‘ಆರೆಸ್ಸೆಸ್ ಎಂದರೆ ರಾಷ್ಟ್ರೀಯ ಸುಳ್ಳು ಸಂಘ’: ಫ್ರೋ. ಕೆ.ಎಸ್. ಭಾಗವಾನ್

‘2019ರಲ್ಲಿ ಬಿಜೆಪಿ ಮುಕ್ತ ಸರಕಾರ’; ಭವಿಷ್ಯ ನುಡಿದ ಭಾಗವಾನ್
‘ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯಿದೆ.
ಬಿಜೆಪಿ ಅಭ್ಯರ್ಥಿಯ ವಿರುದ್ಧ ಒಂದೇ ಅಭ್ಯರ್ಥಿ ಹಾಕುವಂತೆ ಕರೆ
ವರದಿಗಾರ (ಸೆ.19): ‘ಆರೆಸ್ಸೆಸ್ ಎಂದರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಂದು ಹೇಳಲಾಗುತ್ತಿದೆ ಆದರೆ ನಾನು ಹೇಳುತ್ತೇನೆ, ಆರೆಸ್ಸೆಸ್ ಎಂದರೆ ರಾಷ್ಟ್ರೀಯ ಸುಳ್ಳು ಸಂಘ ಎಂದು ವಿಚಾರವಾದಿ ಫ್ರೋ. ಕೆ.ಎಸ್.ಭಾಗವಾನ್ ಹೇಳಿದ್ದಾರೆ.
ಅವರು ಬೆಂಗಳೂರಿನ ಎನ್ ಜಿಓ ಹಾಲ್ ನಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾವು ‘ಅಸಹಿಷ್ಣುತೆ ಕೊನೆಗೊಳಿಸಿ, ಪ್ಯಾಶಿಸಂ ವಿರುದ್ಧ ಒಂದಾಗಿ’ ಎಂಬ ರಾಷ್ಟ್ರೀಯ ಅಭಿಯಾನ ಅಂಗವಾಗಿ ಹಮ್ಮಿಕೊಂಡಿದ್ದ “ಜುಮ್ಲ ರಿಪಬ್ಲಿಕ್, ಮೋಸದ ಅನಾವರಣ” ಎಂಬ ಡೊಕ್ಯೂಮೆಂಟರಿ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
‘ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯಿದೆ. ಆರೆಸ್ಸೆಸ್ ಹೇಳುವಂತಹ ಮಾತುಗಳನ್ನು ಕಿವಿಗೆ ಹಾಕಿಕೊಳ್ಳಬಾರದು. ಯಾಕೆಂದರೆ ಅವರು ಸುಳ್ಳುಗಳನ್ನು ಹೇಳುತ್ತಾರೆ. ಅವರು ಆಡುವ ಮಾತುಗಳು ಸಂವಿಧಾನಕ್ಕೆ ವಿರೋಧವಾದುದು. ಸಂವಿಧಾನದಲ್ಲಿ ಹೇಳಿರುವ ಮಾತುಗಳು ಸಮಾನತೆ, ಸ್ವಾತಂತ್ರ್ಯ, ಸಹೋದರತ್ವ ಮತ್ತು ಸಾಮಾನ್ಯ ವಿನಯವು ಇವರ ಹಿಂದುತ್ವದಲ್ಲಿ ಮತ್ತು ಮನುಸ್ರೃತಿಯಲ್ಲಿಲ್ಲ ಎಂದು ಹೇಳಿದ್ದಾರೆ.
ನಿಮ್ಮ ವಿದ್ಯಾಭ್ಯಾಸದ ಜೊತೆಗೆ ಸಂವಿಧಾನದ ಆಶಯ, ತತ್ವದ ವಿರುದ್ಧವಿರುವ ಪಕ್ಷ ಮತ್ತು ಸರಕಾರಕ್ಕೆ ಮತ ನೀಡುವುದಿಲ್ಲವೆಂದು ನಿರ್ಣಯ ಕೈಗೊಳ್ಳಬೇಕೆಂದು ಫ್ರೋ. ಕೆ.ಎಸ್.ಭಾಗವಾನ್ ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿಯ ವಿರುದ್ಧ ಒಂದೇ ಅಭ್ಯರ್ಥಿಯನ್ನು ಎದುರಾಳಿಯಾಗಿ ಸ್ಪರ್ಧಿಸಲು ಎಲ್ಲಾ ಪಕ್ಷದವರು ಮುಂದಾಗಬೇಕೆಂದು ಹಾಗೂ ಎಲ್ಲಾ ಐಕ್ಯರಾದರೆ ಅಧಿಕಾರದ ಗದ್ದುಗೆಯಲ್ಲಿರುವ ಬಿಜೆಪಿಯನ್ನು ಸೋಲಿಸಬಹುದೆಂದು ಅವರು ಈ ಸಂದರ್ಭ ರಾಜಕೀಯ ನಾಯಕರಿಗೆ ಒಂದಾಗುವಂತೆ ಕರೆ ನೀಡಿದ್ದಾರೆ. 2019ರಲ್ಲಿ ಬಿಜೆಪಿ ಮುಕ್ತ ಸರಕಾರ ಬರುತ್ತದೆ ಹಾಗೂ ಪ್ರಜಾಪ್ರಭುತ್ವ ಉಳಿಯುತ್ತದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.
ಕಾರ್ಯಕ್ರಮದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಕ್ಯಾಂಪಸ್ ಫ್ರಂಟ್ ರಾಷ್ಟ್ರೀಯ ಅಧ್ಯಕ್ಷ ಪಿವಿ ಶುಹೈಬ್, ರಾಜ್ಯಾಧ್ಯಕ್ಷ ಮುಹಮ್ಮದ್ ತಫ್ಸೀರ್ ಉಪಸ್ಥಿತರಿದ್ದರು.
ವೀಡಿಯೋ ವೀಕ್ಷಿಸಿ:

