ರಾಜ್ಯ ಸುದ್ದಿ

ತಲಾಖ್ ಬಗ್ಗೆ ಮಾತನಾಡುವ ಮೋದಿಯ ಪತ್ನಿ ಎಲ್ಲಿದ್ದಾರೆ? ಬಿ.ಟಿ.ಲಲಿತ ನಾಯ್ಕ್ ಪ್ರಶ್ನೆ

“ಮಹಿಳೆಯರ ಮೇಲಿನ ದೌರ್ಜನ್ಯ ನಿಲ್ಲಲಿ, ನಮ್ಮ ಸುರಕ್ಷತೆಗಾಗಿ ಹೋರಾಡೋಣ” ಮಹಿಳಾ ಅಭಿಯಾನ ಉದ್ಘಾಟನೆ

ವರದಿಗಾರ (ಸೆ. 23): ‘ಮುಸ್ಲಿಮ್ ಮಹಿಳೆಯರ ಬಗ್ಗೆ ಅಪಾರ ಕಾಳಜಿ ತೋರಿರುವ ಪ್ರಧಾನಿ ನರೇಂದ್ರ ಮೋದಿಯು ಇತ್ತೀಚೆಗೆ ಮುಸ್ಲಿಮ್ ಮಹಿಳೆಯರ ತಲಾಖ್ ವಿರೋಧಿ ಕಾನೂನನ್ನು ರಚಿಸಿದ್ದಾರೆ. ಆದರೆ ಮುಸ್ಲಿಂ ಮಹಿಳೆಯರ ಬಗ್ಗೆ ಕಾಳಜಿ ತೋರಿರುವ ಪ್ರಧಾನಿ ನರೇಂದ್ರ ಮೋದಿಯ ಧರ್ಮ ಪತ್ನಿ ಎಲ್ಲಿದ್ದಾರೆ.’ ಎಂದು ಮಾಜಿ ಸಚಿವೆ ಬಿ.ಟಿ.ಲಲಿತ ನಾಯ್ಕ್ ಪ್ರಶ್ನಿಸಿದ್ದಾರೆ.

ಅವರು ವುಮೆನ್ ಇಂಡಿಯಾ ಮೂವ್‍ಮೆಂಟ್ –ವಿಮ್ ಬೆಂಗಳೂರಿನ ಪಾಲನಾ ಭವನದಲ್ಲಿ ಹಮ್ಮಿಕೊಂಡಿದ್ದ “ಮಹಿಳೆಯರ ಮೇಲಿನ ದೌರ್ಜನ್ಯ ನಿಲ್ಲಲಿ, ನಮ್ಮ ಸುರಕ್ಷತೆಗಾಗಿ ಹೋರಾಡೋಣ” ಎಂಬ ಸುದೀರ್ಘ 6 ತಿಂಗಳ ಮಹಿಳಾ ರಾಷ್ಟ್ರೀಯ ಅಭಿಯಾನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ಪ್ರಧಾನಿ ನರೇಂದ್ರ ಮೋದಿಯ ಜನವಿರೋಧಿ ಮತ್ತು ಮಹಿಳಾ ವಿರೋಧಿ ನೀತಿಯ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಗೋವನ್ನು ಮಾತೆ ಎಂದು ಬಿಂಬಿಸಲಾಗುತ್ತಿದೆ. ಆದರೆ ಅದರ ಚರ್ಮದಿಂದಲೇ ಚಪ್ಪಲು ಹಾಗೂ ಇನ್ನಿತರ ದಿನಬಳಕೆಯ ವಸ್ತುಗಳನ್ನಾಗಿ ಉಪಯೋಗಿಸುತ್ತಾರೆ. ಆ ಸಂದರ್ಭದಲ್ಲೆಲ್ಲಾ ಅದು ಮಾತೆಯಾಗಿ ಕಾಣಿಸದಿರುವುದು ವಿಪರ್ಯಾಸ. ಗೋವು ನಮಗೆ ಮಾತೆಯಲ್ಲ. ಹಾಲು ಎಲ್ಲಾ ಪ್ರಾಣಿಗಳು ನೀಡುತ್ತದೆ. ಕೇವಲ ಹಾಲು ನೀಡುತ್ತದೆ ಎಂಬ ಕಾರಣಕ್ಕೆ ಗೋವನ್ನು ತಾಯಿ ಎಂದು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.


ಭಾರತವು ಕಾವಿದಾರಿಗಳ ಸೊತ್ತಲ್ಲ, ಇದು ನಮ್ಮ ದೇಶ, ನಮ್ಮ ಕಾನೂನು. ದೇಶದಲ್ಲಿ ಯಾವುದನ್ನು ತಿನ್ನಬೇಕು, ಯಾವುದನ್ನು ತಿನ್ನಬಾರದು, ಏನು ಮಾತನಾಡಬೇಕು ಎಂದು ನಿರ್ಧರಿಸಲಾಗುತ್ತಿದೆ ಮತ್ತು ನಮ್ಮ ಸಾಂವಿಧಾನಿಕ ಹಕ್ಕನ್ನು ಕಸಿಯಲಾಗುತ್ತಿದೆ ಎಂದು ಹೇಳಿದ್ದಾರೆ.
ಭಾರತದ ಸಂವಿಧಾನವನ್ನು ಉಳಿಸಿಕೊಳ್ಳುವ ಅಗತ್ಯೆಯಿದ್ದು, ಅದಕ್ಕಾಗಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಹೋರಾಟವನ್ನು ಸಂಘಟಿಸುವಂತೆ ನೆರೆದಿದ್ದ ಮಹಿಳೆಯರಿಗೆ ಅವರು ಕರೆ ನೀಡಿದ್ದಾರೆ. ಎಲ್ಲರೂ ಐಕ್ಯತೆಯೊಂದಿಗೆ ದೇಶದ ಶತ್ರು ಫ್ಯಾಶಿಸ್ಟ್ ಶಕ್ತಿಯನ್ನು ಎದುರಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ವೇದಿಕೆಯಲ್ಲಿ ವುಮೆನ್ ಇಂಡಿಯಾ ಮೂವ್‍ಮೆಂಟ್ ನ ನೂತನ ರಾಷ್ಟ್ರೀಯ ಅಧ್ಯಕ್ಷೆಯಾಗಿ ಆಯ್ಕೆಯಾದ ಮೆಹರುನ್ನಿಸಾ ಖಾನ್, ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ರಾಷ್ಟ್ರೀಯ ಸಮಿತಿ ಸದಸ್ಯೆ ಡಾ. ಅಸ್ಮ ಝೆಹ್ರಾ ಹೈದರಾಬಾದ್, ಮಾನವ ಹಕ್ಕುಗಳ ಹೋರಾಟಗಾರ್ತಿ ಮಲ್ಲಿಗೆ, ಫೆಡರೇಶನ್ ಮುಸ್ಲಿಂ ವುಮೆನ್ ನ ಸಂಚಾಲಕಿ ಫಾತಿಮಾ ಮಝ್‍ವರ, ನ್ಯಾಷನಲ್ ವಿಮನ್ಸ್ ಫ್ರಂಟ್ ರಾಷ್ಟ್ರೀಯ ಅಧ್ಯಕ್ಷೆ ಎ.ಎಸ್. ಝೈನಬಾ, ಎಸ್ಡಿಪಿಐ ರಾಷ್ಟ್ರೀಯ ಉಪಾಧ್ಯಕ್ಷೆ ನಾಝ್ನೀನ್ ಬೇಗಂ, ವುಮೆನ್ ಇಂಡಿಯಾ ಮೂವ್‍ಮೆಂಟ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಾಸ್ಮೀನ್ ಇಸ್ಲಾಂ, ವುಮೆನ್ ಇಂಡಿಯಾ ಮೂವ್‍ಮೆಂಟ್ ಕರ್ನಾಟಕ ರಾಜ್ಯಾಧ್ಯಕ್ಷೆ ಶಾಹಿದಾ ತಸ್ನೀಂ ಹಾಗೂ ಇನ್ನಿತರ ನಾಯಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

To Top
error: Content is protected !!
WhatsApp chat Join our WhatsApp group