ರಾಷ್ಟ್ರೀಯ ಸುದ್ದಿ

ಭಾರತ ತೊರೆಯುವ ಮೊದಲು ಹಣಕಾಸು ಸಚಿವ ಜೇಟ್ಲಿಯನ್ನು ಭೇಟಿಯಾಗಿದ್ದೆ: ವಿಜಯ್ ಮಲ್ಯ

ವರದಿಗಾರ (ಸೆ.12): ‘ನಾನು ಭಾರತವನ್ನು ತೊರೆಯುವ ಮೊದಲು ಹಣಕಾಸು ಸಚಿವ ಅರುಣ್ ಜೇಟ್ಲಿಯನ್ನು ಭೇಟಿಯಾಗಿದ್ದೆ’ ಎಂದು ಉದ್ಯಮಿ ವಿಜಯ್ ಮಲ್ಯ ಹೇಳಿದ್ದಾರೆ.

ಅವರು ಲಂಡನ್ ನ್ಯಾಯಾಲಯದ ಮುಂಭಾಗ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತಾ, ಮೇಲಿನ ಹೇಳಿಕೆಯನ್ನು ನೀಡಿದ್ದಾರೆ.

“ನಾನು ದೇಶ ತೊರೆಯುವ ಮೊದಲು ಕೆಲ ವಿಷಯಗಳ ಬಗ್ಗೆ  ಹಣಕಾಸು ಸಚಿವರನ್ನು ಭೇಟಿಯಾಗಿದ್ದೆ. ನನ್ನ ಸೆಟಲ್ ಮೆಂಟ್ ಪತ್ರಗಳಿಗೆ ಬ್ಯಾಂಕ್ ಗಳು ಆಕ್ಷೇಪಣೆಗಳನ್ನು ಸಲ್ಲಿಸಿದ್ದವು. ಇದು ಸತ್ಯ” ಎಂದು ಮಲ್ಯ ಹೇಳಿಕೆ ನೀಡಿದ್ದರು.

ಈ ಬಗ್ಗೆ ಹಣಕಾಸು ಸಚಿವ ಅರುಣ್ ಜೇಟ್ಲಿ ತನ್ನ ಫೇಸ್ಬುಕ್ ನಲ್ಲಿ ಪ್ರತಿಕ್ರಿಯಿಸಿದ್ದು, ‘ಮಲ್ಯ ಹೇಳಿಕೆಯು ಸತ್ಯಕ್ಕೆ ದೂರವಾಗಿದೆ’ ಎಂದು ಹೇಳಿದ್ದಾರೆ.

To Top
error: Content is protected !!
WhatsApp chat Join our WhatsApp group