ರಾಷ್ಟ್ರೀಯ ಸುದ್ದಿ

ಪ್ರಧಾನಿ ಮೋದಿಯ ನಾಲ್ಕು ವರ್ಷಗಳ ಆಡಳಿತದಲ್ಲಿ ಆಗಿರುವುದು 70 ವರ್ಷಗಳ ಆಡಳಿತದಲ್ಲಿ ಆಗಿರಲಿಲ್ಲ: ವ್ಯಂಗ್ಯವಾಡಿದ ರಾಹುಲ್ ಗಾಂಧಿ

‘ಪ್ರಧಾನಿ ಮೋದಿ ಆಡಳಿತದಲ್ಲಿ ದೇಶಾದ್ಯಂತ ದ್ವೇಷವನ್ನು ಹರಡಲಾಗುತ್ತಿದೆ’

‘ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲಿದ್ದೇವೆ’

ವರದಿಗಾರ (ಸೆ.11): ಪ್ರಧಾನಿ ನರೇಂದ್ರ ಮೋದಿ ತನ್ನ ನಾಲ್ಕು ವರ್ಷಗಳ ಆಡಳಿತದಲ್ಲಿ ಆಗಿರುವುದು 70 ವರ್ಷಗಳ ಆಡಳಿತದಲ್ಲಿ ಆಗಿರಲಿಲ್ಲ ಎಂದು ಪ್ರಧಾನಿಯವರು ಆಗಾಗ್ಗೆ ಹೇಳುತ್ತಿರುವುದು ವಾಸ್ತವದಲ್ಲಿ ನಿಜವೇ ಆಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.

ಕಚ್ಚಾ ತೈಲಗಳ ಬೆಲೆ ಏರಿಕೆಯನ್ನು ವಿರೋಧಿಸಿ ಕಾಂಗ್ರೆಸ್ ಮತ್ತು ಇತರ ಪ್ರತಿಪಕ್ಷಗಳು ದೆಹಲಿಯ ರಾಮಲೀಲಾ ಮೈದಾನದಲ್ಲಿ ಏರ್ಪಡಿಸಿದ್ದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು,ತೈಲ ಬೆಲೆ ಏರಿಕೆ ಮತ್ತು ರಫೇಲ್ ಒಪ್ಪಂದದ ಕುರಿತು ಮೋದಿಯವರ ಮೌನವನ್ನು ಪ್ರಶ್ನಿಸಿದರು.

ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಡಿ ಎಲ್ಲೆಡೆ ದ್ವೇಷವನ್ನು ಹರಡಲಾಗುತ್ತಿದೆ, ಭಾರತೀಯರು ಪರಸ್ಪರ ಹೊಡೆದಾಡಿಕೊಳ್ಳುತ್ತಿದ್ದಾರೆ. ದೇಶವನ್ನು ಒಡೆಯಲಾಗುತ್ತಿದೆ ಎಂದು ಹೇಳಿದರು.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಏಕೀಕೃತ ಪ್ರತಿಪಕ್ಷವು ಬಿಜೆಪಿಯನ್ನು ಸೋಲಿಸಲಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.

To Top
error: Content is protected !!
WhatsApp chat Join our WhatsApp group