ರಾಜ್ಯ ಸುದ್ದಿ

ದೇಶವನ್ನು ಆರ್ಥಿಕವಾಗಿ ದುಸ್ಥಿಗೆ ತಳ್ಳಿದ ಕೇಂದ್ರ ಬಿಜೆಪಿ ಸರಕಾರ ಜನತೆಯನ್ನು ವಂಚಿಸುತ್ತಿದೆ: ಭಾರತ್ ಬಂದ್ ಗೆ ಎಸ್‍ಡಿಪಿಐ ಬೆಂಬಲ

ವರದಿಗಾರ (ಸೆ.09):  ಪೆಟ್ರೋಲ್ ಬೆಲೆ ಗಗನಕ್ಕೇರಿದ್ದು ಕೇಂದ್ರ ಸರಕಾರದ ಜನವಿರೋಧಿ ನೀತಿ ಹಾಗೂ ನಿರ್ಲಕ್ಷ್ಯತನದ ವಿರುದ್ಧ ನಾಳೆಯ (ಸೆ.10) ಭಾರತ್ ಬಂದ್ ಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‍ಡಿಪಿಐ) ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಕೇಂದ್ರದ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಪೆಟ್ರೋಲ್. ಗ್ಯಾಸ್ ಬೆಲೆ ಸತತವಾಗಿ ಏರುತ್ತಿದೆ. ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಗಣನೀಯವಾಗಿ ಕುಸಿದಿದ್ದರೂ ಭಾರತದಲ್ಲಿ ತೈಲ ಹಾಗೂ ಗ್ಯಾಸ್ ಬೆಲೆಯನ್ನು ನಿರಂತರವಾಗಿ ಏರಿಸುತ್ತಿರುವ ಕೇಂದ್ರ ಬಿಜೆಪಿ ಸರಕಾರ ಜನತೆಯನ್ನು ವಂಚಿಸುತ್ತಿದೆ. ದೇಶವನ್ನು ಆರ್ಥಿಕವಾಗಿ ದುಸ್ಥಿಗೆ ತಳ್ಳಿದ ಹಾಗೂ ದೇಶದ ಜನತೆಯಲ್ಲಿ ಭಯ ಹಾಗೂ ಹತಾಶೆಯ ವಾತಾವರಣವನ್ನು ಸೃಷ್ಟಿಸಿದ ಕೇಂದ್ರದ ಆಡಳಿತದಿಂದ ಇಡೀ ದೇಶದ ಜನತೆ ರೋಸಿ ಹೋಗಿದ್ದಾರೆ ಎಂದು ಎಸ್.ಡಿ.ಪಿ.ಐ ಹೇಳಿದೆ.

ಎಲ್ಲಾ ಜತ್ಯಾತೀತ ಶಕ್ತಿಗಳು ಕೇಂದ್ರದ ಜನವಿರೋಧಿ ನೀತಿಯ ವಿರುದ್ಧ ಒಗ್ಗಟ್ಟಾಗಬೇಕೆಂದು ಎಸ್‍ಡಿಪಿಐ ಕರ್ನಾಟಕ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

To Top
error: Content is protected !!
WhatsApp chat Join our WhatsApp group