿದ್ದಲ್ಲಿ ಜಿಲ್ಲೆಯಲ್ಲಿ ನಡೆಯುವ ಅಹಿತಕರ ಘಟನೆಗಳಿಗೆ ಜಿಲ್ಲಾಡಳಿತ ಮತ್ತು  ಪೊಲೀಸ್ ಇಲಾಖೆ ನೇರ ಹೊಣೆಯಾಗಿರುತ್ತದೆ ಎಂದು ಎಸ್ ಡಿ ಪಿ ಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

To Top
error: Content is protected !!
WhatsApp chat Join our WhatsApp group