ಹನಿ ಸುದ್ದಿ

ಜೇಟ್ಲಿ ಮಾತ್ರವಲ್ಲ ಇಡೀ ಬಿಜೆಪಿ ವಿಜಯ್ ಮಲ್ಯ ಅವರೊಂದಿಗಿನ ಸಂಬಂಧವನ್ನು ಸ್ವಚ್ಛಗೊಳಿಸಬೇಕು: ಬಿಜೆಪಿ ಹಿರಿಯ ನಾಯಕ

ವರದಿಗಾರ (ಸೆ.13):‘ಭಾರತ ತೊರೆಯುವ ಮೊದಲು ನಾನು ಹಣಕಾಸು ಸಚಿವ ಅರುಣ್ ಜೇಟ್ಲಿಯನ್ನು ಭೇಟಿಯಾಗಿದ್ದೆ’ ಎಂದು ಲಂಡನ್ ನ್ಯಾಯಾಲಯದ ಮುಂಭಾಗ ಮಾಧ್ಯಮಗಳೊಂದಿಗೆ ಉದ್ಯಮಿ ವಿಜಯ್ ಮಲ್ಯ ನೀಡಿರುವ ಹೇಳಿಕೆಗೆ ಮಾಜಿ ಕೇಂದ್ರ ಸಚಿವ, ಬಿಜೆಪಿಯ ಹಿರಿಯ ನಾಯಕ ಯಶವಂತ್ ಸಿನ್ಹಾ ಪ್ರತಿಕ್ರಿಯಿಸಿದ್ದಾರೆ.

ಯಶವಂತ್ ಸಿನ್ಹಾ ಈ ಬಗ್ಗೆ ತನ್ನ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸುತ್ತಾ, ‘ಹಣಕಾಸು ಸಚಿವ ಅರುಣ್ ಜೇಟ್ಲಿಯವಷ್ಟೇ ಅಲ್ಲದೆ ಇಡೀ ಭಾರತೀಯ ಜನತಾ ಪಕ್ಷ (ಬಿಜೆಪಿ) ವಿಜಯ್ ಮಲ್ಯ ಅವರೊಂದಿಗಿನ ಸಂಬಂಧವನ್ನು ಸ್ವಚ್ಛಗೊಳಿಸಬೇಕು’ ಎಂದು ಹೇಳಿದ್ದಾರೆ.

To Top
error: Content is protected !!
WhatsApp chat Join our WhatsApp group